ಗಬ್ಬೂರು: ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದ ಉನ್ನತೀಕರಿಸಿದ ಬಾಲಕಿಯರ ಸರ್ಕಾರಿ ಪ್ರಾಥಮಿಕ ಕನ್ಯಾ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟದಲ್ಲಿ ಸುಮಾರು ದಿನಗಳಿಂದ ನಿತ್ಯ ಊಟದಲ್ಲಿ ಹುಳುಗಳು ಕಾಣಿಸುತಿದ್ದು. ಆದರೆ ಶಾಲೆಯಲ್ಲಿ ಇತ್ತೀಚೆಗೆ ಮಧ್ಯಾಹ್ನದ ಬಿಸಿಯೂಟದಲ್ಲಿ ಹುಳುಗಳು ಪತ್ತೆಯಾಗಿದೆ. ಇದನ್ನು ಕಂಡ ವಿದ್ಯಾರ್ಥಿಗಳು ಕಂಗಾಲಾಗಿ ಹೆದರಿ ಮನೆಯಿಂದ ಶಾಲೆಗೆ ವಿದ್ಯಾರ್ಥಿಗಳು ಊಟ ತಂದು ಮಾಡುತ್ತಿದ್ದಾರೆ.
ಇಂದು ಎಸ್.ಡಿ.ಎಂ.ಸಿ ರಚನೆ ಸಭೆ ಕರೆಯಲಾಗಿತ್ತು ಆದ್ದರಿಂದ ಮಕ್ಕಳ ಪಾಲಕರು ಶಾಲೆಗೆ ಬಂದಾಗ ಶಾಲೆಯಲ್ಲಿ ಮೊದಲು ಬಿಸಿಯೂಟದ ಬಗ್ಗೆ ಚರ್ಚಿಸಿದರು. ನಂತರ ಮಧ್ಯಾಹ್ನದ ಬಿಸಿಯೂಟದಲ್ಲಿ ಕಳೆದ ವರ್ಷದಂದೆ ಮತ್ತೆ ಹುಳುಗಳು ಪತ್ತೆಯಾಗಿದ್ದು ಕಂಡು ಮಕ್ಕಳು ಗಾಬರಿಗೊಂಡಿದ್ದನ್ನು ನೋಡಿ ಭಯಬೀತರಾದ ಮಕ್ಕಳ ಪಾಲಕರು ಕೂಡಲೇ ಶಾಲೆಗೆ ಆಗಮಿಸಿ ವಿಚಾರ ಮಾಡಿದಾಗ, ಅಲ್ಲಿನ ಮುಖ್ಯ ಶಿಕ್ಷಕರು ಉಡಾಫೆ ಉತ್ತರ ನೀಡಿದ್ದಾರೆ.
ಪ್ರತಿದಿನ ಶಾಲೆಯಲ್ಲಿ ತಯಾರಿಸಿದ ಬಿಸಿಯೂಟವನ್ನು ಮಕ್ಕಳಿಗೆ ಕೊಡುವ ಮುನ್ನ ಶಿಕ್ಷಕರು ಸೇವಿಸಿ ದೃಢೀಕರಣ ಮಾಡಿದ ನಂತರವೇ ಶಾಲಾ ಮಕ್ಕಳಿಗೆ ನೀಡುವ ನಿಯಮವಿದೆ. ಆದರೆ ನಿಯಮ ಪಾಲಿಸದಿರುವುದು ಮಕ್ಕಳ ಮೇಲೆ ಪ್ರಭಾವ ಬೀರಿದೆ.
ಈ ಬಗ್ಗೆ ವಿಚಾರ ತಿಳಿದ ಪೋಷಕರು ಶಾಲೆಗೆ ಆಗಮಿಸಿ ಪರಿಶೀಲಿಸಿದಾಗ ಊಟದಲ್ಲಿ ಹುಳುಗಳು ಕಂಡು ಬಂದಿದ್ದು, ತಕ್ಷಣ ಬಿಸಿಯೂಟದ ಮುಖ್ಯ ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡಿದ್ದರೆ.
ಮುಖ್ಯ ಗುರುಗಳ ನಿರ್ಲಕ್ಷ್ಯ: ಈ ಘಟನೆಗೆ ಮುಖ್ಯ ಕಾರಣ ಅಲ್ಲಿನ ಮುಖ್ಯ ಗುರುಗಳೇ ಕಾರಣರಾಗಿದ್ದಾರೆ, ಅವರು ಮಕ್ಕಳಿಗೆ ನೀಡುವ ಊಟವನ್ನು ಪರೀಕ್ಷೆ ಮಾಡುವುದಿಲ್ಲ ಮತ್ತು ಸಹ ಶಿಕ್ಷಕರು ಸಹ ಊಟದ ಪರೀಕ್ಷೆ ಮಾಡುವುದಿಲ್ಲ ಕೂಡಲೇ ಮುಖ್ಯ ಶಿಕ್ಷಕರನ್ನು ಅಮಾನತ್ತು ಮಾಡಬೇಕೆಂದು ಎಂದು ಮಕ್ಕಳ ಪಾಲಕರಾದ ಶಿವಗೇನಿ ಅತ್ತನೂರು, ಮಾರ್ತಾಂಡ ಗಬ್ಬೂರು ಅವರು ಆರೋಪಿಸಿದ್ದಾರೆ.
ಕೋಟ್:
ಕನ್ಯಾ ಶಾಲೆಯಲ್ಲಿ ಕಳೆದ ಒಂದು ವಾರದಿಂದ ಬಿಸಿಯೂಟದಲ್ಲಿ ಹುಳುಗಳು ಪತ್ತೆಯಾಗುತ್ತಿವೆ ಅದರ ಬಗ್ಗೆ ಮುಖ್ಯ ಶಿಕ್ಷಕರಿಗೆ ಮಾಹಿತಿ ತಿಳಿಸಿದರು ಕೂಡ ನಿರ್ಲಕ್ಷ್ಯತನದಿಂದ ಬಿಸಿಯೂಟದಲ್ಲಿ ಹುಳುಗಳು ಬರುತ್ತಿವೆ, ಹುಳುಗಳು ಬರುವ ಊಟ ತಿಂದು ಮಕ್ಕಳಿಗೆ ಅನಾಹುತ ಆದರೆ ಇದೆ ಯಾರು ಹೊಣೆ ಸ್ವಾಮಿ ಕೂಡಲೇ ಮುಖ್ಯ ಶಿಕ್ಷಕ ಶಿವಪ್ಪ ಹೂಗಾರ ಅವರನ್ನು ಅಮಾನತು ಮಾಡಬೇಕೆಂದು ಒತ್ತಾಯ.
ಹೇಳಿಕೆ : ಇದೆ ಮೊದಲ ಬಾರಿ ಈ ರೀತಿ ಘಟನೆ ನಡೆದಿದೆ ಸಂಪೂರ್ಣ ಅಕ್ಕಿಯನ್ನು ಬದಲಿಸುತ್ತೇನೆ ಇನ್ನೊಂದು ಬಾರಿ ಈ ರೀತಿಯ ಘಟನೆ ನಡೆಯದಂತೆ ನೋಡಿಕೊಳ್ಳುತ್ತೇನೆ
– ಶಿವಪ್ಪ ಹೂಗಾರ್ (ಮುಖ್ಯ್ಯೊಪಾಧ್ಯರು)