ದಿನಾಂಕ: 21/10/1959 ನೇ ಇಸವಿಯಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿ.ಆರ್.ಪಿ.ಎಫ್) ಪಡೆಯ DySP ಹುತಾತ್ಮ ಶ್ರೀ ಕರಣ ಸಿಂಗ್ ನೇತೃತ್ವದ ತಂಡವು 1000 ಸಾವಿರ ಅಡಿ ಎತ್ತರದ ಚಳಿಯಿಂದ ಕೂಡಿದ ಬಂಜರು ಪ್ರದೇಶವಾದ ಭಾರತ ಮತ್ತು ಚೈನಾದ ಗಡಿ ಭಾಗ ಲದ್ದಾಕದ ಹಾಟ್ ಸ್ಪ್ರಿಂಗ್ಸ್ ಪ್ರದೇಶದಲ್ಲಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾಗ ಚೀನಾದ ಸೈನಿಕರು ಹತಾಟನೆ ಸುಸಜ್ಜಿತ ಶಸ್ತ್ರಾಸ್ತಗಳಿಂದ ಆಕ್ರಮಣ ಮಾಡಿದ್ದು, ಇವರು ಧೈರ್ಯ ಶೌರ್ಯದಿಂದ ಹೊರಾಡಿ ಹುತಾತ್ಮ ಶ್ರೀ ಕರಣ ಸಿಂಗ್ ರವರೊಂದಿಗೆ 09 ಜನ ಸಿ.ಆರ್.ಪಿ.ಎಫ್ ಸಿಬ್ಬಂದಿಯವರು ವೀರ ಮರಣ ಹೊಂದಿರುತ್ತಾರೆ. ಈ ಅಸಾಧಾರಣ ವೀರ ಮರಣದ ನೆನಪಿನಲ್ಲಿ ಹಾಗೂ ಕಾನೂನು ಸೂವ್ಯವಸ್ಥೆಯನ್ನು ಕಾಪಾಡುವಾಗ, ರಾಷ್ಟ್ರದ ಆಂತರಿಕ ಭದ್ರತೆ ಮತ್ತು ಇತರೆ ಕರ್ತವ್ಯದಲ್ಲಿರುವಾಗ ಪ್ರಾಣ ತ್ಯಾಗ ಮಾಡಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರ ಹೆಸರುಗಳನ್ನು ಗೌರವ ಪೂರ್ವಕವಾಗಿ ಓದಿ ಸ್ಮರಿಸಲಾಯಿತು.
ಸಂಸ್ಮರಣ ದಿನಾಚರಣೆ ಅಂಗವಾಗಿ ಇಂದು ಬೀದರ ಜಿಲ್ಲಾ ಪೊಲೀಸ್ ಕವಾಯತ್ ಮೈದಾನದಲ್ಲಿ ಪೊಲೀಸ್ ಸಂಸ್ಮರಣಾ ದಿನಾಚರಣೆಯನ್ನು ವಿಶೇಷ ಕವಾಯತಿನೊಂದಿಗೆ ಆಚರಿಸಲಾಯಿತು.
ದಿನಾಚರಣೆಯ ಮುಖ್ಯ ಅತಿಥಿಯಾಗಿ ಶ್ರೀ ಸಚಿನ್ ಕೌಶಿಕ್ ಆರ್.ಎನ್, ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಬೀದರ, ಶ್ರೀ ಚಂದ್ರಕಾಂತ ಗುದಗೆ, ಎಮ್.ಡಿ ನಿವೃತ್ತ ಜಿಲ್ಲಾ ಶಸ್ತ್ರ ಚಿಕಿತ್ಸಕರು, ಜಿಲ್ಲಾ ಆಸ್ಪತ್ರೆ ಬೀದರ. ಮತ್ತು ಜಿಲ್ಲೆಯ ಗಣ್ಯ, ಅತೀ ಗಣ್ಯರು, ಅಧಿಕಾರಿಗಳು, ಸಿಬ್ಬಂದಿರವರಿಗೂ ಹಾಗು ಪತ್ರಿಕಾ ಮಾಧ್ಯಮ ಸ್ನೇಹಿತರಿಗೂ ಆದರ ಸ್ವಾಗತವನ್ನು ಬೀದರ ಜಿಲ್ಲಾ ಪೊಲೀಸ್ ವತಿಯಿಂದ ಸ್ವಾಗತಿಸಿ ಹುತಾತ್ಮರನ್ನು ಸ್ಮರಿಸಲಾಯಿತು.