ಚಿಂಚೋಳಿ ತಾಲೂಕಿನ ಸಾಕಷ್ಟು ಕಾಂಗ್ರೆಸ್ ಕಾರ್ಯಕರ್ತರು ಸಣ್ಣ ಪುಟ್ಟ ಕೆಲಸಗಳಿಗಾಗಿ ಕಲಬುರಗಿಯ ಸುಭಾಷ ರಾಠೋಡ ಮನೆಗೆ ಅಲೆದು ಅಲೆದು ಸುಸ್ತಾಗಿದ್ದಾರೆ. ಒಬ್ಬರ ಕೆಲಸ ಮಾಡಿಲ್ಲ. ಸಣ್ಣ ಪುಟ್ಟ ಕೆಲಸಗಳಿಗೂ ಯಾವುದಾದರು ಸಬುಬು ಹೇಳಿ ವಾಪಾಸ್ ಕಳುಹಿಸಿದ್ದಾರೆ. ನಾನು ಚುನಾವಣೆಯಲ್ಲಿ ಸೋತಿದೇನೆ ಕೋಟಿ ಕೋಟಿ ಸಲದಲ್ಲಿದ್ದೇನೆ ತಿಂಗಳಿಗೆ ಲಕ್ಷ ರೂಪಾಯಿಗಳಲ್ಲಿ ಬಡ್ಡಿ ಕಟ್ಟುತ್ತಿದ್ದೇನೆ ಎಂದು ಹೇಳಿ ಕಾರ್ಯಕರ್ತರಿಗೆ ಶಿಫರಾಸ್ಸಿನ ಒಂದು ಪತ್ರವನ್ನು ಕೊಡುವುದಿಲ್ಲ. ಕಾರ್ಯಕರ್ತರು ಫೋನ್ ಕರೆ ಮಾಡಿದರೆ ಕಲಬುರಗಿಯಲ್ಲಿ ಇದ್ದು ಬೆಂಗಳೂರಿನಲ್ಲಿ ಇದ್ದೇನೆ ಎಂದು ಬೆಂಗಳೂರಿನಲ್ಲಿ ಇದ್ದು ಕಲಬುರಗಿಯಲ್ಲಿ ಇದ್ದೇನೆ ಎಂದು ಸುಳ್ಳು ಹೇಳಿ ಹಲವು ಬಾರಿ ಸಿಕ್ಕಿಹಾಕಿಕೊಂಡಿದ್ದಾರೆ.
ಸುಭಾಷ ರಾಠೋಡ ಒಬ್ಬ ಸಮಯ ಸಾಧಕ, ನಯ ವಂಚಕ, ಕಪಟಿ, ದುರಹಂಕಾರಿ, ಮುಂಗೋಪಿ, ನಾನೇ ಜಾಣ ಎನ್ನುವ ಪೂರ್ವಗ್ರಹ ಪೀಡಿತ ವ್ಯಕ್ತಿಯಾಗಿದ್ದಾನೆ. ಕಳೆದ 2018 ರ ಉಪ ಚುನಾವಣೆಯಲ್ಲಿ ಕರ್ನಾಟಕ ಸರಕಾರವೇ ಬಂದು ಜೆಡಿಎಸ್ ಮತ್ತು ಕಾಂಗ್ರೆಸ್ ಒಂದುಗೂಡಿ ಕಾಂಗ್ರೆಸ್ ಪಕ್ಷದ ಟೆಕೆಟ್ ಕೊಟ್ಟು ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ನವರಂತಹ ಘಟಾನು ಘಾಟಿಗಳೇ ಚಿಂಚೋಳಿ ಮತಕ್ಷೇತ್ರದ ತುಂಬಾ ಓಡಾಡಿದರು ಈ ಸುಭಾಷ ರಾಠೋಡ 8000 ಮತಗಳ ಅಂತರದಲ್ಲಿ ಸೋತರು. 2023 ರ ಸಾರ್ವತ್ರಿಕ ಚುನಾವಣೆಯಲ್ಲಿ ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ನೀಡಿದ ಗ್ಯಾರಂಟಿ ಯೋಜನೆಗಳ ಗಾಳಿಯಲ್ಲಿ ನಿಶಕ್ತ ಅಭ್ಯರ್ಥಿಗಳು ಗೆದ್ದರು. ಆದರೆ ಸಮೀಕ್ಷೆಯಲ್ಲಿ ಕಲಬುರಗಿ ಜಿಲ್ಲೆಯಲ್ಲಿಯೇ ಕಾಂಗ್ರೆಸ್ ಇಂದ ಗೆಲ್ಲುವ ಅಭ್ಯರ್ಥಿಗಳಲ್ಲಿ ಮೊದಲು ಚಿಂಚೋಳಿಯಲ್ಲಿ ಕಾಂಗ್ರೆಸ್ ಗೆಲ್ಲುತ್ತೆ ಎಂದು ಹೇಳಿತ್ತು. ಆದರೆ ಈ ಸುಭಾಷ ರಾಠೋಡ ಸೋತರು , ಯಾಕೆಂದರೆ ಚಿಂಚೋಳಿ ಕಾಂಗ್ರೆಸ್ ಪಕ್ಷದ ಮುಂಚೂಣಿ ನಾಯಕರು, ಬೂತ್ ಮಟ್ಟದ ಕಾರ್ಯಕರ್ತರನ್ನು ನಂಬದಿರುವುದು. ಯಾರೊಬ್ಬ ಕಾರ್ಯಕರ್ತರನ್ನು ನಂಬದೆ ನಾನೇ ಜಾಣ ಎಂಬ ದುರಹಂಕಾರವೇ ಸುಭಾಷ ರಾಠೋಡ ಸೋಲಿಗೆ ಕಾರಣ.
ಸುಭಾಷ ರಾಠೋಡ ಚಿಂಚೋಳಿ ಮತಕ್ಷೇತ್ರದ ಜನತೆಗೆ ಸಾಯುವವರೆಗೂ ಚಿರಋಣಿ ಯಾಗಿರಬೇಕು ಯಾಕೆಂದರೆ ಚಿಂಚೋಳಿ ಮತಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರಿಗೆ ಯಾವ ರೀತಿಯಲ್ಲಿಯೂ ಇವರು ಸಹಾಯ ಮಾಡಿಲ್ಲ ಒಬ್ಬ ಕಾಂಗ್ರೆಸ್ ಕಾರ್ಯಕರ್ತರಿಗೆ ಜಿಲ್ಲಾ ಪಂಚಾಯತ ಟಿಕೆಟ್ ಕೊಟ್ಟಿದ್ದಾರೆಯೇ? ತಾಲೂಕ ಪಂಚಾಯತ ಟಿಕೆಟ್ ಕೊಟ್ಟಿದ್ದಾರೆಯೇ? ಚಿಂಚೋಳಿ ಮತಕ್ಷೇತ್ರದಿಂದ ಒಬ್ಬ ಕಾರ್ಯಕರ್ತನಿಗೂ ದೊಡ್ಡ ಮಟ್ಟದಲ್ಲಿ ನಾಮ ನಿರ್ದೇಶಕರನ್ನಾಗಿ ಮಾಡಿಲ್ಲ, ಇವರ ಹಿಂದೆ ರಾತ್ರಿ ಹಗಲೆನ್ನದೆ ಓಡಾಡಿದ ಹಿಂಬಾಲಕರನ್ನು ಮರೆತು ಹೋದ ಇವನೊಬ್ಬ ಕಪಟಧಾರಿಯಾಗಿದ್ದಾನೆ.
ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಅನ್ಯ ಪಕ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರಿದವರ ಪರಿಸ್ಥಿತಿ ಹೇಗಾಗಿದೆ ಎಂದರೆ ಅವರಿಗೆ ಯಾರು ಕೇಳುವವರೇ ಇಲ್ಲ. ಎಂಥ ಮನಷ್ಯನನ್ನು ನಂಬಿ ನಾವು ಕಾಂಗ್ರೆಸ್ ಪಕ್ಷಕ್ಕೆ ಬಂದೇವಪ್ಪ ಕಳೆದ ವಿಧಾನ ಸಭಾ ಚುನಾವಣೆ ಮುಗಿತು ಒಂದೂವರೆ ವರ್ಷ ಕಳೆದು ಹೋಗಿದೆ ಆದರೆ ಎಲ್ಲಿವರೆಗೂ ಒಂದೇ ಒಂದು ಸಾರಿ ಮೌಖಿಕವಾಗಿ ಆಗಲಿ ದೂರವಾಣಿ ಕರೆ ಮಾಡಿ ಆಗಲಿ ಅನ್ಯ ಪಕ್ಷ ತೊರೆದು ಕಾಂಗ್ರೆಸ್ ಸೇರ್ಪಡೆ ಆದವರಿಗೆ ಮಾತನಾಡಿಲ್ಲ ಇಂತಹ ಅಹಂಕಾರಿ ಲೀಡರ್ ನಂಬಿ ನಾವು ಕಾಂಗ್ರೆಸ್ ಪಕ್ಷಕ್ಕೆ ಬಂದದ್ದು ದೊಡ್ಡ ತಪ್ಪಾಗಿದೆ ಎನ್ನುತ್ತಿದ್ದಾರೆ.
ಸುಭಾಷ ರಾಠೋಡ ಒಬ್ಬ ಪೂರ್ವಗ್ರಹ ಪೀಡಿತ ವ್ಯಕ್ತಿಯಾಗಿದ್ದು ನನ್ನ ಸೋಲಿಗೆ ಇಡೀ ಚಿಂಚೋಳಿ ಮತಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಕಾರಣರಾಗಿದ್ದಾರೆ ಹಾಗಾಗಿ ಚಿಂಚೋಳಿ ಮತಕ್ಷೇತ್ರದ ಯಾವೊಬ್ಬ ಕಾಂಗ್ರೆಸ್ ಕಾರ್ಯಕರ್ತನಿಗೂ ನಾನು ಸಹಾಯ ಮಾಡಬಾರದು ಎಂದು ನಿಶ್ಚಯಿಸಿದ್ದಾನೆ. ಆದರೆ ಕಳೆದ ಎರೆಡು ಚುನಾವಣೆಯಲ್ಲಿ ಗಿಲುವಿನ ಸಮೀಪದ ಮತಗಳನ್ನು ಪಡೆಯಲು ಇದೇ ಕಾಂಗ್ರೆಸ್ ಕಾರ್ಯಕರ್ತರ ಪರಿಶ್ರಮ ಇತ್ತು ಎನ್ನುವುದು ಮರೆದಿದ್ದಾನೆ.
ಮುಂದಿನ ಚುನಾವಣೆವರೆಗೆ ಚಿಂಚೋಳಿ ಮತಕ್ಷೇತ್ರವು ಮೀಸಲು ಕ್ಷೇತ್ರದಿಂದ ಸಾಮಾನ್ಯ ಕ್ಷೇತ್ರವಾಗುತ್ತಿದೆ. ನನಗೆ ಯಾರ ಅವಶ್ಯಕತೆ ಇಲ್ಲ ಎಂದು ಬಹಿರಂಗವಾಗಿಯೇ ಹೇಳಿದ್ದಾರೆ. ಇಂತಹ ವ್ಯಕ್ತಿಯನ್ನು ನಾಯಕ ಎಂದು ನಂಬಿ ಹಗಲು ರಾತ್ರಿ ಎನ್ನದೆ ಎರೆಡು ಚುನಾವಣೆಯಲ್ಲಿ ದುಡಿದ ಕಾಂಗ್ರೆಸ್ ಕಾರ್ಯಕರ್ತರು ಇಂದು ಸುಭಾಷ ರಾಠೋಡ ಚಿಂಚೋಳಿಯಲ್ಲಿ ಸೊತ್ತಿದ್ದೆ ಒಳ್ಳೆಯದಾಗಿದೆ ಒಂದು ವೇಳೆ ಅವನು ಗೆದ್ದಿದ್ದರೆ ಕಾಗ್ರೇಸ್ ಕಾರ್ಯಕರ್ತರನ್ನು ಇವನು ಬೀದಿಗೆ ತರುತ್ತಿದ್ದ ಎಂದು ಹಿಡಿ ಶಾಪ ಹಾಕುತ್ತಿದ್ದಾರೆ.
ಚಿಂಚೋಳಿ ಪುರಸಭೆಯ ಅಧ್ಯಕ್ಷರ ಚುನಾವಣೆ ನಡೆದು ಮೂರು ತಿಂಗಳು ಕಳೆದರು ನಾನು ಪ್ರಬಲ ಆಕಾಂಕ್ಷಿಯಾಗಿದ್ದೆ ನನ್ನನ್ನು ಪುರಸಭೆ ಅಧ್ಯಕ್ಷನಾಗಿ ಮಾಡಲಿಲ್ಲ. ಆದರೂ ಪಕ್ಷದ ನಿರ್ಣಯಕ್ಕೆ ನಾನು ಒಪ್ಪಿಕೊಂದ್ದೇನೆ. ಕಳೆದ ಮೂರು ತಿಂಗಳಿನಿಂದ ಪಕ್ಷದ ಅಧ್ಯಕ್ಷರಾಗಲಿ, ಸುಭಾಷ್ ರಾಠೋಡ್ ಅವರಾಗಲಿ ನನಗೆ ಒಂದು ಸಮಾಧಾನದ ಮಾತು ಕೂಡ ಆಡಿಲ್ಲ ಇದರಿಂದ ನನ್ನ ಮನಸ್ಸಿಗೆ ತುಂಬಾ ನೋವಾಗಿದೆ. ಹೀಗಾಗಿ ನಾನು ನನ್ನ ಆತ್ಮೀಯ ಗೆಳೆಯರೊಂದಿಗೆ ಚರ್ಚಿಸಿ ಒಂದು ವಾರದ ಒಳಗಡೆ ನನ್ನ ಪುರಸಭೆ ಸದಸ್ಯತ್ವಕ್ಕೆ ರಾಜೀನಾಮೆ ಕೊಡಲು ನಿರ್ಧರಿಸಿದ್ದೇನೆ.
ಸದ್ಯದ ಪರಿಸ್ಥಿತಿಯಲ್ಲಿ ಚಿಂಚೋಳಿ ಮತಕ್ಷೇತ್ರದ ಎಲ್ಲಾ ಊರು ತಾಂಡಗಳ ಕಾಂಗ್ರೆಸ್ ಕಾರ್ಯಕರ್ತರು ಸುಭಾಷ ರಾಠೋಡ ವಿರುದ್ಧ ಮುನಿಸಿ ಕೊಂಡಿದ್ದು ಚಿಂಚೋಳಿ ಮತಕ್ಷೇತ್ರಕ್ಕೆ ಸುಭಾಷ ರಾಠೋಡ ಹಟಾವೋ ಕಾಂಗ್ರೆಸ್ ಬಚಾವೋ ಎನ್ನುವ ದಿನಗಳು ದೂರ ಇಲ್ಲ.
ಜಗನ್ನಾಥ ಗುತ್ತೇದಾರ.
ಪುರಸಭೆ ಸದಸ್ಯರು, ಚಿಂಚೋಳಿ
ವರದಿ : ರಾಜೇಂದ್ರ ಪ್ರಸಾದ್