ಚಿಂಚೋಳಿ ಚಂದಾಪುರ್ ಪಟ್ಟಣದಲ್ಲಿ ನಾಗರಿಕ ಹಿತ ರಕ್ಷಣಾ ಸಮಿತಿ, ಚಿಂಚೋಳಿ ವತಿಯಿಂದ ಭಾರತ ರತ್ನ ಸವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರಿಗೆ ಅವಹೇಳನಕಾರಿ ಹೇಳಿಕೆ ನೀಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಸಚಿವ ಸಂಪುಟದಿಂದ ವಜಾಗೊಳಿಸುವಂತೆ ಆಗ್ರಹಿಸಿ ಚಿಂಚೋಳಿ ಬಂದ್ ಮಾಡಲಾಯಿತು, ಎಲ್ಲಾ ಅಂಗಡಿ ಮುಂಗಟುಗಳು ಸ್ವಯಂ ಪ್ರೇರಿತವಾಗಿ ಬೆಂಬಲವನ್ನ ಸೂಚಿಸಿದರು, ಬಸ್ ನಿಲ್ದಾಣ ಪ್ರಯಾಣಿಕರಿಲ್ಲದೆ ಬಿಕೋ ಎನ್ನುತ್ತಿತ್ತು, ಚಂದಾಪೂರ ತಾಂಡರು ಕ್ರಾಸ್ ಹಾಗೂ ಚಿಂಚೋಳಿಯ ಅಂಬೇಡ್ಕರ್ ವೃತ್ತದಿಂದ ಸವಾರರು ನಡೆದುಕೊಂಡು ಹೋಗುತ್ತಿದ್ದು ಕಾಣುತ್ತಿತ್ತು, ಈ ಬಂದ್ ಪ್ರತಿಭಟನೆಗೆ ದಲಿತ ಪರ,ಕನ್ನಡಪರ, ಜನಪರ , ಪ್ರಗತಿಪರ ಹಿತಚಿಂತಕರು, ರೈತ ಸಂಘಟನೆಕಾರರು, ಆಟೋ ಚಾಲಕರ ಸಂಘ, ವ್ಯಾಪಾರಸ್ಥರ ಸಂಘ, ಬೀದಿ ವ್ಯಾಪಾರಿಗಳು, ಇನ್ನು ಹಲವಾರು ಸಮುದಾಯಗಳ ಬೆಂಬಲ ಹಾಗೂ ವಿವಿಧ ಸಂಘಟನೆ ಅಧ್ಯಕ್ಷರು ಗಳಿಂದ ಚಿಂಚೋಳಿ ಚಂದಾಪುರ ಅವಳಿ ಪಟ್ಟಣ ಸಂಪೂರ್ಣ ಸ್ಥಬ್ಧಮಯವಾಗಿತ್ತು.
ವರದಿ : ರಾಜೇಂದ್ರ ಪ್ರಸಾದ್