ಸಿದ್ದರಾಮೇಶ್ವರ ಜಯಂತಿ ಆಚರಣೆ ಮಾಡದೇ ಕರ್ತವ್ಯ ಲೋಪ ಎಸಗಿದ ಅಬಕಾರಿ ಇಲಾಖೆ ಅಧಿಕಾರಿಯನ್ನು ಅಮಾನತ್ತಿಗೆ ಆಗ್ರಹ

12 ನೇ ಶತಮಾನದ ಕಾಯಕಯೋಗಿ ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಆಚರಣೆ ಮಾಡದೇ ಕರ್ತವ್ಯ ಲೋಪ ಎಸಗಿದ ಅಬಕಾರಿ ಇಲಾಖೆ ಅಧಿಕಾರಿಯನ್ನು ಅಮಾನತ್ತು ಮಾಡುವಂತೆ ಆಗ್ರಹ ರಾಜ್ಯ ಸರಕಾರವು ಜನತೆಯಲ್ಲಿ ಏಕತೆ ಸಮಾನತೆ ಸಹೃದಯ ಭಾವನೆ ಮೂಡಿಸುವ ಉದ್ದೇಶಕ್ಕಾಗಿ ವಿವಿಧ ಸಮಾಜದ ಶರಣರ ಜಯಂತೋತ್ಸವ ಮಾಡಲು ಸರ್ಕಾರ ನಿರ್ಧರಿಸಿರುತ್ತದೆ, 12 ನೇ ಶತಮಾನದ ಶರಣರು ಕಾಯಕಯೋಗಿ ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಜಯಂತೋತ್ಸವ ಇದ್ದು, 14-1-2025 ಮಂಗಳವಾರ ರಾಜ್ಯ ಸರ್ಕಾರ ವತಿಯಿಂದ ರಾಜ್ಯದ ಪ್ರತಿ ಜಿಲ್ಲೆ ಹಾಗೂ ಪ್ರತಿಯೊಂದು ತಾಲೂಕಿನ ಎಲ್ಲಾ ಕಚೇರಿಗಳಲ್ಲಿ ಕಡ್ಡಾಯವಾಗಿ ಆಚರಿಸಲು ಆದೇಶವಿರುತ್ತದೆ, ಚಿಂಚೋಳಿ ತಾಲೂಕಿನ ಚಂದಾಪುರ ಪಟ್ಟಣದಲ್ಲಿರುವ ಅಬಕಾರಿ ಕಚೇರಿಯಲ್ಲಿ ಆಚರಣೆ ಮಾಡದೇ ವಿಷಯ ತಿಳಿದ ದಲಿತ ಸೇನೆ ಕಾರ್ಯಕರ್ತರು ಬೆಳೆಗ್ಗೆ ಹನ್ನೊಂದು ಗಂಟೆಗೆ ಕಚೇರಿಗೆ ಹೋಗಿ ಪರಿಶೀಲಿಸಿದ್ದಾಗ ಜಯಂತಿ ಆಚರಣೆ ಮಾಡದೇ ಸರ್ಕಾರದ ಆದೇಶ ಗಾಳಿಗೆ ತುರಿ ಸರ್ಕಾರಿ ಆದೇಶ ಉಲ್ಲಂಘನೆ ಮಾಡಿ ಶರಣರಿಗೆ ಅಪಮಾನ ಮಾಡಿರುತ್ತಾರೆ, ವಿಷಯವಾಗಿ ಅಬಕಾರಿ ನಿರೀಕ್ಷಿಕರಿಗೆ ಕರೆ ಮಾಡಿದಾಗ, ಮಾಡಿರಬಹುದು, ಮಾಡಿದ್ದಾರೆ ಅನಿಸುತ್ತೆ ಎಂಬ ಕಾರಣಗಳನ್ನು ನೀಡಿ ತಮ್ಮ ಅಧಿಕಾರದ ಗರ್ವ ಪ್ರದರ್ಶಿಸಿದ್ದಾರೆ, ಆದರೂ ಸುಮ್ಮನಿರದ ದಲಿತ ಸೇನೆ ಕಾರ್ಯಕರ್ತರು ನಿರಂತರವಾಗಿ ಅಧಿಕಾರಿಗಳನ್ನು ಕರೆಮಾಡಿದ್ದಾಗ ಮಧ್ಯಾಹ್ನ 2-30 ಗಂಟೆಗೆ ಬಂದ ಸಿಬ್ಬಂಧಿ ದಲಿತ ಸೇನೆ ಸಂಘ ಬಲವಂತಕ್ಕೆ ಮಣಿದು ಕಾಟಾಚಾರಕ್ಕೆ ಸಮಯದ ಪರಿಜ್ಞಾನ ವಿಲ್ಲದೆ ಮಧ್ಯಾಹ್ನದ ಸಮಯದಲ್ಲಿ ಜಯಂತಿ ಮಾಡಿದ್ದೂ ಶರಣರಿಗೆ ಮಾಡಿದ ಅಪಮಾನವಾಗಿದೆ, ಹಾಗೂ ರಾಜ್ಯ ಸರ್ಕಾರದ ಆದೇಶ ಉಲ್ಲಂಘನೆ ಮಾಡಿದ್ದಾರೆ, ತಮ್ಮ ಕರ್ತವ್ಯದ ಮೇಲೆ ನಿಗಾ ವಹಿಸದೆ ಶರಣರ ಜಯಂತಿಯನ್ನು ತಿರಸ್ಕಾರ ಮಾಡಿದ ಅಧಿಕಾರಿಯನ್ನು ಕೂಡಲೇ ಕರ್ತವ್ಯ ಲೋಪ ಹಾಗೂ ಶರಣರಿಗೆ ಮಾಡಿದ ಅವಮಾನವೆಂದು ಪರಿಗಣಿಗಿ ಸಂಭಂದಪಟ್ಟ ಅಧಿಕಾರಿಯನ್ನು 15 ದಿನಗಳೋಳಗಾಗಿ ಅಮಾನತು ಮಾಡಬೇಕೆಂದು ಮಾಡುವಲ್ಲಿ ವಿಳಂಭ ಮಾಡಿದಲ್ಲಿ ಸಂಘಟನೆ ವತಿಯಿಂದ ಉಗ್ರ ಹೋರಾಟ ಮಾಡಲಾಗುವುದು

ಎಂದು ಮನವಿ ಪತ್ರವನ್ನು ತಾಲೂಕ ದಂಡಾಧಿಕಾರಿಗಳ ಮುಖಾಂತರ ಜಿಲ್ಲಾಧಿಕಾರಿಗೆ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ದಲಿತ ಸೇನೆ ಯುವಘಟಕ ಅಧ್ಯಕ್ಷ ಚೇತನ್ ನಿರಾಳಕರ್, ಜಿಲ್ಲಾ ಮಹಿಳಾ ಘಟಕ ಅಧ್ಯಕ್ಷೆ ಅನುಸೂಯ ಎಸ್.ಎಮ್. ಕಾರ್ಯಧ್ಯಕ್ಷ ಸುನಿಲ್ ತ್ರಿಪಾಟಿ, ಉಪಾಧ್ಯಕ್ಷ ಖತಲಪ್ಪ ಬಸವನೋರ್, ಹೀರಾ ಪವಾರ್, ಇನ್ನಿತರ ದಲಿತ ಸೇನೆ ಕಾರ್ಯಕರ್ತರು ಉಪಸ್ಥಿತರಿದ್ದರು.

 

ವರದಿ : ರಾಜೇಂದ್ರ ಪ್ರಸಾದ್

error: Content is protected !!