ವಖ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ SDPI ವತಿಯಿಂದ ಜಂಟಿ ಪಾರ್ಲಿಮೆಂಟ್ ಸಮಿತಿಗೆ ಹಕ್ಕೊತ್ತಾಯ

ಬೀದರ್ ಜಿಲ್ಲೆಯ ಹುಮನಾಬಾದ ಪಟ್ಟಣದ ತಹಸೀಲ್ದಾರ್ ಕಛೇರಿ ಆವರಣದಲ್ಲಿ ಜಿಲ್ಲಾ sdpi ಪಕ್ಷದ ವತಿಯಿಂದ ವಕ್ಫ್ 2024ಬಿಲ್ ಆಕ್ಷೇಪಿಸಿ ಭಿತ್ತಿ ಪತ್ರ ಪ್ರದರ್ಶಿಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ವಿರೋಧ ವ್ಯಕ್ತ ಪಡಿಸಿದರು ವಖ್ಫ್ ಆಸ್ತಿ ಮುಸ್ಲಿಮ್ ಸಮುದಾಯಕ್ಕೆ ಒಳ ಪಟ್ಟಿದ್ದು ಡಾ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಸಂವಿಧಾನದಲ್ಲಿ ನಮ್ಮ ಆಸ್ತಿ ರಕ್ಷಣೆಗೆ ವಕ್ಫ್ ಬೋರ್ಡ್ ಇದೆ ಈ ಹಕ್ಕು ನಾವು ಕಸಿದು ಕೊಳ್ಳಲು ಬಿಡುವುದಿಲ್ಲ ನಮ್ಮ ಆಸ್ತಿ ನಮ್ಮ ಹಕ್ಕು ವಕ್ಫ್ ಆಸ್ತಿ ಸರ್ಕಾರದ ಸ್ವತ್ತಲ್ಲ ನಮ್ಮ ಹಿರಿಯ ಆಸ್ತಿ ಎಂದು ಪಕ್ಷದ ಮುಖಂಡರು ಹಾಗೂ ದಲಿತ ಮುಖಂಡರು ಪ್ರತಿಭಟನೆ ಉದ್ದೇಶಿಸಿ ಮಾತನಾಡಿದರು, ನಂತರ ತಹಸೀಲ್ದಾರ್ ಮೂಲಕ ಜಂಟಿ ಪಾರ್ಲಿಮೆಂಟ್ ಸಮಿತಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಲಾಯಿತು.

ಈ ಸಂಧರ್ಭದಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಶೇಕ್ ಮಕ್ಸುದ್, ಉಪಾಧ್ಯಕ್ಷ ಸೈಯದ್ ಶಫಿಯುದ್ದಿನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೈಯದ್ ಅಕ್ಬರ್, ತೌಹೀದ್ ಖಾದ್ರಿ, ಭೀಮ್ ಆರ್ಮಿ ಅಧ್ಯಕ್ಷ ಅನಿಲ್ ದೊಡ್ಡಿ, ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಸತೀಶ್ ರತ್ನಾಕರ್, ಅಕ್ರಮ್ ದುಬಲಗುಂಡಿ, ಸದ್ದಾಂ ಸೌದಾಗರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.