BREAKING : ರಾಜ್ಯದಲ್ಲಿ ಬೆಚ್ಚಿ ಬೀಳಿಸೋ ಘಟನೆ : ರಾಯಚೂರಲ್ಲಿ ಕತ್ತು ಸೀಳಿ MSC ವಿದ್ಯಾರ್ಥಿನಿಯ ಬರ್ಬರ ಹತ್ಯೆ!

ರಾಯಚೂರು : ರಾಜ್ಯದಲ್ಲಿ ಇಂದು ಬೆಚ್ಚಿ ಬಿಳಿಸುವ ಘಟನೆ ನಡೆದಿದ್ದು ರಾಯಚೂರು ಜಿಲ್ಲೆಯಲ್ಲಿ ಕತ್ತು ಸೀಳಿ ಎಂ.ಎಸ್.ಸಿ ಓದುತ್ತಿದ್ದ ವಿದ್ಯಾರ್ಥಿನಿಯನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರಿನ ಹೊರಭಾಗದಲ್ಲಿ ಈ ಒಂದು ಭೀಕರ ಘಟನೆ ನಡೆದಿದೆ.

 

ಕೊಲೆಯಾದ ವಿದ್ಯಾರ್ಥಿನಿ ಶಿಫಾ 22ವರ್ಷ ಎಂದು ತಿಳಿದು ಬಂದಿದೆ,

ಸಿಂಧನೂರಿನ ಸರ್ಕಾರಿ ಕಾಲೇಜಿನಲ್ಲಿ ಎಂ ಎಸ್ ಸಿ ಓದುತ್ತಿದ್ದ ಶಿಫಾ ರಾಯಚೂರು ಜಿಲ್ಲೆಯ ಲಿಂಗಸೂರಿನ ನಿವಾಸಿಯಾಗಿದ್ದಾಳೆ.

ಪರಿಚಯಸ್ಥರೇ ವಿದ್ಯಾರ್ಥಿನಿ ಶಿಫಾಳನ್ನು ಕೊಲೆ ಮಾಡಿರುವ ಶಂಕೆ ಇದೀಗ ವ್ಯಕ್ತವಾಗುತ್ತಿದ್ದು ಘಟನಾ ಸ್ಥಳಕ್ಕೆ ಸಿಂಧನೂರು ಪಟ್ಟಣ ಪೊಲೀಸ್ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ,

ವರದಿ : ಗಾರಲದಿನ್ನಿ ವೀರನಗೌಡ

error: Content is protected !!