ಔರಾದ್ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಯುಧ ಪೂಜೆ

ಬೀದರ್ ಜಿಲ್ಲೆಯ ಔರದ್ ತಾಲೂಕಿನಲ್ಲಿ ಸಾವ೯ಜನಿಕ ಆಸ್ಪತ್ರೆಯಲ್ಲಿ ಇಂದು ನವರಾತ್ರಿ ಹಬ್ಬದ ನಿಮಿತ್ಯ ಆಯುಧ ಪೂಜೆ ನೆರವೇರಿಸಲಾಯಿತು

ನವರಾತ್ರಿ ವಿಜಯೋತ್ಸವ ನಿಮಿತ್ಯ ಪಟ್ಟಣದ ಸರಕಾರಿ ಸಾವ೯ಜನಿಕ ಆಸ್ಪತ್ರೆಯಲ್ಲಿ ಆಯುಧ ಪೂಜೆ ತಾಲೂಕು ವೈದ್ಯಾಧಿಕಾರಿ ಡಾ. ಗಾಯತ್ರಿ ನೇತ್ರತ್ವದಲ್ಲಿ ವೈಭವದಿಂದ ಆಚರಿಸಲಾಗಿದೆ. ಇದೇ ಸಂದರ್ಭದಲ್ಲಿ ಮಾತನಾಡಿದ ವೈದ್ಯಾಧಿಕಾರಿಗಳು ನಾವು ಎಲ್ಲಾ ಸಾರ್ವಜನಿಕರ ಒಳ್ಳೆಯದಾಗಲಿ ಎಂಬ ಹಿತದೃಷ್ಟಿಯಿಂದ ಈ ಪೂಜೆಯನ್ನು ಪ್ರತಿ ವರ್ಷ ಮಾಡುತ್ತಾ ಬಂದಿರುತ್ತೇವೆ ಹೇಗೆ ಮನೆಯಲ್ಲಿ ದೇವಿಯನ್ನು ಆರಾಧನೆ ಮಾಡುತ್ತಿರೋ ಹಾಗೆಯೇ ನಾನು ನಮ್ಮ ಕೆಲಸದಲ್ಲಿ ಕೆಲಸ ಮಾಡುವಂತಹ ಯಂತ್ರಗಳಲ್ಲಿ ದೇವಿಯನ್ನು ಕಾಣುತ್ತೇವೆ. ಆದ್ದರಿಂದ ಪ್ರತಿವರ್ಷ ನವರಾತ್ರಿಯಲ್ಲಿ ಆಯುಧ ಪೂಜೆಯನ್ನು ಮಾಡುತ್ತೇವೆ ದೇವಿ ಎಲ್ಲರ ಕಷ್ಟಗಳನ್ನು ದೂರ ಮಾಡಿ ಸುಖದಿಂದ ಇರಲು ಪ್ರಾರ್ಥನೆ ಮಾಡುತ್ತೇವೆ ನಮ್ಮನ್ನು ನಂಬಿ ಬಂದಂತಹ ರೋಗಿಗಳಿಗೆ ಆದಷ್ಟು ನಮ್ಮಿಂದ ಗುಣಮುಖರಾಗಿ ಹೊರ ಹೋಗುವಂತೆ ವಿನಯ ಪೂರ್ವಕವಾಗಿ ಆ ಮಾತೆಯಲ್ಲಿ ಬೇಡಿಕೊಳ್ಳುತ್ತೇವೆ ದೇವಿಯ ಪೂಜೆಯನ್ನು ಡಾ. ಜಾಂತೆ ಧಾಮಿ೯ಕ ವಿಧಾನದಂತೆ ಪೂಜೆಯನ್ನು ಸಂಭ್ರಮದಿಂದ ನೆರವೇರಿಸಿ ಕೊಟ್ಟರು.

ಭವಾನಿ ಮಾತೆಯ ಪೂಜೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಅಲ್ದೆ ಆಸ್ಪತ್ರೆಯ ಸಿಬಂದಿಯವರು ಹಾಜರಿದ್ದು ಪೂಜೆಗೆ ಸಾಥ ನೀಡಿದರು. ಇದೇ ಸಂದರ್ಭದಲ್ಲಿ ಆಸ್ಪತ್ರೆಯ ಎಲ್ಲಾ ಸಿಬಂದಿಯವರಿಗೆ ಸನ್ಮಾನಿಸಿ ಪ್ರತಿಯೊಬ್ಬರಿಗೂ ಐಡಿ ಕಾಡ೯ ನೀಡುವದರೊಂದಿಗೆ ಸಿಹಿ ನೀಡವ ಮೂಲಕ ಪೂಜೆ ನೆರವೇರಿಸಲಾಯಿತು. ಪೂಜೆಯಲ್ಲಿ ಭಾಗವಹಿಸಿದವರಿಗೆ ಭೋಜನದ ವ್ಯವಸ್ಥೆ ಮಾಡಿದರು. ಇದೇ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯರುಗಳಾದ ಡಾಕ್ಟರ್ ಗಾಯಿತ್ರಿ ಸಿಎಂಓ ಡಾಕ್ಟರ್ ವಿನಾಯಕ್ ಡಾಕ್ಟರ್ ಶಿಲ್ಪಾ ಶಿಂದೆ ಡಾಕ್ಟರ್ ಜ್ಯೋತಿ ಡಾಕ್ಟರ್ ಅಕ್ಷತಾ ಅಲ್ಲದೆ ಸಿಬ್ಬಂದಿಗಳಾದ ಹನುಮಂತ ಬುಟ್ಟೆ ಸುರೇಶ್ ಮೇತ್ರಿ ಕಿಶನ್ ಜಾದವ್ ಮನೋ ರಾಜಣ್ಣ ಇಂದಿರಾ ಸಾರ್ವಜನಿಕ ಆಸ್ಪತ್ರೆಯ ಎಲ್ಲಾ ಸಿಬ್ಬಂದಿ ವರ್ಗದವರು ಹಾಜರಿದ್ದರು ಆಾಯುದ್ಧ ಪೂಜೆಯನ್ನು ಅತಿ ಯಶಸ್ವಿಯಾಗಿ ನೆರವೇರಿಸಿ ಎಲ್ಲರೂ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿದರು.

 

ವರದಿ : ರಾಚಯ್ಯ ಸ್ವಾಮಿ