ಅಥಣಿ :ಶೈಕ್ಷಣಿಕ ವರ್ಷ ಮುಗಿಯುತ್ತ ಬಂದರು ಮಕ್ಕಳಿಗೆ ಪಠ್ಯಪುಸ್ತಕ ಇನ್ನು ತಲುಪಿರುವುದಿಲ್ಲ

 

ಸರ್ಕಾರದಿಂದ ಉಚಿತ ಪಠ್ಯ ಪುಸ್ತಕ ಪೂರೈಸಿದರು ಪುಸ್ತಕ ವಿಲ್ಲದೆ ಮಕ್ಕಳು ಪರದಾಡುವಂತಾಗಿದೆ ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಅಥಣಿ ತಾಲೂಕಿನ ರಡ್ಡೆರಹಟ್ಟಿ ಗ್ರಾಮದ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅತೀ ಹೆಚ್ಚು ಮಕ್ಕಳಿರುವ ಶಾಲೆಯಾಗಿದೆ,ಆದರೆ ಶೈಕ್ಷಣಿಕ ವರ್ಷ ಮುಗಿಯುತ್ತ ಬಂದರು ಕೆಲವು ಪಠ್ಯ ಪುಸ್ತಕಗಳು ಲಭ್ಯವಿಲ್ಲದ ಕಾರಣ

 

ಪೋಷಕರು ವಿದ್ಯಾರ್ಥಿಗಳು ಪರದಾಡುವಂತಾಗಿದೆ ಇದರಿಂದ ಬೋಧನ ಚಟುವಟಿಕೆ ತೊಂದರೆ ಆಗಿದೆ ಎಂದು ಪಾಲಕರು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಇದರ ಬಗ್ಗೆ ಶಿಕ್ಷಣ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಿಲ್ಲ ಎಂದು ಪೋಷಕರ ಅಕ್ರೋಶ ವನ್ನು ಹೊರ ಹಾಕಿದ್ದಾರೆ

 

ಅಥಣಿ ತಾಲೂಕಿನಲ್ಲಿ ಅತಿ ಹೆಚ್ಚು ಮಕ್ಕಳಿರುವ ಶಾಲೆಗೆ ಪೂರ್ಣ ಪ್ರಮಾಣದ ಪಠ್ಯಪುಸ್ತಕಗಳನ್ನು ವಿತರಿಸಲು ಇದುವರೆಗೂ ಸಾಧ್ಯವಾಗಿಲ್ಲ ಮಕ್ಕಳ ಶೈಕ್ಷಣಿಕ ದೃಷ್ಟಿಕೋನದಿಂದ ಪುಸ್ತಕವನ್ನು ಶೀಘ್ರದಲ್ಲಿ ಪೂರೈಸಬೇಕು

ಈ ಬಗ್ಗೆ ಮುಖ್ಯೋಪಾಧ್ಯಾಯರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಕ್ರಮವನ್ನು ವಹಿಸಲು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಕರ್ನಾಟಕ ಘನ ಸರ್ಕಾರವು ಶಿಕ್ಷಣ ಇಲಾಖೆಯ ವತಿಯಿಂದ ಪ್ರತಿ ಶೈಕ್ಷಣಿಕ ವರ್ಷಕ್ಕೆ ರಾಜ್ಯದಲ್ಲಿರುವ ಮಕ್ಕಳಿಗೆ ಬೇಕಾದಷ್ಟು ಪುಸ್ತಕಗಳ ಇಂಡೆಂಟ್ ಅನ್ನು ಪಡೆದಿರುತ್ತಾರೆ ಅದರಂತೆ ಪ್ರತಿ ವಿದ್ಯಾರ್ಥಿಗಳಿಗೂ ಸರ್ಕಾರದ ವತಿಯಿಂದ ಉಚಿತ ಪಠ್ಯಪುಸ್ತಕವನ್ನು ಒದಗಿಸಲಾಗುತ್ತದೆ. ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆಹಂಚಿಕೆಯಾಗಬೇಕೆಂದು ಉಚಿತ ಪಠ್ಯಪುಸ್ತಕಗಳನ್ನು ಅನುದಾನ ರಹಿತ ಹಂಚಿಕೆಯಾದ ಕುರಿತು ದೂರುಗಳು ಬರುತ್ತೇವೆ ಶಾಲೆಗಳಿಗೆ ಈ ಕುರಿತು ನೀಲಾಧಿಕಾರಿಗಳು ಸಮಗ್ರವಾಗಿ ತನಿಖೆ ಮಾಡಿ ಪರಿಶೀಲಿಸಬೇಕು,

 

ಆದರೆ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ರಡ್ಡೆರಹಟ್ಟಿ ಶಾಲೆಯಲ್ಲಿ ಸರಿಯಾಗಿ ಪೂರೈಸಿರುವುದಿಲ್ಲಾ. ಇಂಡೆಂಟ್ ನಂತೆ ಬರಬೇಕಾದ ಪುಸ್ತಕಗಳು ಯಾಕೆ ಬಂದಿರುವುದಿಲ್ಲ . ಈ ಪುಸ್ತಕಗಳು ಎಲ್ಲಿ ಹೋಗಿದ್ದಾವೆ ಎಂಬ ಬಗ್ಗೆ ಸೂಕ್ತ ತನಿಖೆಯಾಗಬೇಕು.

 

ವರದಿ ಭರತೇಶ ನಿಡೋಣಿ

error: Content is protected !!