ವಿಜಯನಗರ: ಕಲಾಭಾರತಿ ಕಲಾ ಸಂಘ (ರಿ) ಹಿರೇಹೆಗ್ದಾಳ ಇವರು ಕೊಡ ಮಾಡುವ ರಾಜ್ಯ ಮಟ್ಟದ ಸಾಂಸ್ಕೃತಿಕ ಕಲೋತ್ಸವ ರಾಜ್ಯ ಪ್ರಶಸ್ತಿ ಪುರಸ್ಕೃತರ ಹೆಸರನ್ನು ಬಿಡುಗಡೆ ಮಾಡಿದೆ.
ಈ ಪ್ರಶಸ್ತಿಗೆ ಯುವನಾಯಕ ಪತ್ರಿಕೆ ಸಂಪಾದಕರಾದ ವೆಂಕಟೇಶ ಜುಲಕುಂಟಿಯವರು, ಬಾಗಲಕೋಟೆಯ ಯುವ ಪತ್ರಕರ್ತರಾದ ಕು. ಹನಮಂತ ಐಹೊಳೆಯವರು, ಹಾಗೂ ಇನ್ನೋರ್ವ ಪತ್ರಕರ್ತರು ಆದಂತಹ ಎಸ್.ಎಸ್. ಶಿರೋಳ ಅವರು ಆಯ್ಕೆಯಾಗಿದ್ದಾರೆ.
ಮೂವರು ಸಹ ತಮ್ಮ ಉತ್ತಮ ಹಾಗೂ ನಿಷ್ಕಂಕಿತ ಕೆಲಸದಿಂದ ಪತ್ರಿಕಾ ರಂಗದಲ್ಲಿ ಹೆಸರು ಮಾಡಿದ್ದು, ಈ ರಾಜ್ಯ ಪ್ರಶಸ್ತಿ ಬಂದಿದ್ದಕ್ಕೆ ಸಂತೋಷ ವ್ಯಕ್ತಪಡಿಸಿದ್ದಾರೆ.
ವೆಂಕಟೇಶ ಜುಲಕುಂಟಿಯವರು ಮೂಲತಃ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಆರ್ಯಾಭೋಗಾಪುರ ಗ್ರಾಮದವರಾಗಿದ್ದು ದಶಕದಿಂದ ಪತ್ರಿಕೆ ಹಾಗೂ ಮಾಧ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಹಾಗೆಯೇ ಕು. ಹನಮಂತ ಐಹೊಳೆ ಬಾಗಲಕೋಟೆ ಜಿಲ್ಲೆಯ ಬಾಗಲಕೋಟೆ ತಾಲ್ಲೂಕಿನ ಹೊನ್ನಾಕಟ್ಟಿ ಗ್ರಾಮದ ಯುವಕನಾಗಿದ್ದು, ಬಹುಮುಖ ಪ್ರತಿಭೆಯಾಗಿ ನಟ, ನಿರ್ದೇಶಕ, ನಿರೂಪಕ, ಲೇಖಕ, ವಿಮರ್ಶಕ, ಸಂಘಟಕ, ಕವಿ, ಪತ್ರಕರ್ತ, ಸಾಹಿತ್ಯ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಗುರ್ತಿಸಿಕೊಂಡು ಉತ್ತಮ ಸಾಧನೆ ಮಾಡಿದ್ದನ್ನು ಗುರ್ತಿಸಿ ಈ ಸಾಂಸ್ಕೃತಿಕ ಕಲೋತ್ಸವ ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಿ ಸನ್ಮಾನಿಸಲಾಗುತ್ತಿದೆ. ಎಸ್ .ಎಸ್. ಶಿರೋಳವರು ಶಿಕ್ಷಕರಾಗಿ, ಪತ್ರಕರ್ತರಾಗಿ ದಶಕಗಳ ಕಾಲ ಸೇವೆ ಸಲ್ಲಿಸಿದ್ದು ಪುರಾಣ, ಪ್ರವಚನ, ಲೇಖನಗಳನ್ನು ಬರೆಯುವುದಲ್ಲಿ ನಿಸ್ಸೀಮರು. ಹಾಗೆಯೇ ಉತ್ತಮ ವಾಕ್ಚಾತುರ್ಯವನ್ನು ಹೊಂದಿದ್ದಾರೆ.
ಇವರುಗಳು ದಿನಾಂಕ 23 ಡಿಸೆಂಬರ್ 2024 ರಂದು ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಹಿರೆಹೆಗ್ದಾಳದ ಬಸವೇಶ್ವರ ಶಾಲಾ ಆವರಣದಲ್ಲಿ ಬೃಹತ್ ವೇದಿಕೆಯಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ.
ಕಾರ್ಯಕ್ರಮದ ಆಯೋಜಕರು ತಿಳಿಸಿದ್ದಾರೆ.
ಪ್ರಶಸ್ತಿ ಬಂದಿದ್ದಕ್ಕಾಗಿ ಇವರ ಬಂಧು ಬಳಗ, ಮಿತ್ರವೃಂದ, ಸೇರಿದಂತೆ ಆತ್ಮೀಯರೆಲ್ಲ ಶುಭಕೋರಿ ಅಭಿನಂದನೆ ಸಲ್ಲಿಸಿದ್ದಾರೆ.
ವರದಿ : ಖಾಜಾಮೈನುದ್ದಿನ ತಹಶೀಲ್ದಾರ್