ಹುಮನಾಬಾದ ಬಡವಣೆಯ ಕೋಳಿವಾಡ ಹಾಗೂ ಬಿ.ಬಿ. ಗಲ್ಲಿಗೆ ಕ್ಷೇತ್ರದ ಶಾಸಕರಾದ.ಡಾ.ಸಿದ್ದು ಪಾಟೀಲ ರವರು ಪುರಸಭೆಯ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಸ್ಥಳಿಯ ನಿವಾಸಿಗಳ ಕುಂದುಕೊರತೆಗಳನ್ನು ಆಲಿಸಿ ನೆನೆಗುದ್ದಿಗೆ ಬಿದ್ದಿರುವ ಕಾಮಗಾರಿ ವೀಕ್ಷಣೆ ನಡೆಸಿದರು ಹಾಗೂ ಬಡವಣೆಯಲ್ಲಿ ನಿವಾಸಿಗಳಿಗೆ ಬೇಕಾಗಿರುವ ಸವಲತ್ತುಗಳನ್ನು ಪರಿಶೀಲಿಸಿ ಆದಷ್ಟು ಬೇಗ ಬಗೆಹರಿಸುವ ಭರವಸೆಯನ್ನು ಶಾಸಕರು ನೀಡಿದ್ದರು.
ಈ ಸಂದರ್ಭದಲ್ಲಿ ಪುರಸಭೆಯ ಮುಖ್ಯಾಧಿಕಾರಿ ಫಿರೋಜ್ ಖಾನ್ , ಇಂಜಿನಿಯರಿಂಗ್ ವಾಜಿದ , ವಿಶ್ವರಾಧ್ಯ ಅನೇಕ ಅಧಿಕಾರಿಗಳು ಹಾಗೂ ಪಕ್ಷದ ಮುಖಂಡರಾದ ಮಲ್ಲಿಕಾರ್ಜುನ ಸಿಗಿ, ಗಿರೀಶ್ ಪಾಟೀಲ, ಗೋಪಾಕೃಷ್ಣ ಮೋಹಳೆ , ಜ್ಞಾದೇವ ಧೂಮಾಲೆ , ಡಿ.ಎನ್.ಪತ್ರಿ , ನಾಗಭೂಷಣ ಸಂಗಮ , ಗಿರೀಶ ತುಂಬಾ , ಸಂತೋಷ ನವಾದಗಿ , ಕಿಶೋರ್ ನಟ್ಟಿ , ಲಖನ್ ಕೋಳಿವಾಡ , ಸಂತೋಷ ಸಂಗಮ, ರಮೇಶ ಕಲ್ಲೂರ , ಶಿವಲಿಂಗ ಸ್ವಾಮಿ ಉಪಸ್ಥಿತರಿದ್ದರು.