ಚಿಂಚೋಳಿ ತಾಲೂಕಿನ ಮುಖ್ಯ ರಸ್ತೆ ಸರಿ ಪಡಿಸುತ್ತಿರುವ ವಾಹನ ಸವಾರರು ಕ್ಷೇತ್ರದ ಜನರಿಗೆ ಮುಜುಗರ ಈ ಘಟನೆ

ಕಲಬುರ್ಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಕೊಂಚವರಂ ಕ್ರಾಸ್ ನಿಂದ ಭಕ್ತಂಪಳ್ಳಿ ಕ್ರಾಸ್, ಛತ್ರಸಾಲದ ವರೆಗೆ ಮುಖ್ಯ ರಸ್ತೆಯು ಸಂಪೂರ್ಣ ಹಾಳಾಗಿದ್ದು ಇದಕ್ಕೆ ಸಂಬಂಧಿಸಿದ ಜನಪ್ರತಿನಿಧಿಗಳಾಗಲಿ ಅಧಿಕಾರಿಗಳಾಗಲಿ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಲಾರಿ ಮಾಲಕರು ಹಾಗೂ ವಾಹನ ಚಾಲಕರು ಅವರು ಒಟ್ಟಿಗೆ ಸೇರಿ ಆ ರಸ್ತೆಗಳನ್ನು ಸ್ವಯಂ ಪ್ರೇರಿತವಾಗಿ ಮರುಂ ಮಣ್ಣು ಹಾಕಿ ರಸ್ತೆಯ ತಗ್ಗು, ದಿಂಡುಗಳನ್ನು ಬರ್ತೀ ಮಾಡುತ್ತಿದ್ದಾರೆ.

ಈ ಘಟನೆ ಯಿಂದ ಕ್ಷೇತ್ರದ ಜನರೇ ಮುಜುಗರಕ್ಕಿಲಾಗುವಂತಾಗಿದ್ದು ಅಯ್ಯೋ ನಮ್ಮ ಕ್ಷೇತ್ರದ ಮೂಲಕ ಹಾದು ಹೋಗುವ ವಾಹನ ಸವಾರರಿಗೆ ಇದೆಂತಹ ಕೆಲಸ ಮಾಡಬೇಕಾಗುತ್ತಿದೆ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ ಅಷ್ಟೇ ಅಲ್ಲದೆ ಸಂಬಂಧ ಪಟ್ಟ ಅಧಿಕಾರಿ ಜನಪ್ರತಿನಿದಿನಗಳಿಗೆ ಜನ ಛಿಮಾರಿ ಹಾಕುವಂತಾಗಿದೆ,

ಕುಂಭಕರ್ಣನ ನಿದ್ದೆಯಲ್ಲಿರುವ ಚುನಾಯಿತ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮಾಡುವಂತಹ ಕೆಲಸವನ್ನು ಮಾಡದೇ ಇರುವ ಕಾರಣ ಲಾರಿ ಮಾಲಕರು ಹಾಗೂ ಚಾಲಕರು ಸಾರ್ವಜನಿಕರು ಮಾಡುತ್ತಿರುವುದು ವಿಪರ್ಯಾಸವೇ ಸರಿ! ಲಾರಿ ಚಾಲಕ ಪ್ರತಿಕ್ರಿಯಿಸಿ ಸುಮಾರು ವರ್ಷಗಳಿಂದ ಈ ರಸ್ತೆಗಳು ತುಂಬಾ ತೆಗ್ಗು ಬಿದ್ದಿ ನಮ್ಮಂತ ಲಾರಿ ಚಾಲಕರಿಗೆ ತುಂಬಾ ಸಮಸ್ಯೆ ಆಗುತ್ತಿದ್ದು ಅಪಾರವಾದ ನಷ್ಟವನ್ನು ಅನುಭವಿಸುತ್ತೇವೆ ಯಾರು ಮಾಡದೇ ಇರುವ ಲಾರಿ ಮಾಲಕರು ನಾವು ಎಲ್ಲಾ ಸೇರಿ ತೆಗ್ಗು ಗುಂಡುಗಳನ್ನು ಮುಚ್ಚುತ್ತಿದ್ದೇವೆ ಎಂದು ಹೇಳಿದರು.
ಸುನಿಲ ಸಿಂಮೆಂಟ್ ಕಂಪನಿಯ ನೌಕರ ಪ್ರತಿಕ್ರಿಯಿಸಿ ಹಲವು ವರ್ಷಗಳಿಂದ ಈ ರಸ್ತೆಗಳು ಸುಧಾರಣೆಯಾಗದೆ ಹಲವಾರು ಅಪಘಾತಗಳು ಆಗಿ ಮರಣ ಹೊಂದಿದ್ದಾರೆ, ಕೈ ಕಾಲು ಮುರಿದುಕೊಂಡಿದ್ದಾರೆ ನಿತ್ಯ ಇಲ್ಲಿ ಸಂಚರಿಸಬೇಕಾದರೆ ನಮ್ಮ ಜೀವ ಕೈಯಲ್ಲಿಟ್ಟುಕೊಂಡು ಸಂಚರಿಸಬೇಕು ಚುನಾಯಿತ ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಗಾಡ ನಿದ್ರೆಯಲ್ಲಿ ಮಲಗಿದ್ದು ಹಲವು ಬಾರಿ ಪತ್ರಿಕೆಗಳಲ್ಲಿ ಪ್ರಕಟಿಸಿದರು ಕೂಡ ಅವರ ನಿದ್ದೆಯಿಂದ ಇನ್ನು ಎದ್ದಿಲ್ಲ, ಸ್ವಯಂ ಪ್ರೇರಿತವಾಗಿ ಲಾರಿ ಮಾಲಕರು ಹಾಗೂ ಚಾಲಕರು ಸಾರ್ವಜನಿಕರು ಸೇರಿ ಈ ರಸ್ತೆಗಳ ತಗ್ಗು ಗುಂಡಿಗಳನ್ನ ಮುಚ್ಚುತ್ತಿರುವುದು ಪ್ರಶಂಸೆ ಕೆಲಸ ಎಂದು ಹೇಳಿದರು.

ವರದಿ : ರಾಜೇಂದ್ರ ಪ್ರಸಾದ್

error: Content is protected !!