ಮಳೆಗೆ ಈಜು ಕೊಳ ಆಗಿರುವ ಶಾಲಾ ಆವರಣ ನೀರಿನಲ್ಲೇ ಮಕ್ಕಳ ಓಡಾಟ ದುಬಲಗುಂಡಿ ಸರ್ಕಾರಿ ಶಾಲೆಯ ಪರಿಸ್ಥಿತಿ ಇದು

ಹುಮನಾಬಾದ : ತಾಲೂಕಿನ ದುಬಲಗುಂಡಿ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಪರಿಸ್ಥಿತಿ ನೋಡಿ ನೋಡೋಕೆ ಶಾಲಾ ಕಟ್ಟಡ ದೊಡ್ಡದು ಶಾಲೆಯ ಗೆಟ್ ಹೊರಗೆ ಸಿಸಿ ರಸ್ತೆ ಆದರೆ ಒಳಗೆ ನೋಡಿದ್ರೆ ಮಳೆಗೆ ನೀರು ನಿಂತು ಈಜು ಕೊಳದಂತೆ ಆಗಿದೆ, ಶಾಲೆಗೆ ಬರುವ ಮಕ್ಕಳು ಶಾಲೆಯಲ್ಲಿ ಹೋಗಲು ಶಾಲೆ ಯಿಂದ ಇoಟ್ರೋಲ್ ಗೆ ಹೊರಗೆ ಬಂದ್ರು ನೀರಿನಲ್ಲಿ ನಡೆದುಕೊಂಡೆ ಬರುತಿದ್ದಾರೆ ಆಟದ ಸಮಯದಲ್ಲಿ ಮಕ್ಕಳು ನೀರಿನಲ್ಲೇ ಆಡುತ್ತಿರುವುದು ಕೂಡ ಕಂಡು ಬಂದಿದೆ,

ಸ್ವಚ್ಛ ಭಾರತದ ಸಂಕಲ್ಪ ಹೊಂದಿರುವ ಸರ್ಕಾರ ಆಶಾ ಕಾರ್ಯಕರ್ತೆಯರು ಆರೋಗ್ಯ ಸಿಬ್ಬಂದಿಗಳನ್ನ ಮನೆಗಳಿಗೆ ಕಳುಹಿಸಿ ಡೆಂಗೀ ಹರಿಯದಂತೆ ನೋಡಿ ಕೊಳ್ಳಲು ಮನೆಗಳಿಗೆ ಭೇಟಿ ನೀಡಿ ಬ್ಯಾರೆಲ್ ಚೆನ್ನಾಗಿ ತೊಳೆದು ಕೊಳ್ಳಿ ನೀರು ನಿಲ್ಲದಂತೆ ಎಚ್ಚರ ವಹಿಸಿ ಎಂದು ಜಾಗೃತಿ ಮೂಡಿಸುತಿದ್ದಾರೆ,  ಒಳ್ಳೆಯ ವಿಚಾರ ಆದರೆ ಪ್ರಾಥಮಿಕ ಶಾಲೆಗೆ ಚಿಕ್ಕ ಚಿಕ್ಕ ಮಕ್ಕಳು ಶಿಕ್ಷಣ ಪಡೆಯಲು ಬರ್ತಾರೆ ಅದರಲ್ಲಿ ಸರ್ಕಾರಿ ಶಾಲೆಗೆ ಬಡವರ ರೈತರ ಮಕ್ಕಳು ಬರ್ತಾರೆ ಇಲ್ಲಿ ಎರೆಡು ದಿನಗಳಿಂದ ನೀರು ನಿಂತಿದ್ದು ಮಕ್ಕಳ ಆರೋಗ್ಯದಲ್ಲಿ ಸಮಸ್ಯೆ ಆದರೆ ಅಥವಾ ಏನಾದ್ರೂ ಹೆಚ್ಚು ಕಮ್ಮಿ ಯಾದ್ರೆ ಇದಕ್ಕೆ ಯಾರು ಹೊಣೆ..? ಸರ್ಕಾರ ವೊ..? ಸಂಬಂಧ ಪಟ್ಟ ಶಿಕ್ಷಣ ಇಲಾಖೆಯೋ..? ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳೋ..? ಅದೇನೇ ಆಗಲಿ ಈಗಲಾದರೂ ಸಂಬಂಧಪಟ್ಟ ಅಧಿಕಾರಿ ಜನಪ್ರತಿನಿದಿನಗಳು  ಎಚ್ಚೆತ್ತುಕೊಂಡು ಈಕಡೆ ಗಮನ ಹರಿಸಿ ಶಾಲೆ ಆವರಣದ ಸ್ವಚ್ಛತೆಗೆ ಮುಂದಾಗ್ತಾರಾ ಇಲ್ಲ ಅನ್ನೋದನ್ನೆ ಕಾದು ನೋಡಬೇಕಾಗಿದೆ.

error: Content is protected !!