ವಿಶ್ವ ತಂಬಾಕು ರಹಿತ ದಿನ ನಿಮಿತ್ಯವಾಗಿ ಜಾಗೃತಿಗಾಗಿ ಗುಲಾಬಿ ಆಂದೋಲನ ಎಂಬ ವಿಶೇಷ ಕಾರ್ಯಕ್ರಮವನ್ನು ಸಾರ್ವಜನಿಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಥಣಿ ಹಾಗೂ ಜಾಧವಜಿ ಶಿಕ್ಷಣ ಸಂಸ್ಥೆಯ ಜೆ.ಎ.ಪದವಿ ಪೂರ್ವ ಕಾಲೇಜು ಅಥಣಿ ಇವರ ಸಂಯುಕ್ತಾಶ್ರಯದಲ್ಲಿ ಸ್ಥಳೀಯ ಆರ್ ಎಚ್.ಕುಲಕರ್ಣಿ ಸಭಾಭವನದಲ್ಲಿ ಎರ್ಪಡಿಸಲಾಗಿತ್ತು.ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಸಾರ್ವಜನಿಕ ಆರೋಗ್ಯ ಇಲಾಖೆಯ ವೈಧ್ಯಾರಿಕಾರಿಗಳಾದ ಡಾ.ಬಿ
ಜಿ.ಕಾಗೆ ಭಾಗವಹಿಸಿ ವಿದ್ಯಾರ್ಥಿಗಳ ಕುರಿತಾಗಿ ಮಾತನಾಡಿದರು.ದೇಶದಲ್ಲಿ ಸುಮಾರು 17%ರಷ್ಟು ಯುವ ಜನರು ತಂಬಾಕು ಮತ್ತು ತಂಬಾಕು ಉತ್ಪನ್ನಗಳನ್ನು ಬಳಸುತ್ತಿದ್ದು,ವರ್ಷಕ್ಕೆ ಲಕ್ಷಾಂತರ ಜನರು ಅಪ್ರಾಪ್ತ ವಯಸ್ಸಿನಲ್ಲಿ ಸಾವನ್ನಪ್ಪುತ್ತಾರೆ ಎಂದು ಹೇಳಿದರು.ತಂಬಾಕು ಹಾಗೂ ತಂಬಾಕು ಉತ್ಪನ್ನಗಳನ್ನು ಬಳಸುವುದರಿಂದ ಜೀವನದಲ್ಲಿ ಯಾವುದಾದರೊಂದು ಮಾರಕ ಕಾಯಿಲೆ ಬರುವುದು ಶತಸಿದ್ದ,ಇಂತಹ ಮಾರಕ ಕಾಯಿಲೆಯಿಂದ ದೂರ ಉಳಿಯಬೇಕಾದರೆ ವ್ಯಸನಗಳಿಂದ ದೂರ ಉಳಿಯಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.ಅಧ್ಯಕ್ಷತೆ ವಹಿಸಿದ ಖ್ಯಾತ ನ್ಯಾಯವಾದಿಗಳಾದ ಶ್ರೀ ಸಂದೀಪ್ ಸಂಗೋರಾಮ ಅವರು ಮಾತನಾಡಿ ಇಂದಿನ ಜನರು ಗುಟ್ಕಾ ಮತ್ತು ಪಾನ ಮಸಾಲ ಅಂತಹ ವಸ್ತುಗಳನ್ನು ಅಧಿಕವಾಗಿ ಬಳಸುತ್ತಿದ್ದು ಸಾರ್ವಜನಿಕ ಸ್ಥಳಗಳಲ್ಲಿ ಉಗಳುವುದು ಮುಖಾಂತರ ಪರಿಸರ ಹಾನಿಯೊಂದಿಗೆ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.ಜಾಗೃತಿಗಾಗಿ ನಗರದ ಹಲವು ಅಂಗಡಿ ಮತ್ತು ವ್ಯಾಪಾರಸ್ಥರಿಗೆ ಗುಲಾಬಿ ಹೂ ನೀಡುವುದರ ಮೂಲಕ ತಂಬಾಕು ಮತ್ತು ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡಬಾರದೆಂದು ವಿನಂತಿ ಮಾಡಿಕೊಂಡರು.ಕಾರ್ಯಕ್ರಮದಲ್ಲಿ.ಆರೋಗ್ಯ ಇಲಾಖೆಯ ಶ್ರೀಮತಿ ಎ.ಬಿ.ಗುಳಿದರ,ಎಸ್.ಬಿ.ದೊಡಮನಿ,ಕೊಟ್ಯಾಗೋಳ ಹಾಗೂ ಶ್ರೀ ಎಮ್.ಪಿ.ಮೇತ್ರಿ ಉಪಸ್ಥಿತಿ ಇದ್ದರು.
ವರದಿ : ಭರತೇಶ ನಿಡೋಣಿ