ಮಾಜಿ ಸಚಿವ ಔರಾದ(ಬಿ) ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ಅ.9ರಂದು ಮಹಾರಾಷ್ಟ್ರ ರಾಜ್ಯದ ಪ್ರಸಿದ್ಧ ದೇವಸ್ಥಾನ ತುಳಜಾಪುರಕ್ಕೆ ಕುಟುಂಬಸ್ಥರು ಮತ್ತು ಆತ್ಮೀಯರೊಂದಿಗೆ ತೆರಳಿ ವಿಶೇಷ ದರ್ಶನ ಪಡೆದರು.
ಮಂದಿರಕ್ಕೆ ಭೇಟಿ ನೀಡುತ್ತಿದ್ದಂತೆ ದೇವಸ್ಥಾನದ ಆಡಳಿತ ಮಂಡಳಿಯಿಂದ ಸ್ವಾಗತಿಸಲಾಯಿತು. ತುಳಜಾಭವಾನಿ ಮಂದಿರ ಸಂಸ್ಥಾನದ ವ್ಯವಸ್ಥಾಪಕರು ಹಾಗೂ ತಹಸೀಲ್ದಾರರಾದ ಶ್ರೀಮತಿ ಮಾಯಾ ಅಶೋಕ ಮಾನೆ ಅವರು ಶಾಸಕರನ್ನು ತುಳಜಾ ಭವಾನಿ ದೇವಿಯ ಭಾವಚಿತ್ರ ನೀಡಿ ಸನ್ಮಾನಿಸಿದರು.
ತುಳಜಾಭವಾನಿ ಮಾತೆಯ ಭಕ್ತರಾದ ಶಾಸಕರು ಪ್ರತಿ ವರ್ಷ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ಈ ವರ್ಷವೂ ಧರ್ಮಪತ್ನಿ, ಸುಪುತ್ರ, ಕುಟುಂಬಸ್ಥರು, ಔರಾದ(ಬಿ) ಕ್ಷೇತ್ರದ ನೂರಾರು ಆತ್ಮೀಯರೊಂದಿಗೆ ತುಳಜಾಭವಾನಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ನಾಡಿನ ಒಳಿತಿಗಾಗಿ ಪ್ರಾರ್ಥಿಸಿದರು.
ಔರಾದ(ಬಿ) ಕ್ಷೇತ್ರದಲ್ಲಿ ಉತ್ತಮ ಮಳೆ, ಬೆಳೆಯಾಗಿ ರೈತರ ಜೀವನ ಹಸನಾಗಲಿ, ತುಳಜಾ ಭವಾನಿ ಮಾತೆ ಎಲ್ಲರಿಗೂ ಸುಖ, ಸಮೃದ್ದಿ, ನೆಮ್ಮದಿ ನೀಡಲಿ ಎಂದು ಬೇಡಿಕೊಂಡರು.
ಈ ವೇಳೆ ಮಾತನಾಡಿದ ಅವರು, ತುಳಜಾಭವಾನಿ ದೇವಿಯು ಶಕ್ತಿಯುತ ದೇವತೆಯಾಗಿದ್ದು, ಕರ್ನಾಟಕ, ತೆಲಂಗಾಣಾ, ಆಂಧ್ರ, ಮಹಾರಾಷ್ಟ್ರ ಸೇರಿದಂತೆ ದೇಶದ ಮೂಲೆ ಮೂಲೆಗಳಿಂದ ಭಕ್ತರು ತುಳಜಾಪುರಕ್ಕೆ ಭೇಟಿ ನೀಡಿ ಪುನೀತರಾಗುತ್ತಾರೆ. ನಾನು ಕೂಡ ದಸರಾ ಹಬ್ಬದ ಸಂದರ್ಭದಲ್ಲಿ ಪ್ರತಿ ವರ್ಷ ತುಳಜಾಪುರಕ್ಕೆ ಭೇಟಿ ನೀಡಿ, ಜನತೆಯ ಒಳಿತಿಗೆ ಪ್ರಾರ್ಥಿಸುತ್ತೇನೆ. ಕುಟುಂಬಸ್ಥರು, ಕ್ಷೇತ್ರದ ಮುಖಂಡರು, ಕಾರ್ಯಕರ್ತರೊಂದಿಗೆ ದೇವಿಯ ದರ್ಶನ ಪಡೆಯುವುದರಿಂದ ಸಾಕಷ್ಟು ನೆಮ್ಮದಿ ತರುತ್ತದೆ ಎಂದರು.
ಈ ಸಂದರ್ಭದಲ್ಲಿ ಹಿರಿಯ ಮುಖಂಡರಾದ ಮಾರುತಿ ಚವ್ಹಾಣ, ರಾಮಶೆಟ್ಟಿ ಪನ್ನಾಳೆ, ಕಿರಣ ಪಾಟೀಲ, ಪ್ರತೀಕ ಚವ್ಹಾಣ, ಸಚಿನ ರಾಠೋಡ, ಖಂಡೋಬಾ ಕಂಗಟೆ, ಶೇಷರಾವ ಕೋಳಿ, ಬಾಬುರಾವ ಔರಾದೆ, ಅನೀಲ ಬಿರಾದಾರ, ಶರತ್ ಧನಗೆ, ರಾಮ್ ಪಾಟೀಲ, ಬಾಲಾಜಿ ಠಾಕೂರ್, ಮಂಜು ಸ್ವಾಮಿ, ಅಶೋಕ ಅಲ್ಮಾಜೆ, ಲೋಕೇಶ ಬಿರಾದಾರ, ಬಜರಂಗ್ ಪಾಂಡ್ರೆ, ಸಂದೀಪ್ ಠಿಳ್ಳೆಕರ್, ಪಂಡರಿ ರಾಠೋಡ, ಪ್ರಕಾಶ ಪವಾರ್, ದೇವಿದಾಸ ಪವಾರ್ ಸೇರಿದಂತೆ ಇತರರಿದ್ದರು..
ವರದಿ : ರಾಚಯ್ಯ ಸ್ವಾಮಿ