ನವದುರ್ಗೆ ದೇವಿಯರ ಪ್ರಾಣ ಪ್ರತಿಷ್ಟಾಪನೆ ಮೊದಲ ಬಾರಿಗೆ ಒಂದೇ ಕಡೆ ಕೌಠದಲ್ಲಿ ಸ್ಥಾಪಿಸಲಾಗಿದೆ

ವೈಷ್ಣವದೇವಿ ಮಹಾ ಶಕ್ತಿ ಪೀಠ ಕೌಠ ( ಕೆ ) ಸಂಸ್ಥೆಯ ಅಡಿ , ಅಮೃತಪ್ಪ ಮುತ್ಯಾ ಅವರು ಇತ್ತಿಚೆಗೆ ಅಕ್ಟೊಬರ್ ತಿಂಗಳಲ್ಲಿ ಜರುಗಿದ ನವರಾತ್ರಿಯ ಮೊದಲ ದಿನ ಬೀದರ ಜಿಲ್ಲೆಯ ಔರಾದ ತಾಲೂಕಿನ ಕೌಠ (ಕೆ) ಗ್ರಾಮದಲ್ಲಿ ನವದುರ್ಗೆ ಮೂರ್ತಿಗಳು ಪ್ರತಿಷ್ಟಿಸಿ ದೇವಿ ಭಕ್ತರು ಆರಾಧಕರಿಗೆ ಉತ್ಕ್ರಷ್ಟ ಕೊಡುಗೆ ಕೊಟ್ಟಿದ್ದಾರೆ.

 

ಅಮೃತಪ್ಪ ದುರ್ಗೆ ಮಾತೆಯ ಪರಮ ಭಕ್ತರು , ಅವರು ಕಳೆದ ಇಪ್ಪತ್ತು ವರ್ಷಗಳಿಂದ ಬೀದರ ನಗರದ ವಿದ್ಯಾನಗರ ಬಡವಾಣೆಯಲ್ಲಿ ನವರಾತ್ರಿಯ ಸಮಯದಲ್ಲಿ ದೇವಿ ಕುಡಿಸಿ ನವರಾತ್ರಿ ವೈಭವಪೋತವಾಗಿ ಆಚರಿಸಿಕೊಂಡು ಬರುತ್ತಿದ್ದರು.

ಒಮ್ಮೆ ವೈಷ್ಣವದೇವಿ ದೇವಿ ಕನಸಲ್ಲಿ ಬಂದು ತ್ರಿಕೂಟ ಪರ್ವತದಿಂದ ವೈಷ್ಣವ ಮಾತೆಯನ್ನು ಕರೆ ತಂದು ಪ್ರತಿಸ್ಟಾಪಿಸಿ ಆರಾಧಿಸುವಂತೆ ಕನಸು ಬಿದ್ದಿತ್ತು, ಆಗ ಕಾಶ್ಮೀರದ ವೈಷ್ಣವದೇವಿ ಮಂದಿರಕ್ಕೆ ಹೋಗಿ ದರ್ಶನ ಮಾಡಿ ಸಂಕಲ್ಪ ಮಾಡಿಕೊಂಡು ಬಂದದ್ದು, ಅಂದಿನಿಂದ ಇಂದಿನವರೆಗೂ ನಿರಂತರವಾಗಿ ತಾಯಿಯ ಸೇವೆಯಲ್ಲಿ ನಿರತನಾಗಿರುವೆ ಎಂದು ತಮ್ಮ ಅನುಭವ ಹಂಚಿಕೊಂಡೊದ್ದಾರೆ.

ನವದುರ್ಗೆ ಮೂರ್ತಿ ಪ್ರತಿಷ್ಟಾಪನೆಯಂದು ಅವಿನವ ಶಂಕರಲಿಂಗ ಮಹಾರಾಜರು ಸೊಂತ, ಹಾಗೂ ಶಂಕರಲಿಂಗ ದತ್ತದಿಂಬರ ಮಾಣೀಕೆಶ್ವರ ಆಶ್ರಮ ಸೊಂತ ಇವರ ಸಾನಿಧಾನದಲ್ಲಿ ಜರುಗಿತ್ತು.

ಶೈಲಪೂತ್ರಿ,ಬ್ರಹ್ಮಾಚಾರಣಿ, ಚಂದ್ರಘಂಟ, ಕೂಷ್ಮಾಂಡು, ಸ್ಕಂದ ಮಾತ ಕಾತ್ಯಾಯನಿ, ಕಾಳರಾತ್ರಿ, ಮಹಾಗೌರಿ ,ಸಿದ್ದಿದಾತ್ರಿ ಮಾತೆಯರ ಮೂರ್ತಿ ಪ್ರತಿಷ್ಟಿತ ಮಾಡಲಾಗಿದೆ.

ಅದ್ದರಿಂದ ಜಿಲ್ಲೆಯ ಎಲ್ಲಾ ದೇವಿಯ ಆರಾಧಕರು ಬಂದು ನವದುರ್ಗೆಯ ದರ್ಶನ ಗೈದು ಮಾತೆಯ ಕೃಪಾದೃಷ್ಟಿ ಗೆ ಪಾತ್ರರಾಗಬೇಕು ಎಂದು ವಿನಂತಿಸಿಕೊಂಡರು.

error: Content is protected !!