ಡಿ. ದೇವರಾಜ ಅರಸು ಜನ್ಮ ದಿನಾಚರಣೆ: ಪೂರ್ವ ಭಾವಿ ಸಭೆ

ಹುಕ್ಕೇರಿ : ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ಹಿಂದುಳಿದ ವರ್ಗಗಳ ಹರಿಕಾರ ದಿ”ಡಿ. ದೇವರಾಜ ಅರಸುರವರ 111ನೇ ಜನ್ಮ ದಿನಾಚರಣೆಯನ್ನು ತಾಲೂಕಾ ಮಟ್ಟದಲ್ಲಿ ಆಗಸ್ಟ್ 20, 2026 ರಂದು ಅರ್ಥಪೂರ್ಣವಾಗಿ ಆಚರಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಲು, ಆಚರಣೆ ಸಮಿತಿಯ ಅಧ್ಯಕ್ಷರಾದ ಬಲರಾಮ್ ಕಟ್ಟಿಮನಿ ಅಧ್ಯಕ್ಷತೆಯಲ್ಲಿ ಆಗಸ್ಟ್ 7, 2026 ರಂದು ಬೆಳಿಗ್ಗೆ -11, ಗಂಟೆಗೆ ತಾಲೂಕ್ ಆಡಳಿತಸೌಧ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ಉದ್ದೇಶಿಸಿ ಮಾತನಾಡಿದ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳಾದ ಕೆ.ಬಿ. ದೇವಪ್ಪಗೋಳ ಪ್ರತಿ ವರ್ಷದಂತೆ ಈ ವರ್ಷವೂ ಡಿ ದೇವರಾಜ್ ಅರಸು ರವರ ಜನ್ಮದಿನದ ಪ್ರಯುಕ್ತ ವಿಶೇಷ ಅತಿಥಿ ಉಪನ್ಯಾಸಕರರಿಂದ ಬೋಧನೆ ಮತ್ತು ವಸತಿ ನಿಲಯದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದಾ ಕ್ರೀಡಾಕೂಟ ಕೋ ಕೋ ಕಬಡ್ಡಿ ಇನ್ನಿತರ ಕ್ರೀಡೆಗಳು ಜರುಗುವುದು ಕ್ರೀಡೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಪ್ರಥಮ ದ್ವಿತೀಯ ತೃತೀಯ ವಿದ್ಯಾರ್ಥಿಗಳಿಗೆ ಪುರಸ್ಕಾರ ಮತ್ತು ಪ್ರಶಸ್ತಿ ಪತ್ರ ವಿತರಿಸಲಾಗುವುದು ಹಾಗೂ ಅಡುಗೆ ಸಿಬ್ಬಂದಿಯವರಿಗೂ ಸನ್ಮಾನ ಜರುಗುವುದು ಎಂದು ಹೇಳಿದರು ಈ ಸಂದರ್ಭದಲ್ಲಿ ತಹಸಿಲ್ದಾರರು ಸಮಿತಿ ಅಧ್ಯಕ್ಷರಾದ ಬಲರಾಮ ಕಟ್ಟಿಮನಿ. ಹುಕ್ಕೇರಿ ತಾಲೂಕ್ ಪಂಚಾಯತ್ ಕಾರ್ಯನಿರ್ವಾಹಕರಾದ ಟಿ.ಆರ್ ಮಲ್ಲಾಡದ. ಕೃಷಿ ನಿರ್ದೇಶಕರಾದ ಮಹಾದೇವ್ ಪಟಗುಂದಿ. ಸಮಾಜ ಕಲ್ಯಾಣ ಅಧಿಕಾರಿಗಳಾದ ಪಾವಟೆ ಶ್ರೀಮತಿ ಕೆ ಕೆ ಹಿರೇಮಠ. ಅವಿನಾಶ್ ಹೊಳೆಪ್ಪುಗೋಳ್ ಎಂ ಡಿ ಬಡಿಗೇರ್ ಎಮ್ ಬಿ ಸರಾಪುರಿ ವೀರೇಶ್ ಮೂಡಲಗಿ ಎಂ ಆರ್ ಕಳ್ಳಿಮನಿ ಎಂ ಜಿ ಮಿರ್ಜಾಬಾಯಿ ಜಿ ಎಸ್ ಗಡಾದ್ ಜಿ ಬಿ ನಾಡಗೌಡ ವಿಜಯ್ ಕುಮಾರ್ ನಾಡಗೌಡ್ ರಾಘವೇಂದ್ರ ಭರಮನ್ನವರ್ ಹಾಗೂ ತಾಲೂಕಾಡಳಿತ ವಿವಿಧ ಇಲಾಖೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ವರದಿ : ಸದಾನಂದ ಎಂ

error: Content is protected !!