KHPS ಗುಡಸ ಶಾಲೆ ಶಿಕ್ಷಕರು ಪಿ.ಬಿ. ಕಮತೆ ಭರ್ಜರಿ ಗೆಲುವು

ಪದವೀಧರ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷರಾಗಿ ಆಯ್ಕೆ

ಹುಕ್ಕೇರಿ: ಕರ್ನಾಟಕ ರಾಜ್ಯ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (6-8) ಹುಕ್ಕೇರಿ ತಾಲೂಕು ಘಟಕದ 2026-31ನೇ ಸಾಲಿನ ಚುನಾವಣೆಯಲ್ಲಿ ಕೆ.ಎಚ್ .ಪಿ.ಎಸ್. ಗುಡಸ ಶಾಲೆಯ ಶ್ರೀ ಪಿ.ಬಿ. ಕಮತೆ ಅವರು ಅತೀ ಹೆಚ್ಚು ಮತಗಳನ್ನು ಪಡೆದು ತಾಲೂಕು ಅಧ್ಯಕ್ಷರಾಗಿ ವಿಜಯಶಾಲಿಯಾಗಿದ್ದಾರೆ.

ತಾಲೂಕಿನಾದ್ಯಂತ ನಡೆದ ಚುನಾವಣೆಯಲ್ಲಿ ಶಿಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿದ್ದು, ಕಮತೆ ಅವರ ಸೇವೆ ಹಾಗೂ ಹೋರಾಟದ ಮನೋಭಾವವನ್ನು ಮೆಚ್ಚಿ ಬೆಂಬಲ ನೀಡಿದ್ದಾರೆ. ಈ ಗೆಲುವು ಅವರ ಜನಪ್ರಿಯತೆಗೆ ಸಾಕ್ಷಿಯಾಗಿದೆ.

ಗೆಲುವಿನ ಬಳಿಕ ಮಾತನಾಡಿದ ಅವರು, ತಮ್ಮನ್ನು ಬೆಂಬಲಿಸಿದ ಎಲ್ಲ ಶಿಕ್ಷಕ ಬಂಧುಗಳಿಗೆ ಕೃತಜ್ಞತೆ ಸಲ್ಲಿಸಿದರು. ಪದವೀಧರ ಶಿಕ್ಷಕರ ಸಮಸ್ಯೆಗಳನ್ನು ಸರ್ಕಾರದ ಮಟ್ಟದಲ್ಲಿ ಪರಿಹರಿಸಲು ಹಾಗೂ ಸಂಘವನ್ನು ಬಲಿಷ್ಠಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ತಾಲೂಕಿನ ವಿವಿಧ ಶಾಲೆಗಳ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕ ಸಂಘದ ಪದಾಧಿಕಾರಿಗಳು ಅವರನ್ನು ಅಭಿನಂದಿಸಿದ್ದು, ಗುಡಸ ಸೇರಿದಂತೆ ಹಲವೆಡೆ ಸಿಹಿ ಹಂಚಿ ಸಂಭ್ರಮಿಸಲಾಯಿತು.

error: Content is protected !!