ಗುಮ್ಮಟ್ ನಗರಕ್ಕೆ ನ್ಯಾಯಮೂರ್ತಿಗಳಾದ ಕೆ.ಎನ್. ಫಣೀಂದ್ರ ಎಂಟ್ರಿ 

ವಿಜಯಪುರ :- ನ್ಯಾಯಮೂರ್ತಿಗಳಾದ ಕೆ.ಎನ್. ಫಣೀಂದ್ರ ಅವರಿಂದ ಸಾರ್ವಜನಿಕ ಅಹವಾಲು ವಿಚಾರಣೆ ಹಾಗೂ

ಕುಂದು ಕೊರತೆ, ಮತ್ತು ಪ್ರಕರಣಗಳ ವಿಲೇವಾರಿ ಸಭೆ

ಇಂದು ವಿಜಯಪುರ ‌ನಗರದ ರಂಗಮಂದಿರದಲ್ಲಿ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಲಾಯಿತು

ಇನ್ನು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕೆ.ಎನ್. ಫಣೀಂದ್ರ ಅವರು ಸಂವಿಧಾನದಲ್ಲಿ ಎಲ್ಲರಿಗೂ ಸಮಾನವಾದ ಹಕ್ಕು ಇದ್ದು ಅಧಿಕಾರಿಗಳು ಸಾರ್ವಜನಿಕರನ್ನು ಅವರ ಅಂತಸ್ತು ನೋಡಿ ಕಾರ್ಯನಿರ್ವಹಿಸಬಾರದು ಎಂದು ಕಿವಿಮಾತು ಹೇಳಿದರು

ನಂತರ ಕಾರ್ಯಕ್ರಮದಲ್ಲಿ ಹಲವರಿಗೆ ಸ್ಥಳದಲ್ಲಿಯೇ ಅಹವಾಲು ಸ್ವೀಕರಿಸಿ ಹಲವು ಅಧಿಕಾರಿಗಳಿಗೆ ತಾಕೀತು ಮಾಡಲಾಯಿತು.

ಇನ್ನು ಸಾರ್ವಜನಿಕ ಅಹವಾಲು ಸ್ವೀಕಾರ ಸಮಯದಲ್ಲಿ ಹಲವು ಅಧಿಕಾರಿಗಳ ಗೈರುಹಾಜರಾಗಿದ್ದು ಕೂಡ ಕಂಡುಬಂದಿದೆ..

ಇನ್ನು ಅಹವಾಲಿನ ನಂತರ ಮಾಧ್ಯಮದ ಜೋತೆ ಮಾತನಾಡಿದ ಕೆ.ಎನ್. ಫಣೀಂದ್ರ ಅವರು ಜನರು ಕೂಡ ಇಲ್ಲಿ ಎಚ್ಚರ ವಹಿಸುವದು ಸೂಕ್ತ ಜನರು ಯಾರಿಗೂ ಕೂಡ ಲಂಚ ಕೊಡುವ ಅಗತ್ಯ ಇಲ್ಲ.

ಇನ್ನು ಇಲ್ಲಿವರೆಗೆ 40 ಸಾರ್ವಜನಿಕ ಅಹವಾಲನ್ನು ಸ್ವಿಕರಿಸಲಾಗಿದೆ ಇನ್ನು ಇಂದು ಮತ್ತು ನಾಳೆ ಕೂಡ ಇದು ಮುಂದುವರಿಯುತ್ತದೆ ಮತ್ತು ಇಲ್ಲಿಯವರೆಗೆ 120 ಸಾರ್ವಜನಿಕ ಅಹವಾಲು ಸ್ವೀಕರಿಸುವದು ಬಾಕಿ ಇದ್ದು.ಅಧಿಕಾರಿಗಳು‌ ಅಕ್ಷರ ಕಲಿಯದೆ ಇದ್ದವರನ್ನು ಕಡೆಗಣಿಸದೆ ಅವರನ್ನು ಸಹ ತಮ್ಮ ಜೋತೆಗೆ ಕರೆದುಕೊಂಡು ಹೋಗಲು ತಿಳಿಸಿದರು..

 

ವರದಿ : ದೌಲಪ್ಪ ಮನಗೂಳಿ

error: Content is protected !!