ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪೇಸ್‌ಬುಕ್ ನಲ್ಲಿ ಅವಹೇಳನಕಾರಿ ಪೋಸ್ಟ್ ದೂರು ದಾಖಲು

ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಮೂದೇನೂರ್ ಗ್ರಾಮದ ನಿವಾಸಿ ವಸಂತಕುಮಾರ ಹಾದಿಮನಿ ವಿರುದ್ಧ ದೂರು ನೀಡಿದ ಕಾಂಗ್ರೆಸ್ ಪಕ್ಷದ ಎಸ್.ಸಿ ಘಟಕದ ಅಧ್ಯಕ್ಷ ಚಿದಾನಂದ ದೊಡಮನಿ.

ವಸಂತಕುಮಾರ ಹಾದಿಮನಿ ಎಂಬ ವ್ಯಕ್ತಿ ಮುದೇನೂರ ನಿವಾಸಿಯಾಗಿದ್ದು, ಎಂಬ ವ್ಯಕ್ತಿ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಇವರ ವಿರುದ್ಧ ಪೇಸ್‌ಬುಕ್ ನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ್ದು, ಇದೇ ತರಹ ಈ ವ್ಯಕ್ತಿ ಹಲವಾರು ಬಾರಿ ಸಮಾಜದಲ್ಲಿ ಅಶಾಂತಿಯನ್ನು ಸೃಷ್ಟಿಸುವ ಹಾಗೂ ಪ್ರಚೋದನಕಾರಿ ಬರಹಗಳನ್ನು ತಮ್ಮ ಪೇಸ್‌ಬುಕ್ ಅಕೌಂಟ್ ಆದಂತಹ ವಸಂತಕುಮಾರ ಹಾದಿಮನಿ ಇದರಲ್ಲಿ ಹಾಕಿರುತ್ತಾನೆ.

ಆದ್ದರಿಂದ ಇತನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಈತ ಬಹಿರಂಗವಾಗಿ ಸಿದ್ದರಾಮಯ್ಯನವರಿಗೆ ಕ್ಷಮೆಯಾಚಿಸಬೇಕು, ಇಲ್ಲವಾದರೆ ನಾವು ಎಸ್.ಸಿ ಘಟಕದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಕಾಂಗ್ರೆಸ್ ಮುಖಂಡರು ಬೃಹತ್ ಪ್ರಮಾಣದಲ್ಲಿ ಪ್ರತಿಭಟಣೆ ಮಾಡಬೇಕಾಗುತ್ತದೆ ಎಂದು ರಾಮದುರ್ಗ PSI ಸುನೀಲಕುಮಾರ್ ನಾಯಕ ಈವರಿಗೆ ಮನವಿ ನೀಡಿದರು.

ಈ ಸಂಧರ್ಭದಲ್ಲಿ ಕಾಂಗ್ರೆಸ್ ಪಕ್ಷದ ಎಸ್.ಸಿ ಘಟಕದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.

ವರದಿ : Md sohel ಬೈರಾಕದಾರ್

error: Content is protected !!