ಯಮರಣಮರಡಿ ವಿಧಾನಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಅಂದಾಜು 7ಕೋಟಿವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ

ಯಮಕನಮರಡಿ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಯಮಕನಮರಡಿ ವ್ಯಾಪ್ತಿಯಲ್ಲಿ ಬರುವ ಕರ್ನಾಟಕ ಸರ್ಕಾರ ಲೋಕೋಪಯೋಗಿ ಸಚಿವರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರೀ ಸತೀಶ್ ಅಣ್ಣಾ ಜಾರಕಿಹೊಳಿಯವರ ಶಾಸಕರ ಅನುದಾನದಲ್ಲಿ ಅವರ ಸೂಚನೆ ಮೇರೆಗೆ ಚಿಕ್ಕೋಡಿ ಲೋಕಸಭಾ ಸದಸ್ಯರಾದ ಕು ಪ್ರಿಯಾಂಕ ಅಕ್ಕಾ ಜಾರಕಿಹೊಳಿ ಹಾಗೂ ಯುವ ನಾಯಕರಾದ ರಾಹುಲ ಅಣ್ಣಾ ಜಾರಕಿಹೊಳಿಯವರು ಯಮಕನಮರಡಿ ವಿಧಾನಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಅಂದಾಜು 7 ಕೋಟಿ ರೂ.ಗಳ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಗ್ರಾಮದ ಹಿರಿಯರು ಮತ್ತು ‌ಮುಖಂಡರ ಜೊತೆಗೆ ಚಾಲನೆ ನೀಡಿದರು

 

ಕಾಮಗಾರಿಗಳ ವಿವರ.

 

 

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಯಮಕನಮರಡಿ ನೂತನ ಶಾಲಾ ಕೂಠಡಿಗಳಿಗೆ ವೆಚ್ಚ 4 ಕೋಟಿ

 

 

ಹೊನ್ನೂರ ಮಾಸ್ತಿಹೂಳಿ ಸರ್ಕಾರಿ ಪ್ರೌಢಶಾಲೆಗೆ ವೆಚ್ಚ 3 ಕೋಟಿ

 

ಈ ಸಂದರ್ಭದಲ್ಲಿ‌ ಸಚಿವರು ಆಪ್ತ ಸಹಾಯಕರಾದ ಶ್ರೀ ರಾಜು ಅಣ್ಣಾ ದರಗಶೇಟ್ಟಿ ಶ್ರೀ ಕಿರಣ್ ಅಣ್ಣಾ ರಜಪೂತ್ ಶ್ರೀ ಜಂಗ್ಲಿಸಬ್ ನಾಯಕ ಶ್ರೀ ದಯಾನಂದ್ ಪಾಟೀಲ್

ಎಸ್‌ಡಿಎಂಸಿ ಅಧ್ಯಕ್ಷರು ಸರ್ವ ಸದಸ್ಯರು ಗ್ರಾಮ ಪಂಚಾಯತಿ ಅಧ್ಯಕ್ಷರು ಸರ್ವ ಸದಸ್ಯರು ಊರಿನ ಹಿರಿಯರು ಶಾಲೆಯ ಎಲ್ಲ ಸಹ ಶಿಕ್ಷಕರು ಉಪಸ್ಥಿತರಿದ್ದರು.

ವರದಿ : ಸದಾನಂದ್ ಎಚ್

error: Content is protected !!