ಯಮಕನಮರಡಿ ಮತಕ್ಷೇತ್ರದಲ್ಲಿ ಬರುವ ಗ್ರಾಮಗಳ ಕಾಮಗಾರಿಗೆ ಚಾಲನೆ

ಯಮಕನಮರಡಿ ಕರ್ನಾಟಕ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಸತೀಶ ಅಣ್ಣಾ ಜಾರಕಿಹೊಳಿ ಅವರು ಅನುದಾನದಲ್ಲಿ ಸಚಿವರ ಸೂಚನೆಯಂತೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ರಾಜ್ಯ ಯುವ ಪ್ರಧಾನ ಕಾರ್ಯದರ್ಶಿಗಳು ಹಾಗೂ ಡಿಸಿಸಿ ಬ್ಯಾಂಕಿನ ನಿರ್ದೇಶಕರಾದ ಶ್ರೀ ರಾಹುಲ್ ಅಣ್ಣಾ ಜಾರಕಿಹೊಳಿ ಅವರು ಯಮಕನಮರಡಿ ಮತಕ್ಷೇತ್ರದಲ್ಲಿ ಬರುವ

1)ವಿರಣಬಾಂವಿ = ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ 2 ಕೊಠಡಿ ಕಾಮಗಾರಿ ಪೂಜೆ 36 ಲಕ್ಷ ವೆಚ್ಚದಲ್ಲಿ

2) ಹೊಸ ಹೊಸುರ್ = ಗ್ರಾಮದಲ್ಲಿ ಅಂಗನವಾಡಿ ಕಟ್ಟಡ ಕಾಮಗಾರಿ ಪೂಜೆ 20 ಲಕ್ಷ ವೆಚ್ಚದಲ್ಲಿ

3) ಹೊಸ ಕೆಂಚನಟ್ಟಿ = ಗ್ರಾಮದಲ್ಲಿ ಒಂದು ಶಾಲಾ ಕೊಠಡಿ ನಿರ್ಮಾಣ ಕಾಮಗಾರಿ ಪೂಜೆ 14.50 ಲಕ್ಷ ವೆಚ್ಚದಲ್ಲಿ

4) ಹೊಸ ಹೆಗ್ಗೇರಿ = ಗ್ರಾಮದಲ್ಲಿ ಒಂದು ಶಾಲಾ ಕೊಠಡಿ ಕಾಮಗಾರಿಗೆ ಪೂಜೆ 14.50 ಲಕ್ಷ

5) ಹೂನಗಾ = ಗ್ರಾಮದ ಮರಾಠಿ ಶಾಲೆಯ ಶಾಲಾ ಕೊಠಡಿ ಕಾಮಗಾರಿಗೆ ಪೂಜೆ 18 ಲಕ್ಷ ವೆಚ್ಚದಲ್ಲಿ

6)ಗಂಗ್ಯಾನಾಳ = ಗ್ರಾಮದ ರಾಜು ಪಟ ಗೋಕರ್ ಇವರ ಮನೆಯಿಂದ ಭಜಂತ್ರಿ ಕೋಳಿ ಫಾರ್ಮ್ ವರಿಗೆ ರಸ್ತೆ ಡಾಂಬರೀಕರಣ ಕಾಮಗಾರಿ ಪೂಜೆ 60 ಲಕ್ಷ ವೆಚ್ಚದಲ್ಲಿ

7) ಕಾಕತಿ = ಗ್ರಾಮದಲ್ಲಿ ಡಾ. ಬಾಬು ಜಗಜೀವನ್ ರಾಮ್ ಭವನ್ ನಿರ್ಮಾಣ ಕಾಮಗಾರಿ ಪೂಜೆ 20 ಲಕ್ಷ ವೆಚ್ಚದಲ್ಲಿ

8) ಸೊನಟ್ಟಿ = ಗ್ರಾಮದಲ್ಲಿ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲಾ ಕೊಠಡಿ ಕಾಮಗಾರಿ ಪೂಜೆ 18 ಲಕ್ಷ ವೆಚ್ಚದಲ್ಲಿ

9) ಸೋನಟ್ಟಿ = ಕಾಕತಿ ಗ್ರಾಮದಿಂದ ಸೊನಟಿ ಗ್ರಾಮದವರಿಗೆ ರಸ್ತೆ ಡಾಂಬರೀಕರಣ ನಿರ್ಮಾಣ ಕಾಮಗಾರಿ ಪೂಜೆ 1 ಕೋಟಿ 50 ಲಕ್ಷ ವೆಚ್ಚದಲ್ಲಿ

ಈ ಕಾಮಗಾರಿಗಳಿಗೆ ಜನಪ್ರತಿನಿಧಿಗಳು ಮುಖಂಡರು ಗ್ರಾಮಸ್ಥರ ಜೊತೆಗೂಡಿ ಭೂಮಿ ಪೂಜೆ ಕಾರ್ಯಕ್ರಮವನ್ನು ನೆರವೇರಿಸಿದರು.

ಈ ಸಂದರ್ಭದಲ್ಲಿ ಸಚಿವರ ಆಪ್ತ ಸಹಾಯಕ ಶ್ರೀ ಮಾರುತಿ ಗುಟ್ಟಗುದ್ದಿ ಶೈಕ್ಷಣಿಕ ಆಪ್ತ ಸಹಾಯಕರಾದ ಶ್ರೀ ಜಂಗ್ಲಿ ಸಾಬ್ ನಾಯಕ್ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ಸಿದ್ದು ಅಣ್ಣಾ ಸುಣಗಾರ್ ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಸಿದ್ದಿಕ್ ಅಂಕಲಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಸಾಗರ ಪಿಂಗಟ ಯಲ್ಲಪ್ಪ ಕೊಳಿಕಾರ ಗ್ರಾಮ ಪಂಚಾಯತಿ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು sdmc ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಊರಿನ ಹಿರಿಯರು ಗ್ರಾಮಸ್ಥರು ಮುಖಂಡರು ಉಪಸ್ಥಿತರಿದ್ದರು.

ವರದಿ : ಸದಾನಂದ ಎಂ

error: Content is protected !!