ಅಥಣಿ :ಕಳೆದ ಎರಡು ದಿನಗಳ ಹಿಂದೆ ಕೋಕಟನೂರ ಗ್ರಾಮದ ನ್ಯಾಯವಾದಿ ಶುಭಾಸ ಪಾಟನಕರ (55) ಅವರು ಕಾಣೆಯಾಗಿರುವ ವದಂತಿ ಹಬ್ಬಿತ್ತು. ಈ ಕುರಿತು ಅಥಣಿ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು ಇದರ ಬೆನ್ನಲ್ಲೆ ತನಿಖೆ ಶುರು ಮಾಡಿದ ಅಥಣಿ ಪೊಲೀಸ್ ರಿಗೆ ಹಳ್ಯಾಳ ಗ್ರಾಮದ ಹೊರವಲಯದ ಕೃಷ್ಣ ನದಿ ಸೇತುವೆ ಮೇಲೆ ಬೈಕ್ ಬಿಟ್ಟಿರುವ ಶಂಕೆ ವ್ಯಕ್ತವಾಗಿತ್ತು.
ಬೈಕ್ ಆಧಾರದ ಮೇಲೆ ನದಿಯಲ್ಲಿ ಬಿದ್ದಿರುವ ಶಂಕೆ ವ್ಯಕ್ತಪಡಿಸಿದ ಪೊಲೀಸರು ನಿನ್ನೆಯಿಂದ ಅಗ್ನಿಶಾಮಕ ಹಾಗೂ ಎಸ್ ಡಿ ಆರ್ ಎಫ್ ತಂಡದಿಂದ ಶೋಧಕಾರ್ಯ ಶುರು ಮಾಡಲಾಗಿತ್ತು.
ನ್ಯಾಯವಾದಿ ಶುಭಾಸ ಪಾಟನಕರ ಕಾಣೆಯಾಗಿರುವ ಬಗ್ಗೆ ಕುಟುಂಬಸ್ಥರ ಕಿಡ್ನಾಪ್ ಹಾಗೂ ಕೊಲೆ ಆರೋಪಗಳ ಬಗ್ಗೆ ಅನುಮಾನಗಳು ವ್ಯಕ್ತವಾಗಿದ್ದವು.
ಕಾಣೆಯಾದ ವಕೀಲರು ಕೃಷ್ಣ ನದಿಯಲ್ಲಿ ಶವವಾಗಿ ಪತ್ಯಯಾಗಿದ್ದು ಕುಟುಂಬಸ್ಥ ಆಕ್ರಂದನ ಮುಗಿಲು ಮುಟ್ಟಿದೆ.ಬಕಾಣೆಯಾಗುವ ಮಾರನೇ ದಿನವೇ ಅಣ್ಣನ ಮಗನ ಮದುವೆ ಇತ್ತು ಮಗನ ಮದುವೆ ಲಗ್ನ ಪತ್ರಿಕೆ ಹಂಚಿ ಮದುವೆಯ ಖುಷಿಯಲ್ಲಿದ್ದ ಕುಟುಂಬಕ್ಕೆ ನ್ಯಾಯವಾದಿ ಸುಭಾಸ ಅವರ ಸಾವು ಅಘಾತ ತಂದಿದೆ.
ಕಾಣೆಯಾಗಿ 36 ಗಂಟೆಗಳ ಬಳಿಕ ಇಂದು ಬೆಳಿಗ್ಗೆ ವಕೀಲರ ಮೃತ ದೇಹ ಪತ್ತೆಯಾಗಿದ್ದು ಅಥಣಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ವರದಿ : ಭರತೇಶ ನಿಡೋಣಿ