ಪ್ರತಿ ತಿಂಗಳ ಹಾಜರಾತಿ ಹಾಕಲು ಹಾಗೂ ಸಂಬಳಕ್ಕೆ ಅಡುಗೆ ಸಹಾಯಕ ರಿಂದ 20ಸಾವಿರ ಹಣ ಪಡೆಯುತಿದ್ದ ವಾರ್ಡನ್ ಲೋಕಾಯುಕ್ತ ಬಲೆಗೆ

ಕರ್ನಾಟಕ ಲೋಕಾಯುಕ್ತ ಅಧೀಕ್ಷಕರು ಕಲಬುರಗಿ.
ಎಸ್‌.ಪಿ – ಬಿಕೆ. ಉಮೇಶ್. ಮಾರ್ಗದರ್ಶನದಲ್ಲಿ ಮಿಂಚಿನ ಕಾರ್ಯಚರಣೆ

ಕಲಬುರ್ಗಿ ಮೆಟ್ರಿಕ್ ನಂತರ ಸ್ನಾತಕೋತರ ಬಾಲಕರ ವಸತಿ ನಿಲಯ ವಿಶ್ವವಿದ್ಯಾಲಯ ಹಾಸ್ಟೆಲ್ ವಾರ್ಡನ್ ಶಿವಶರಣಪ್ಪ ರವರಿಗೆ ಅಡುಗೆ ಸಹಾಯಕರು ಡಿ ಗ್ರೂಪ್ ನೌಕರರು ತನ್ನ ಹಾಜರಾತಿ ಪ್ರತಿ ತಿಂಗಳ ನೀಡಬೇಕಾದರೆ ಎಲ್ಲಾ ಅಡುಗೆ ಸಹಾಯಕರು ವಾರ್ಡನ್ ಗೆ ಪ್ರತಿತಿಂಗಳ 20.000/-ಹಣವನ್ನು ಕೊಡಬೇಕು. ಹಣ ಕೊಡಲಿಲ್ಲ ಅಂದರೆ ಹಾಜರಾತಿ ಕೊಡುವುದಿಲ್ಲ. ಮತ್ತು ಸಂಬಳ ಮಾಡಲ್ಲ ಹಾಗಂತ ನೌಕರರು ಹೆದರಿ ತಮ್ಮ ಸಂಬಳ ದಿಂದ ವಾರ್ಡನ್ ಗೆ ಪ್ರತಿ ತಿಂಗಳು 20ಸಾವಿರ ಹಣ ನೀಡುತಿದ್ದರು ಬೇಸತ್ತ ಒಬ್ಬ ಅಡುಗೆ ಸಹಾಯಕ ಶ್ರೀಮಂತ ಈ ಕುರಿತು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದರು.

ದೂರು ಆಧಾರಿಸಿದ ಲೋಕಾಯುಕ್ತ ಅಧಿಕಾರಿಗಳು ಹಾಜರಾತಿಗಾಗಿ ಲಂಚದ ಹಣ ಪಡೆಯುವಾಗ ವಾರ್ಡನ್ ನನ್ನು ರೆಡ್ ಹ್ಯಾಂಡ್ ಆಗಿ ವಶಕ್ಕೆ ಪಡೆದರು.

ಲೋಕಾಯುಕ್ತ ಅಧಿಕಾರಿಗಳು. ಡಿವೈಎಸ್ಪಿ ಗೀತಾ ಬೆನಾಳ ಮತ್ತು ತಂಡ ದಿಂದ ತನಿಖೆ ಚುರುಕಾಗಿ ನಡೆಯುತ್ತಿದ್ದು ನಂತರ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುವುದು ಎಂಬ ಮಾಹಿತಿ ಲಭ್ಯ ವಾಗಿದೆ.

ಡಿವೈಎಸ್ಪಿ ಗೀತಾ ಬೆನಾಳ . ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ ಬಸವರಾಜ್. ಪ್ರದೀಪ್. ಫೈಮುದ್ದಿನ್. ರೇಣುಕಮ್ಮ. ಪೌಡಪ್ಪ, ಸಂತೋಷಮ್ಮ. ಗುಂಡಪ್ಪ. ಮತ್ತು ಸಿಬ್ಬಂದಿಗಳು ಸ್ಥಳದಲ್ಲಿ ಇದ್ದರು.

ಬ್ಯುರೋ ರಿಪೋರ್ಟ್ jk news ಕನ್ನಡ ಕಲಬುರ್ಗಿ