ಪಾವಗಡ : ಪಟ್ಟಣದ ಟೋಲ್ ಗೇಟ್ ಬಳಿ ಗಡಿನಾಡು ಮಿತ್ರ ಪತ್ರಿಕೆ ಸಂಪಾದಕರಾದ ರಾಮಾಂಜಿನಪ್ಪ ನವರ ಮೇಲೆ ಜನನಿಬಿಡ ಪ್ರದೇಶದಲ್ಲಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಹಾಡುಹಗಲೇ ಸೋಮವಾರ
ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಕಾನೂನು ಸುವ್ಯವಸ್ಥೆಯ ಕುರಿತು ಹಲವು ಪ್ರಶ್ನೆಗಳು ಉದ್ಭವಿಸುತ್ತಿವೆ.
ಈ ಹಿಂದೆ ಅಪ್ಪಾಜಿಹಳ್ಳಿ ಗ್ರಾಮದ ನಾರಾಯಣರೆಡ್ಡಿ ಎಂಬುವವರ ಅಕ್ರಮ ಸಂಬಂಧ ಬಗ್ಗೆ ಸುದ್ದಿಯನ್ನು ಗಡಿನಾಡು ಮಿತ್ರ ಪತ್ರಿಕೆಯಲ್ಲಿ ಹಾಗೂ ನ್ಯೂಸ್ ಚಾನೆಲ್ ನಲ್ಲಿ ಸುದ್ದಿ ಮಾಡಲಾಗಿತ್ತು, ಈ ಸಂಬಂಧ ರಾಮಾಂಜಿನಪ್ಪ ನವರು ಒಬ್ಬರೇ ಇದ್ದಾಗ ನಾರಾಯಣರೆಡ್ಡಿ ಮತ್ತು ಸಂಬಂಧಿ ಮಹಿಳೆಯರು ಏಕಾಏಕಿ ಬಂದು ಅವರು ಹಲ್ಲೆ ಮಾಡಲಾಗಿದೆ.
ಅಲ್ಲಿಯೇ ನಿಂತಿದ್ದ ನಾರಾಯಣರೆಡ್ಡಿ ಆ ಮಹಿಳೆಯರಿಗೆ ನಿರ್ದೇಶನ ನೀಡುತ್ತಿದ್ದಾರೆ. ಇವರ ವರ್ತನೆ ನೋಡಿದರೆ, ಕಾನೂನನ್ನು ತಮ್ಮ ಕೈಗೆ ತೆಗೆದುಕೊಂಡಂತೆ ಕಾಣುತ್ತಿದೆ.ಪೋಲೀಸ್ ಠಾಣೆಯ ಸ್ವಲ್ಪ ದೂರದಲ್ಲಿಯೇ ಈ ಘಟನೆ ನಡೆದಿದೆ.
ನಾರಾಯಣರೆಡ್ಡಿ ಮತ್ತು ಆ ಮಹಿಳೆಯರ ವಿರುದ್ಧ ರಾಮಾಂಜಿನಪ್ಪ ದೂರು ಕೊಟ್ಟಿದ್ದಾರೆ. ದೂರು ದಾಖಲಿಸಿದ ಪಾವಗಡ ಪೋಲಿಸರು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ.
ಪತ್ರಿಕೆಯ ಸಂಪಾದಕರ ಮೇಲೆ ಹಲ್ಲೆ ನಡೆಸಿದ್ದು, ಖಂಡನೀಯ ಈ ಕೂಡಲೇ ಹಲ್ಲೆ ಮಾಡಿದ ಆರೋಪಿಗಳನ್ನು ಬಂಧಿಸಿ ಕಠಿಣ ಕಾನೂನು ಕ್ರಮಕೈಗೊಳ್ಳಬೇಕು. ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಪತ್ರಿಕಾರಂಗದ ಮೇಲೆ ದಬ್ಬಾಳಿಕೆ, ದೌರ್ಜನ್ಯ ನಡೆಯುತ್ತಿರುವುದು ಶೋಚನೀಯ. ಪತ್ರಿಕಾರಂಗ ಶೋಷಿತರ ಪರ, ಅಸಹಾಯಕರ ಪರ, ಸಾರ್ವಜನಿಕರ ಹಿತ ದೃಷ್ಟಿಯಿಂದ ಕೆಲಸ ಮಾಡುತ್ತದೆ. ಭ್ರಷ್ಟಚಾರದ ವಿರುದ್ಧ ಧ್ವನಿ ಎತ್ತುವ ಮೂಲಕ ಪತ್ರಿಕಾರಂಗ ಸಾಕಷ್ಟು ಬಾರಿ ಜಾಗೃತಿ ಮೂಡಿಸಿದೆ.
ಸಮಾಜದಲ್ಲಿ ಉಂಟಾಗುವ ಸಮಸ್ಯೆಗಳನ್ನು ಎತ್ತಿ ತೋರಿಸಿ, ಅವುಗಳು ಬಗೆಹರಿಯುವಂತೆ ಮಾಡುವುದು ಪತ್ರಕರ್ತರ ಹಕ್ಕು ಮತ್ತು ಕರ್ತವ್ಯವಾಗಿದೆ.
ನಿಯಮಾನುಸಾರವಾಗಿ ಕಾನೂನು ಕ್ರಮಕ್ಕೆ ಅವಕಾಶಗಳಿದ್ದು, ಅದನ್ನು ಬಿಟ್ಟು ಹಲ್ಲೆ, ದೌರ್ಜನ್ಯ ಮಾಡುವುದು ಸರಿಯಲ್ಲ
ಮಾಧ್ಯಮವು ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವಾಗಿದೆ, ಮಾದ್ಯಮ ಪ್ರತಿನಿಧಿಯ ಮೈಲಿ ಹಗಲಲ್ಲೇ ಸಾರ್ವಜನಿಕ ಸ್ಥಳದಲ್ಲೇ ಹಲ್ಲೆ ನಡೆಸಲಾಗಿದೆ, ಇದೊಂದು ನಾಚಿಕೆಗೇಡಿನ ಕೃತ್ಯವಾಗಿದ್ದು, ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.