ಕಂಬಳಬಾಯಿ ಗಂಡ ವಿಶ್ವನಾಥ ಹೊಡಗೆ ಅವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಉಜನಿ ಗ್ರಾಮದಲ್ಲಿ ಅಡುಗೆ ಸಹಾಯಕಿಯಾಗಿ 2002 ರಿಂದ 2025 ರ ಜನವರಿಗೆ ಸರಿ ಸುಮಾರು 23 ವರ್ಷಗಳ ಕಾಲ ಅಡುಗೆ ಸಹಾಯಕಿಯಾಗಿ ಸೇವೆ ಸಲ್ಲಿದ್ದು ಒಂದು ಹೆಮ್ಮೆಯೆ ವಿಷಯವಾಗಿದೆ,ಸುಮಾರು ವರ್ಷಗಳ ಹಿಂದೆಯೇ ಗಂಡನನ್ನು ಕಳೆದುಕೊಂಡು ತನ್ನ ಮಕ್ಕಳು ಹಾಗೂ ಕುಟುಂಬ ಜವಾಬ್ದಾರಿಯ ಜೊತೆಗೆ ಶಾಲೆಯಲ್ಲಿ ಸರಿ ಸುಮಾರ 200 ಕ್ಕು ಅಧಿಕ ಶಾಲಾ ಮಕ್ಕಳಿಗೆ ರುಚಿ ರುಚಿಯಾದ ಮಧ್ಯಾಹ್ನದ ಬಿಸಿ ಊಟವನ್ನು ಊಣ ಬಡಿಸುತ್ತಿದ್ದರು, ಶಾಲಾ ಮಕ್ಕಳ ಅಭಿರುಚಿ ಆಸಕ್ತಿಗೆ ಅನುಗುಣವಾಗಿ ಅಡುಗೆ ತಯಾರಿ ಮಾಡಿ ಬಡ ಮಕ್ಕಳ ಹಸಿವು ನೀಗಿಸುತ್ತಿದ್ದರು, ಕಂಬಳಬಾಯಿ ಅವರು ತುಂಬಾ ಸರಳ ವ್ಯಕ್ತಿತ್ವಳ್ಳವರಾಗಿದ್ದು ಮಕ್ಕಳಿಗಾಗಲಿ ಶಿಕ್ಷಕರಿಗಾಗಲಿ ಯಾವತ್ತು ಎದುರು ಮಾತು ಆಡಿದವರು ಅಲ್ಲ ಯಾರು ಏನೇ ಹೇಳಿದರು ಸಹಿಸಿಕೊಂಡು ತನ್ನ ವೃತ್ತಿಯನ್ನು ನಿರ್ವಹಿಸಿದರು, ಅವರ ಅಡುಗೆಯ ರುಚಿಯನ್ನು ಸವಿಯಲು ಬಹಳ ಸಂತೋಷವಾಗುತ್ತಿತ್ತು ಸ್ವಂತ ತನ್ನ ತಾಯಿಯ ಕೈ ತುತ್ತು ತಿಂದಷ್ಟೇ ಸಂತ್ರಪ್ತಿಯಾಗುತ್ತಿತ್ತು ಎಂದು ಶಾಲೆಯ ಶಿಕ್ಷಕರದ ಇಮ್ಮಾನ್ಯುವೇಲ್ ಸರ್ ಅವರು ತನ್ನ ಭಾವನೆಯನ್ನು ವ್ಯಕ್ತಪಡಿಸುತ್ತ ಭಾವುಕರಾದಂತಹ ಕ್ಷಣ ಕಣ್ಣು ತುಂಬಿ ಬಂದಿತ್ತು.
ಸುಮಾರು 23 ವರ್ಷಗಳ ಸೇವೆಯ ಶಾಲೆಯಲ್ಲಿ ಒಂದೇ ಒಂದು ಮಗು ಸಹ ಹೊಟ್ಟೆ ನೋವು
ವಾಂತಿಯಾಗುವುದಾಗಲಿ, ಅಡುಗೆಯಲ್ಲಿ ಕಸ ಕಡ್ಡಿ ಬದ್ದಿದೆ ಅನ್ನ ಒಂದೇ ಒಂದು ಮಾತು ಸಹ ಕೇಳಿ ಬರದೇ ಅಚ್ಚುಕಟ್ಟಾಗಿ ಅಡುಗೆಯನ್ನು ಮಾಡಿಕೊಟ್ಟ ಕಂಬಳಬಾಯಿ ಯವರ ವಯಾ ಸೇವಾ ನಿವೃತಿಯು ಸುಖಕರವಾಗಿರಲಿ
ಕುಟುಂಬದೊಂದಿಗೆ ಸಂತೋಷದಿಂದ ಕಾಲ ಕಳೆಯುವಂತೆ ದೇವರು ಅವರನ್ನು ಹರಸಲಿ ಎಂದು ಕಾರ್ಯಕ್ರಮದ ನಿರೂಪಣೆ ಮಾಡಿದ ಅದೇ ಶಾಲೆಯ ಶಿಕ್ಷಕರಾದ ರಾಬರ್ಟ್ ಅವರು ವಂದಿಸಿ ಕಾರ್ಯಕ್ರಮದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.
ಸ. ಹಿ. ಪ್ರಾ. ಶಾಲೆಯ ಎಲ್ಲ ಶಿಕ್ಷಕರು ಹಾಗು ಅಡುಗೆ ಸಿಬ್ಬಂದಿಯವರು ಸೇರಿ ಸನ್ಮಾನ ಮಾಡಿ ಬಿಳ್ಕೊಟ್ಟರು.
ವರದಿ : ಜಾನ್ಸನ್ ಉಜನಿ