ನೂತನ SDMC ಅಧ್ಯಕ್ಷರು ಆಗಿ ನಾಗಭೂಷಣ ಚಾರಿ ಆಯ್ಕೆ

ಗೌರಿಬಿದನೂರು ತಾಲ್ಲೂಕು ವಾಟಾದಹೊಸಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಹಾಗೂ ಸದಸ್ಯರ ಆಯ್ಕೆ ಯನ್ನು ದಿನಾಂಕ -08-08-2026 ಶನಿವಾರದಂದು ಶಾಲಾ ಮುಖ್ಯ ಶಿಕ್ಷಕರ ನೇತೃತ್ವದಲ್ಲಿ ಆಯೋಜಿಸಿದ್ದರು

ಮುಖ್ಯೋಪಾಧ್ಯಾಯರು ಹಾಗೂ ಪಾಲಕರೊಂದಿಗೆ ಸಭೆಯನ್ನು ನಡೆಸಿ. S. D. M. C. ಸಮಿತಿ ರಚನೆ ಮಾಡಲಾಯಿತು S. D. M. C. ಅಧ್ಯಕ್ಷರಾಗಿ ನಾಗಭೂಷಣ ಚಾರಿ ಮತ್ತು ಉಪಧ್ಯಕ್ಷರಾಗಿ ರಾಶಿ ರವರು ಆಯ್ಕೆಯಾದರು.

ಸದಸ್ಯರಾಗಿ ಸುಧಾರಾಣಿ, ಅನಿತಾ,ನಾಗರಾಜು,ಶ್ರೀ ರಾಮ್, ರಂಗಯ್ಯ,ಹರೀಶ್, ಆಯಿಷಾ,ದ್ರಾಕ್ಷಾಯಿಣಿ, ತಿಪ್ಪರಾಜು, ರಾಜೇಶ್, ಲಕ್ಷ್ಮಿ,ಗಾಯತ್ರಿ,ರಿಯಾಜ್ ಪಾಷ, ಶಿವಶಂಕರ್, ಗೌತಮಿ ಸರಿತಾ ಶಾಲಾ ಸಮಿತಿ ಸದಸ್ಯರ ಸ್ಥಾನಕ್ಕೆ ಆಯ್ಕೆಗೊಂಡರು

ಈ ವೇಳೆ ಮುಖ್ಯಶಿಕ್ಷಕರಾದ ಕೆ ಏನ್ ಚಂದ್ರಶೇಖರ್ ರವರು ಮಾತನಾಡಿ ನೂತನ ವಾಗಿ ಆಯ್ಕೆ ಯಾಗಿರುವ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಹಾಗೂ ಸದಸ್ಯರಿಗೆ ಧನ್ಯವಾದಗಳನ್ನು ತಿಳಿಸಿದರು ನೂತನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಸದಸ್ಯರು ಶಾಲೆಯ ಅಭಿವೃದ್ಧಿ ಗೋಸ್ಕರ ಶ್ರಮಿಸಬೇಕು ಮತ್ತು ಶಾಲೆಯಲ್ಲಿ ನಡೆಯುವ ಯಲ್ಲಾ ರಾಷ್ಟ್ರಿಯ ಹಬ್ಬಗಳಿಗೆ ಹಾಜರಾಗಿ ಇಲ್ಲಿನ ಕುಂದುಕೊರತೆ ಗಳನ್ನು ಪರಿಶೀಲಿಸಬೇಕು ಎಂದು ತಿಳಿಸಿದರು.

ವರದಿ : ನವೀನ್ ಕುಮಾರ್

error: Content is protected !!