ಹುಮನಾಬಾದ : ತಾಲೂಕಿನ ಘಾಟಬೋರಾಳ ಗ್ರಾಮದಲ್ಲಿ ಮಾಶಾಸನಾ ಫಲಾನುಭವಿಯಾದ ಸೋನಮ್ಮ ಅವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನ ವಿಕಾಸ ಕಾರ್ಯಕ್ರಮ ದಡಿಯಲ್ಲಿ ನೂತನ ವಾತ್ಸಲ್ಯ ಮನೆ ರಚನೆ ಮಾಡಿದ್ದು, ಮನೆ ಹಸ್ತಾಂತರ ಕಾರ್ಯಕ್ರಮವನ್ನು ಗ್ರಾಮ ಪಂಚಾಯತ ಅಧ್ಯಕ್ಷರಾದ ಪ್ರಭಾವತಿ ಅವರು ಹಸ್ತಾಂತರಿಸಿ, ನಂತರ ಮಾತನಾಡಿದ ಅವರು ಸಮಾಜ ಬದಲಾವಣೆಯಾಗಬೇಕಾದರೆ ಬದುಕಿಗೆ ಮೂಲಭೂತ ಸೌಕರ್ಯಗಳಲ್ಲಿ ಒಂದಾದ ಮನೆಯು ಪ್ರಮುಖವಾಗಿ ಜೀವನ ನಡೆಸಲು ಆಗತ್ಯತೆ ಇದೆ. ಗ್ರಾಮೀಣ ಭಾಗದ ನಿರ್ಗತಿಕರ ಜೀವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಾತ್ಸಲ್ಯ ಮನೆ ಎಂದು ನಾಮಕರಣ ಮಾಡಿ ನಿರ್ಮಿಸಿ ಕೊಟ್ಟು ಬಡವರ ಬಾಳಲ್ಲಿ ಬೇಳಕಾಗಿದೆ ಎಂದು ನುಡಿದರು.
ತಾಲೂಕಿನ ಯೋಜನಾಧಿಕಾರಿಗಳಾದ ವೀರೇಶ ಎನ್ ಅವರು, ನಿರ್ಗತಿಕ ಬಡ ಕುಟುಂಬಗಳಿಗೆ ಮನೆ ನಿರ್ಮಿಸಿಕೊಡುವುದರ ಮೂಲಕ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನೆರವಾಗಿದೆ. ಇಳಿ ವಯಸ್ಸಿನಲ್ಲಿ ಕುಟುಂಬಕ್ಕೆ ನೆಮ್ಮದಿ ಬೇಕಾದ ಸೂರನ್ನು ನಿರ್ಮಿಸಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು. ಕಾರ್ಯಕ್ರಮದಲ್ಲಿ, ಒಕ್ಕೂಟ ಅಧ್ಯಕ್ಷರಾದ ಸುರೇಖಾ, ಪ್ರಭು ಘಂಟೆ, ಲಕ್ಷ್ಮಣ, ಬಾಳು ಬೋಸ್, ಮೇಲ್ವಿಚಾರರು ರವಿ, ಜ್ಞಾನ ವಿಕಾಸ ಸಮನ್ವಾಧಿಕಾರಿ ಶೀಲಾ, ಶೋಭಾ, ಪ್ರಭಾವತಿ ಸೇವಾಪ್ರತಿನಿಧಿಯರು, ಸಂಘದ ಸದಸ್ಯರು ಇತರರು ಭಾಗವಹಿಸಿದರು.