ಉತ್ತರಾಖಂಡ್ ಜೂನಿಯರ್ ಕಬಡ್ಡಿ ಪಂದ್ಯಾಟದಲ್ಲಿ ಕರ್ನಾಟಕ ರಾಜ್ಯದ ಸಾಕ್ಷಿ ಶೆಟ್ಟಿ ಆಯ್ಕೆ.

ಕಾರ್ಕಳ: ಉತ್ತರಾಖಂಡ್ ನ ಹರಿದ್ವಾರದಲ್ಲಿ ನಡೆಯುವ 50ನೇ ರಾಷ್ಟ್ರೀಯ ಜೂನಿಯರ್ ಕಬಡ್ಡಿ ಪಂದ್ಯಾಟದಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಲು ಎಸ್ ವಿ ಟಿ ವನಿತಾ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ಕುಮಾರಿ ಸಾಕ್ಷಿ ಶೆಟ್ಟಿ ಆಯ್ಕೆಯಾಗಿರುತ್ತಾರೆ. ಇವರಿಗೆ ಕಾಲೇಜಿನ ದೈಹಿಕ ಶಿಕ್ಷಕಿ ಪ್ರಭಾವತಿ ಹೆಗ್ಡೆ ಹಾಗೂ ಕೋಚ್ ಶಶಿಧರ್ ಶೆಟ್ಟಿ ತರಬೇತಿಯನ್ನ ನೀಡಿರುತ್ತಾರೆ

ರಾಷ್ಟ್ರಮಟ್ಟದ ಸಾಧನೆಯನ್ನು ಗೈದ ಕುಮಾರಿ ಸಾಕ್ಷಿ ಶೆಟ್ಟಿ ಹಾಗೂ ತರಬೇತುದಾರರಿಗೆ ಎಸ್‌ವಿಟಿ ವಿದ್ಯಾಸಂಸ್ಥೆಗಳ ಆಡಳಿತ ಮಂಡಳಿ, ಪ್ರಾಂಶುಪಾಲರು, ಹಿರಿಯ ಸಹ ಶಿಕ್ಷಕರು ಹಾಗೂ ಕಾಲೇಜಿನ ಉಪನ್ಯಾಸಕರು ಮತ್ತು ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಅಭಿನಂದಿಸಿರುತ್ತಾರೆ.

 

ವರದಿ : ಪ್ರದೀಪ್ ಕುಮಾರ್ ದಾದನೂರ್ 

error: Content is protected !!