ವಿಜಯಪುರ: ಜಿಲ್ಲಾ ಆದಿ ಬಣಜಿಗ ಸಮಾಜದ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಗು. ಬಿಜ್ಜರಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಸಮಾಜದ ಗೌರವಾಧ್ಯಕ್ಷ ಸುರೇಶ ಗು. ಗಚ್ಚಿನಕಟ್ಟಿ, ಪಿ.ಕೆ. ಚಿಂಚಲಿ, ಸುರೇಶ ಬಿ. ಪರಗೊಂಡೆ, ಅಶೋಕ ಟೆಂಗಳೆ, ಗಂಗಾಧರ ಸಂಬಣ್ಣಿ ಸೇರಿದಂತೆ ಪದಾಧಿಕಾರಿಗಳು ಹಾಗೂ ಹಿರಿಯ ಸದಸ್ಯರು ಉಪಸ್ಥಿತರಿದ್ದರು.
ನೂತನ ಅಧ್ಯಕ್ಷ ಮಲ್ಲಿಕಾರ್ಜುನ ಬಿಜ್ಜರಗಿ ಮಾತನಾಡಿ, ಸಮಾಜದ ಏಕತೆ, ಶಿಕ್ಷಣ ಪ್ರಸಾರ, ಯುವಕರ ಪ್ರಗತಿ ಹಾಗೂ ಬಡ ಕುಟುಂಬಗಳ ಏಳಿಗೆಗಾಗಿ ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ತಿಳಿಸಿದರು. ಹಿರಿಯರ ಮಾರ್ಗದರ್ಶನ ಮತ್ತು ಸದಸ್ಯರ ಸಹಕಾರದೊಂದಿಗೆ ಸಮಾಜವನ್ನು ಬಲಿಷ್ಠ ಹಾಗೂ ಸಂಘಟಿತಗೊಳಿಸಲು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದರು.
ವರದಿ : ಅಝೀಜ್ ಪಠಾಣ
