ಬೀದರ್ ಬ್ರಿಮ್ಸ್ ನಿರ್ದೇಶಕರ ಹುದ್ದೆಗೆ ಪೈಪೋಟಿ…?

ಬೀದರ್ ಜಿಲ್ಲೆಯ ಹೆಸರದಂತ ವೈದ್ಯಕೀಯ ವಿಜ್ಞಾನ ಸಂಸ್ಥೆ ಬ್ರಿಮ್ಸ್ ಆಸ್ಪತ್ರೆ ಬೀದರ್, ಇಂದು ಕೆಲವೊಬ್ಬರಿಗೆ ತಲೆನೌವುಂಟಾಗಿದೆ ಎಂದು ಕೇಳಿ ಬರುತ್ತಿದೆ, ದಿನಕ್ಕೊಂದು ದೂರಿನ ಸುರಿಮಳೆಯಾದರು, ಅಂತಹದ್ರಲ್ಲಿ ನಿರ್ದೇಶಕರ ಹುದ್ದೆಗೆ, ಹದ್ದಿನ ಕಣ್ಣಿಟ್ಟಿದಾರೆ ಮತ್ತು ಒಳ ಒಳಗೆ ಪೈಪೋಟಿ ನಡೀತಾ ಇದೆ ಎಂದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ನಿರ್ದೇಶಕರ ಹುದ್ದೆಯ ಉಪಸ್ಥಿತಿಯಲ್ಲೆ, ನನಗೆ ನಿನಗೆ ಎಂದು ಹುದ್ದೆಯ ಸಲುವಾಗಿ, ಜಗ್ಗಿನ ಜಗಳ ನಡೆಯುತ್ತಲೇ ಇದೆ. ಈ ಕುರಿತು ಈಗಾಗಲೇ ಸ್ಪಷ್ಟವಾಗಿ ಕೆಲವು ಸಿಬ್ಬಂದಿವರ್ಗಗಳಿಂದ ಕೇಳಿ ಬರುತ್ತಿದೆ, ಹೌದು ಈ ಎಲ್ಲದರ ಮಧ್ಯೆ ಕಂಠಕ ಯಾರಿಗೆ ಎಂದು ತಲೆನೌವುಂಟಾಗಿದೆ.?

 

ಕೆಲವೊಬ್ಬರು ಹೇಳುವ ಸ್ಥಿತಿ ನೋಡಿದರೆ ನಿರ್ದೇಶಕರು ದಾರಿ ತಪ್ಪಿಸುವ ಕೆಲಸಗಳು ಮಾಡುತ್ತಿರುತ್ತಾರೆ, ಏನಾದರೂ ನ್ಯಾಯ ಪರ ಮಾತಾಡಿದರೆ ಕೇಳಲು ಭೇಟಿ ಕೊಟ್ಟರೆ ದಾರಿ ತಪ್ಪಿಸಿ ಕಳಿಸುತ್ತಾರೆ, ಇದು ಸಂಘಟನೆ ಕೆಲವು ಮುಖಂಡರ ಆರೋಪವಾಗಿದೆ, ಇನ್ನೂ ಭ್ರಷ್ಟಾಚಾರ ಅಂತು ಕೇಳಲೇಬಾರದು ಹೀಗೆ ಸುಮಾರು ವಿಷಯಗಳಲ್ಲಿ ನಾವು ದ್ವನಿ ಎತ್ತಿದೇವೆ ಆದರೆ ಯಾವುದೇ ಪರಿಣಾಮ ಬೀಳುವುದಿಲ್ಲ ಎಂದು ತಿಳಿಸಿದರು, ಪರಿಣಾಮ ಬೀಳುವುದಿಲ್ಲ ಎಂದರೆ ಇದರಲ್ಲಿ ಯಾರೆಲ್ಲ ಸೇರಿದ್ದಾರೆ ಹಾಗಾದರೆ ದೊಡ್ಡ ಅಧಿಕಾರಿ ಕೂಡ ಜೊತೆಗಿದ್ದಿದಾರ,.?

ಯಾಕೆ ಇಷ್ಟೊಂದು ಜನರಿಗೆ ಕಷ್ಟವಾದರೂ ಕಿವಿ ಕೊಡದ ನಿರ್ದೇಶಕರು ಬೇಜವಾಬ್ದಾರಿಯ ಕೆಲಸ ಮಾಡಲು ಕಾರಣವೇನು ಎಂದು ಸಾರ್ವಜನಿಕರ ಪ್ರಶ್ನೆಯಾಗಿದೆ,

ಬಹಳ ಜನರ ಗೋಳು ಕೂಡ ಇದೆ,

ಒಂದೊಂದು ತರಹ ಒಂದೊಂದೂ ವಿಷಯದ ಬಗ್ಗೆ ದೂರುಗಳಿವೆ, ಇದಕ್ಕೆ ಯಾರು ಕಿವಿ ಗೋಡುವವರು,opd ನಲ್ಲಿ ಯಾರು ವೈದ್ಯರು ಸಿಗುವುದಿಲ್ಲ ಅವರದೇ ಖಾಸಗಿ ಆಸ್ಪತ್ರೆಯಲ್ಲಿ ವ್ಯಸ್ತರಾಗಿ ಕೆಲಸ ನಿರ್ವಹಿಸುವುದರಲ್ಲಿ ಬಿಜಿ ಇರುವುದು ನಾವು ಕಾಣಿದ್ದೇವೆ,

ಹೀಗೆ ಒಂದೊಂದು ಹೇಳಿಕೊಂಡು ಹೋದರೆ ಕಮ್ಮಿಯಾಗದ ದೂರುಗಳು,

ಆಸ್ಪತ್ರೆಯ ನಿರ್ದೇಶಕರು ದೂರುಗಳ ಸರಮಾಲೆ ಹಾಕಿಕೊಂಡು ಓಡಾಡುವುದು ಕಂಡು ಬಂದಿದೆ,

ಒಂದು ಸಾರಿಯಾದರೂ ಆಸ್ಪತ್ರೆಗೆ ಭೇಟಿ ನೀಡುವುದಿಲ್ಲ ಚಿಕಿತ್ಸೆ ಹೇಗೆ ನಡೆಯುತ್ತದೆ ಎಂದು ರೋಗಿಗಳ ಜೊತೇಗೆ ಕೂಡ ಮಾತಾಡುವುದಿಲ್ಲ, ಟೆಂಡರ್ ಕೆಲಸ, ಹೊಸಬ್ಬರಿಗೆ ಸೇರಿಸಿಕೊಳ್ಳುವುದರಲ್ಲಿ ಮತ್ತು ಬಹಳ ಜಗ್ಗಗಳ ಜೂಟಾಟದಲ್ಲಿ ವ್ಯಸ್ತರಾಗಿದ್ದಾರೆ ಎಂದು ಹೋರಾಟಗಾರರು ಆಕ್ರೋಶವನ್ನು ಹೊರ ಹಾಕೀದ್ದಾರೆ, ಇದೆಲ್ಲ ಮೇಲಧಿಕಾರಿಯವರಿಗೆ ಯಾಕೆ ಕಾಣಿಸುತ್ತಿಲ್ಲ ಎಂದು ಜನರ ಪ್ರಶ್ನೆಯಾಗಿದೆ ಇದಕ್ಕೆಲ್ಲಾ ಉತ್ತರ ಯಾರು ನೀಡಬೇಕು ಎನ್ನುವ ಪ್ರಶ್ನೆಗಳು ಅಧಿಕಾರಿಗಳಿಗೆ ಕಾಡುತ್ತಿವೆ..?

ಹೀಗೆ ಎಲ್ಲದರ ಮಧ್ಯ ನಿರ್ದೇಶಕರ ಹುದ್ದೆಗೆ ಕಡಿವಾಣ ಬೀಳುತ್ತ ಅಥವಾ ಕಾಣದ ಹಾಗೆ ಬದಲಾವಣೆಯಾಗುತ್ತರ, ಎಂದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

 

ವರದಿ : ಪ್ರದೀಪ್ ಕುಮಾರ್ ದಾದನೂರ್ 

error: Content is protected !!