ವಿಜಯಪುರ. ಬಸ್‌ ನಿಲ್ದಾಣಕ್ಕೆ ಶ್ರೀ ಬಸವೇಶ್ವರರ ಹೆಸರು ನಾಮಕರಣಕ್ಕೆ ಆಗ್ರಹ

ವಿಜಯಪುರ ದ ಕೆಎಸ್‌ಆರ್‌ಟಿಸಿ ಕೇಂದ್ರ ಬಸ್‌ ನಿಲ್ದಾಣಕ್ಕೆ ಬಸವೇಶ್ವರ ಬಸ್ ನಿಲ್ದಾಣ ಹಾಗೂ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಕ್ಕೆ ಮೂಲ ನಂದೀಶ್ವರ ಎಂಬ ಹೆಸರನ್ನು ನಾಮಕರಣ ಮಾಡುವಂತೆ ಒತ್ತಾಯಿಸಿ ಬಸವನಬಾಗೇವಾಡಿ ಪಟ್ಟಣದಲ್ಲಿ ವಿವೇಕ್ ಬ್ರಿಗೇಡ್ ಸಂಸ್ಥೆಯಿಂದ ತಹಶೀಲ್ದಾ‌ರ್ ಅವರಿಗೆ ಮನವಿ ಸಲ್ಲಿಸಲಾಯಿತು.

ವಿಶ್ವಕ್ಕೆ ಸಮಾನತೆಯನ್ನು ಸಾರಿದ ಬಸವೇಶ್ವರರು ಜನಿಸಿದ್ದು ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ಪಟ್ಟಣದಲ್ಲಿ ಈ ಹಿನ್ನಲೆಯಲ್ಲಿ ವಿಜಯಪುರ ಬಸ್‌ ನಿಲ್ದಾಣಕ್ಕೆ ಬಸವೇಶ್ವರ ಬಸ್‌ ನಿಲ್ದಾಣ ಮತ್ತು ಬಸವನಬಾಗೇವಾಡಿ ಬಸ್ ನಿಲ್ದಾಣಕ್ಕೆ ಮೂಲ ನಂದೀಶ್ವರ ಬಸ್‌ ನಿಲ್ದಾಣ ಎಂದು ಹೆಸರು ನಾಮಕರಣ ಮಾಡಿ. ಅಣ್ಣ ಬಸವಣ್ಣನವರ ಹೆಸರಿಗೆ ಇನ್ನೂ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿ ತಹಶೀಲ್ದಾ‌ರ್ ಅವರಿಗೆ ಮನವಿ ಸಲ್ಲಿಸಿದರು.

 

ವರದಿ : ಮಹಿಬೂಬ್ ಗುಂಠಕಲ್ 

error: Content is protected !!