ಭಾರತಕ್ಕೆ ಮತ್ತೊಂದು ವಿಶ್ವ ವಿಜೇತ ಕಿರೀಟ; ವಿಶ್ವ ರ‍್ಯಾಪಿಡ್ ಚೆಸ್ ಚಾಂಪಿಯನ್​ ಗೆದ್ದ ಕೊನೇರು ಹಂಪಿ!

ಮಹಿಳಾ ವಿಶ್ವ ರ‍್ಯಾಪಿಡ್ ಚೆಸ್ ಚಾಂಪಿಯನ್-2024​ ಫೈನಲ್ ಪಂದ್ಯದಲ್ಲಿ ಭಾರತದ ಮೊದಲ ಮಹಿಳಾ ಗ್ರ್ಯಾಂಡ್ ಮಾಸ್ಟರ್​ ಕೊನೇರು ಹಂಪಿ ಅವರು ಗೆದ್ದು ಚಾಂಪಿಯನ್ ಆಗಿದ್ದಾರೆ. ಮಹಿಳಾ ಗ್ರ್ಯಾಂಡ್ ಮಾಸ್ಟರ್​ ಕೊನೇರು ಹಂಪಿ ಅವರು 2ನೇ ಬಾರಿಗೆ ಈ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದು, ಇದರೊಂದಿಗೆ, ಭಾರತದ ಮುಕುಟಕ್ಕೆ ಮತ್ತೊಂದು ಗರಿ ಒಲಿದು ಬಂದಂತಾಗಿದೆ. ಗೆಲುವಿನೊಂದಿಗೆ ವಿಶೇಷ ದಾಖಲೆಯನ್ನೂ ಸಹ ಬರೆದಿರುವ ಕೊನೇರು ಹಂಪಿ ಅವರು ಒಲಿಂಪಿಯಾಡ್, ಏಷ್ಯನ್ ಗೇಮ್ಸ್ ಮತ್ತು ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲೂ ಚಿನ್ನದ ಪದಕ ವಿಜೇತರಾಗಿದ್ದರು.

error: Content is protected !!