ಸಿದ್ಧಲಿಂಗ ಸ್ವಾಮೀಜಿಗೆ ಭದ್ರತೆ ಹಾಗೂ ಕೊಲೆ ಸಂಚು ರೂಪಿಸಿದ ವ್ಯಕ್ತಿ ಬಂಧನಕ್ಕೆ ಆಗ್ರಹಿಸಿ ಶ್ರೀ ರಾಮ ಸೇನಾ ಹುಕ್ಕೇರಿ ನಗರ ಘಟಕ ವತಿಯಿಂದ ತಹಶೀಲ್ದಾರ ಗೆ ಮನವಿ

ಹುಕ್ಕೇರಿ : ಶ್ರೀರಾಮ ಸೇನಾ ರಾಷ್ಟ್ರೀಯ ಅಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿಗೆ ಭದ್ರತೆ ಹಾಗೂ ಕೊಲೆ ಸಂಚು ರೂಪಿಸಿದ ವ್ಯಕ್ತಿ ಬಂಧನಕ್ಕೆ ಆಗ್ರಹಿಸಿ ಹಾಗೂ ಷಡ್ಯಂತ್ರ ರುವಾರಿ ಸಚಿವ ಪ್ರಿಯಾಂಕಾ ಖರ್ಗೆ ರಾಜೀನಾಮೆ ನೀಡಲೇಬೇಕೆಂದು ಆಗ್ರಹಿಸಿ…

ಮಾನ್ಯರೇ,ಕಲಬುರ್ಗಿ ಜಿಲ್ಲಾ ಜೇವರ್ಗಿ ತಾಲ್ಲೂಕಿನ ಸುಕ್ಷೇತ್ರ ಪೂಜ್ಯ ಕರುಣೆಶ್ವರ ಮಠದ ಪೂಜ್ಯ ಶ್ರೀ ಸಿದ್ಧಲಿಂಗ ಸ್ವಾಮೀಜಿ ಕೊಲೆ ಮಾಡುವ ಬಗ್ಗೆ ಇತ್ತೀಚಿಗೆ ಆತ್ಮಹತ್ಯೆ ಮಾಡಿಕೊಂಡ ಕಾಂಟ್ರಾಕ್ಟರ್ ಸಚಿನ್ ಪಾಂಚಾಳ ಮರಣ ಪತ್ರದಲ್ಲಿ ಉಲ್ಲೇಖವಾಗಿದೆ. ಕಲಬುರ್ಗಿ ಜಿಲ್ಲಾ ಉಸ್ತುವಾರಿ ಮಂತ್ರಿ ಪ್ರಿಯಾಂಕ್ ಖರ್ಗೆ ಆಪ್ತ ರಾಜು ಕವನೂರ ಅನ್ನುವ ವ್ಯಕ್ತಿ ಈ ಹೇಯ ಕೊಲೆ ಬಗ್ಗೆ ಯೋಜನೆ ನಿರೂಪಿಸಿದ್ದರ ಬಗ್ಗೆ ಉಲ್ಲೇಖವಾಗಿದೆ.

ಈ ಹಿನ್ನಲೆಯಲ್ಲಿ ಪೂಜ್ಯ ಸ್ವಾಮೀಜಿಗೆ ತಕ್ಷಣವೇ ರಕ್ಷಣೆ ನೀಡಬೇಕು. ಕೊಲೆ ಸಂಚು ರೂಪಿಸಿದ ವ್ಯಕ್ತಿ ಬಂಧನವಾಗಬೇಕು ಹಾಗೂ ಪ್ರಿಯಾಂಕ್ ಖರ್ಗೆ ರಾಜೀನಾಮೆ ತೆಗೆದುಕೊಳ್ಳಬೇಕೆಂದು ಈ ಮೂಲಕ ಆಗ್ರಹಿಸುತ್ತೇವೆ.

ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಅನಿವಾರ್ಯವೆಂದು ಈ ಮೂಲಕ ಹುಕ್ಕೇರಿ ತಹಶೀಲ್ದಾರ ರವರಿಗೆ ಮನವಿ ಕೊಡಲಾಯಿತು

ಈ ಸಂದರ್ಭದಲ್ಲಿ ಶ್ರೀ ರಾಮ ಸೇನಾ ರಾಜ್ಯ ಪ್ರಮುಖ ಶಿವರಾಜ ಅಂಬಾರಿ ವಿವೇಕ ಪುರಾಣಿಕ ರಾಹುಲ ಅಂಕಲೆ ವಿಠ್ಠಲ ಹೆಗಡೆ ಮಾರುತಿ ಬೆನ್ನಾಡಿ ಅಜಿತ ರಾಣಿಕನ್ನವರ ಶ್ರೀ ರಾಮ ಸೇನಾ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

 

ವರದಿ : ಸದಾನಂದ ಎಚ್

error: Content is protected !!