ಹುಮನಾಬಾದ ತಾಲೂಕಿನ ಪ್ರತಿ ಗ್ರಾಮದ ಗ್ರಂಥಾಲಯ ಗಳಲ್ಲಿ ಸಂವಿಧಾನ 

ಬೀದರ್ ಜಿಲ್ಲೆಯ ಹುಮನಾಬಾದ ಪಟ್ಟಣದ ತಾಲೂಕು ಪಂಚಾಯತ ಸಭಾಂಗಣದಲ್ಲಿ ಜರುಗಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆಯ ಹಾಗೂ ಗ್ರಂಥ ಪಾಲಕ ಸಿಬ್ಬಂದಿಗಳಿಗೆ ಆರೋಗ್ಯ ತಪಾಸಣೆ ಶಿಬಿರ ಮತ್ತು ಗ್ರಂಥಾಲಯಗಳಿಗೆ ಸಂವಿಧಾನ ಪುಸ್ತಕ ವಿತರಣೆ ಹಾಗೂ ವಿವಿಧ ಅಭಿಯಾನ ದಲ್ಲಿ ಹೆಚ್ಚಿನ ಪ್ರತೀಶತ ಕೆಲಸ ನಿರ್ವಹಿಸುತ್ತಿರುವ ಗ್ರಾಮ ಪಂಚಾಯತ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು,

 

ಸ್ವಚ್ಛತೆ, ಸೇರಿದಂತೆ ವಿವಿಧ ರೀತಿಯಲ್ಲಿ ಸಹಕರಿಸಿದ ಗ್ರಾಮ ಪಂಚಾಯತಿ ಗಳ ಅಧಿಕಾರಿಗಳಿಗೆ ಪ್ರೋತ್ಸಾಹಿಸಲಾಯಿತು,

 

ಇದೆ ವೇಳೆ ಮಾತನಾಡಿದ ಹುಮನಾಬಾದ ತಾಲೂಕು ಪಂಚಾಯತಿ ಮುಖ್ಯ ಅಧಿಕಾರಿಗಳು ನಮ್ಮ ಸಿಬ್ಬಂದಿ ಯೊಬ್ಬರು ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿದರು ಒಂದು ಗ್ರಂಥಾಲಯ ದಲ್ಲೂ ಸಂವಿಧಾನ ಪುಸ್ತಕ ಇಲ್ಲದಿರುವುದನ್ನು ಕಂಡು ನನ್ನ ಗಮನಕ್ಕೆ ತಂದರು ನಂತರ ನಾವು ಇದನ್ನ ಗಂಭೀರ ವಾಗಿ ಪರಿಗಣಿಸಿ ಎಲ್ಲಾ ಗ್ರಾಮದ ಗ್ರಂಥಾಲಯ ಗಳಲ್ಲಿ ಸಂವಿಧಾನ ಪುಸ್ತಕ ನೀಡುವ ನಿರ್ಧಾರ ಮಾಡಿದ್ದೇವೆ ಎಂದರು,

 

ಇನ್ನೂ ತಾಲೂಕಿನ ವಿವಿಧಡೆ ಹೆಚ್ಚಿನ ಪುಸ್ತಕ ನೀಡಿ ಹಾಗೂ ಕಚೇರಿಗಳಲ್ಲಿ ಪುಸ್ತಕ ನೀಡುವ ಪ್ರಯತ್ನ ಮಾಡುತಿದ್ದೇವೆ ಯಾರೋ ಕೆಲಸಕ್ಕೆ ಎಂದು ಕಚೇರಿಗೆ ಬಂದರೆ ಮೊಬೈಲ್ ನೋಡುತ್ತಾ ಕೂಡದೆ ಪುಸ್ತಕ ಓದುವ ಕೆಲಸ ಆಗಬೇಕು ಎಂದರು,

 

ಜಿಲ್ಲಾ ಪಂಚಾಯತ್ CEO ಗಿರೀಶ್ ಬದುಲೆ ಮಾತನಾಡಿ ಗ್ರಾಮ ಪಂಚಾಯತ ಸಿಬ್ಬಂದಿಗಳು ಕೆಲಸ ಒತ್ತಡದಲ್ಲಿ ಆರೋಗ್ಯದ ಬಗ್ಗೆ ನಿರ್ಲಕ್ಷಿಸದೆ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ವಿಶೇಷ ಕಾಳಜಿ ವಹಿಸಬೇಕು.

 

ಉತ್ತಮ ಆರೋಗ್ಯಕ್ಕೆ ಕ್ರೀಡೆಯೂ ಅಗತ್ಯವಾಗಿ ಬರುವ ದಿನಗಳಲ್ಲಿ ಕ್ರೀಡೆ ಆಯೋಜನೆ ಮಾಡಲಾಗುತ್ತದೆ. ಪಂಚಾಯತ ವ್ಯಾಪ್ತಿಯ ಗ್ರಂಥಾಲಯದಲ್ಲಿ ಸ್ಪರ್ಧಾತ್ಮಕ ಪುಸ್ತಕ ಇಡುವಲ್ಲಿ ಅಧಿಕಾರಿಗಳು ವಿಶೇಷ ಗಮನ ವಹಿಸಬೇಕು ಹಾಗೆ ಪ್ರತಿ ಪಂಚಾಯತನಲ್ಲಿ ಪುಸ್ತಕ ಗೂಡು ನಿರ್ಮಿಸಿ ಪುಸ್ತಕ ಓದುವ ಹವ್ಯಾಸ ಗ್ರಾಮಸ್ಥರಲ್ಲಿ ಮೂಡಿಸುವ ಕಾರ್ಯ ನಡೆಯಬೇಕು.ಇದರಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗುತ್ತದೆ.ಕಸ ಸಂಗ್ರಹ ಅಭಿಯಾನದಲ್ಲಿ ಸ್ವಚ್ಛತೆ ಕಾಪಾಡುವ ಪ್ರಯತ್ನ ಮಾಡಬೇಕು ಎಂದು ಹೇಳಿದರು.

error: Content is protected !!