ಹುಮನಾಬಾದ : ತಾಲೂಕಿನ ದುಬಲಗುಂಡಿ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಮಳೆಗೆ ನೀರು ನಿಂತು ಶಾಲಾ ಮಕ್ಕಳು ತೊಂದರೆ ಅನುಭವಿಸುತ್ತಿರುವ ಕುರಿತು ನಮ್ಮ jk ಕನ್ನಡ news ನಲ್ಲಿ ವರದಿ ಯಾಗಿತ್ತು ಇದಕ್ಕೆ ಸ್ಪಂಧಿಸಿದ ಗ್ರಾಮ ಪಂಚಾಯತಿ ಅಧ್ಯಕ್ಷ ನಾಗರಾಜ ಭೋಜಗುಂಡಿ ಹಾಗೂ ಪಂಚಾಯತಿ ಅಭಿವೃದ್ಧಿ ಅಧಿಕಾರಿ ರಘುನಾಥ್ ಚಂದಾ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ವೀಕ್ಷಣೆ ಮಾಡಿ ತಕ್ಷಣವೇ ಇದನ್ನ ಸರಿ ಪಡಿಸುವುದಾಗಿ ತಿಳಿಸಿದರು, ಗ್ರಾಮದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿವೆ ಶಾಲಾ ಆವರಣ ಎದುರು ಕೆಸರು ಗದ್ದೆ ಆಗಬಾರದು ಎಂದು ಸಿಸಿ ರಸ್ತೆ ನಿರ್ಮಾಣ ಮಾಡಿದ್ದೀವಿ ಹಾಗಾಗಿ ತಗ್ಗು ಆಗಿರುವುದರಿಂದ ನೀರು ನಿಂತಿವೆ ತಕ್ಷಣವೇ ಇದನ್ನ ಸರಿ ಪಡಿಸುತ್ತೇವೆ ಎಂದು ಗ್ರಾಮ ಪಂಚಾಯತಿ ಅಧ್ಯಕ್ಷ ನಾಗರಾಜ್ ಭೋಜಗುಂಡಿ ಹೇಳಿದರು, ಸ್ಥಳದಲ್ಲಿ ಗ್ರಾಮ ಪಂಚಾಯತಿ ಸದಸ್ಯ ಪ್ರಭು ನೆಳಗಿ, ಶಿಕ್ಷಣ ಇಲಾಖೆಯ CRP ಹಾಗೂ ಶಾಲೆಯ ಪ್ರಾಂಶುಪಾಲರು ಮತ್ತು ಸ್ಥಳೀಯರಾದ ಲೊಕೇಶ್ ಭೋಲಾ, ಮಾರುತಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.