ಔರಾದ್: ವಿಧ್ಯಾರ್ಥಿಗಳು, ಸಾರ್ವಜನಿಕರಲ್ಲಿ ನಿರಂತರ ಜಾಗೃತಿ ಮೂಡಿಸಿದಾಗ ಏಡ್ಸ್ ನಿರ್ಮೂಲನೆ ಸಾಧ್ಯವಾಗುತ್ತದೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಗಾಯತ್ರಿ ವಿಜಯಕುಮಾರ್ ಹೇಳಿದರು.
ಪಟ್ಟಣದ ಅಮರೇಶ್ವರ ಪದವಿ ಕಾಲೇಜಿನಲ್ಲಿ ಮಂಗಳವಾರ ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್‌ಷನ್ ಸೊಸೈಟಿ ಬೆಂಗಳೂರು, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ಘಟಕ ಬೀದರ್, ಸಾರ್ವಜನಿಕ ಆಸ್ಪತ್ರೆ ಔರಾದ್ ಸಹಯೋಗದಲ್ಲಿ ನಡೆದ ಏಡ್ಸ್ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದ ಅವರು ವಿಧ್ಯಾರ್ಥಿಗಳು ತಮ್ಮ ವಿಧ್ಯಾರ್ಥಿ ದೇಶೆಯಲ್ಲಿ ಓದು ಬರಹದ ಕಡೆಗೆ ಮಾತ್ರ ಗಮನ ಹರಿಸಬೇಕು ಅನಗತ್ಯ ಪ್ರೀತಿ ಪ್ರೇಮಕ್ಕೆ ಮರುಳಾಗದೆ ಉತ್ತಮವಾಗಿ ಅಭ್ಯಾಸಮಾಡಿ ಹೆತ್ತವರಿಗೆ ಕಿರ್ತಿ ತರಬೇಕು ಎಂದು ಹೇಳಿದರು.
ಆಪ್ತ ಸಮಾಲೋಚಕಿ ಪುಷ್ಪಾಂಜಲಿ ಎಮ್. ಪಾಟೀಲ್ ಮಾತನಾಡಿ, ಏಡ್ಸ್ ರೋಗಕ್ಕೆ ತುತ್ತಾಗದಂತೆ ಎಚ್ಚರ ವಹಿಸಬೇಕು. ಏಡ್ಸ್ ಕುರಿತು ಅರಿವು ಹೊಂದಬೇಕು. ಮಾನಸಿಕ ಮತ್ತು ದೈಹಿಕವಾಗಿ ಆರೋಗ್ಯ ಕಾಪಾಡಿಕೊಳ್ಳಬೇಕು. ಏಡ್ಸ್ ಹರಡುವಿಕೆ, ನಿಯಂತ್ರಣ ಮತ್ತು ಕಾಯಿಲೆಗೆ ತುತ್ತಾದವರನ್ನು ಯಾವ ರೀತಿಯಿಂದ ನೋಡಿಕೊಳ್ಳಬೇಕು ಎಂಬ ವಿಷಯವನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು.
ಕಾಲೇಜು ಪ್ರಾಂಶುಪಾಲೆ ಡಾ. ಜಗದೇವಿ ತೆಲಿ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಪಿಯು ಪ್ರಾಂಶುಪಾಲ ರೆವಣಯ್ಯ ಮಠ, ಉಪನ್ಯಾಸಕರಾದ ಡಿ.ಡಿ ಬೊಳೆಗಾವೆ, ಸಾಗರ ಪಾಟೀಲ, ಭಾಗ್ಯಶ್ರೀ, ದೀಪಿಕಾ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.
ವರದಿ : ರಾಚಯ್ಯ ಸ್ವಾಮಿ