ದೇವದುರ್ಗ : ಗಬ್ಬೂರು ತಾಲೂಕಿನ ಗಬ್ಬೂರು ಗ್ರಾಮದಲ್ಲಿನ 4ನೇ ವಾರ್ಡನಲ್ಲಿ ಇರುವಂತಹ ಎಸ್.ಸಿ ಕಾಲೋನಿ ಸಾರ್ವಜನಿಕ ಸರಕಾರಿ ಮಹಿಳ ಶೌಚಾಲಯವನ್ನು ಸುಮಾರು 20-25 ವರ್ಷದಿಂದ ಇರುವಂತ ಮಹಿಳ ಶೌಚಾಲಯವನ್ನು ಏಕಾಏಕಿ ದ್ವಾಂಸ ಮಾಡಿರುತ್ತಾರೆ. ಇದ್ದನು ಪ್ರಶ್ನೆ ಮಾಡಿದ ಮಹಿಳೆಯರಿಗೆ ಅವಶ್ಯ ಶಬ್ದದಿಂದ ಬೈದಿರುತ್ತಾರೆ ಮತ್ತು ನಾವುಗಳು ಪ್ರಶ್ನೆ ಮಾಡಿದಾಗ ಆಕ್ರೋಶದಿಂದ ಇದು ನನ್ನ ಜಾಗ ಏನೂ ಮಾಡಿಕ್ಕೊತ್ತಿರೊ ಮಾಡಿಕ್ಕೊಳ್ಳಿ ಎಂದು ದರ್ಪದಿಂದ ಮಾತನಾಡಿದ್ದಾರೆ. ನಮ್ಮ ಸರ್ವೇ ನಂಬರಿನಲ್ಲಿ ಇದೆ ಎಂದು ವಾರಸುದಾರರು ಅಲ್ಲದಂತ ವ್ಯಕ್ತಿಗಳು ಆ ಶೌಚಾಲಯವನ್ನು ಸಂಪೂರ್ಣ ನೆಲಸಮ ಮಾಡಿ ಆ ಭಾಗದಲ್ಲಿ ಇರುವಂತ ಮಹಿಳೆಯರಿಗೆ ಮಾನಸಿಕವಾಗಿ ಬಹಳಷ್ಟು ಅವಮಾನ ಪಡಿಸಿರುತ್ತಾರೆ. ಅದನ್ನು ಕೆಳುವುದಕ್ಕೆ ಗ್ರಾ.ಪಂ.ಅಭಿವೃಧಿ ಅಧಿಕಾರಿಗಳನ್ನು ಕೇಳಿದರೆ, ಅದು ಅವರ ಸರ್ವೇ ನಂಬರ್ ಬಂದಿರುತ್ತದೆ ಎಂದು ಆ ರೀತಿ ಉತ್ತರ ಹೇಳುತ್ತಿದ್ದಾರೆ. ಆದರೆ ಸುಮಾರು 20-25 ವರ್ಷ ಈ ಭೂ ಮಾಲಿಕರು ಅಂತ ಹೇಳುವ ಶೇಖ್ ಮಹಿಬೂಬ ಬಾಷಾ ತಂದೆ ಶೇಖ್ ಅಲ್ಲಾಭಕ್ಷ ಎಲ್ಲಿಗೆ ಹೋಗಿದ್ದರು ಎನ್ನುವ ಪ್ರಶ್ನೆ ಕಾಡುತ್ತದೆ. ಆದರೆ ಒಂದು ಸರಕಾರಿ ಸಾರ್ವಜನಿಕ ಶೌಚಾಲಯವನ್ನು ಕೆಡವಿದಂತ ಈ ಭೂಗಳ್ಳರ ಮೇಲೆ ಕ್ರೀಮಿನಲ್ ಮೊಕದ್ದಮೆ ಹೂಡಬೇಕೆಂದು ಮತ್ತು ಆ ಭಾಗದಲ್ಲಿರುವಂತ ಮಹಿಳೆಯರ ಮಾನ ಕಾಪಡುವುದ್ದಕೆ ಆದಷ್ಟು ಬೇಗನೆ ಹೊಸದಾಗಿ ಶೌಚಾಲಯವನ್ನು ನಿರ್ಮಿಸಿ ಕೂಡಬೇಕೆಂದು ಈ ಮೂಲಕ ದಲಿತ ಪರ ಸಂಘಟನೆಯು ಒಕ್ಕೂಟ ಗಬ್ಬರು ತಮ್ಮಲ್ಲಿ ಒತ್ತಾಯ ಪಡೆಸುತ್ತದೆ. ಅದಷ್ಟು ಬೇಗನೆ ನಿರ್ಮಿಸದೆ ಹೊದರೆ ಮುಂದಿನ ದಿನಗಳಲ್ಲಿ ಮಹಿಳೆಯರನ್ನು ಕರೆ ತಂದು ತಮ್ಮ ಕಾರ್ಯಲಯದ ಮುಂದೆ ಉಗ್ರವಾದ ಹೋರಾಟವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಬಸವರಾಜ ಸೂರಿ ದಲಿತ ಮುಖಂಡರು ಬಸವರಾಜ್ ಜಗ್ಲಿ ಡಿ.ಎಸ್.ಎಸ್.ತಾ.ಅಧ್ಯಕ್ಷರು ಬೀಮೃತಪ್ಪ ಭಂಡಾರಿ ಗುಂಟ್ವಾಳ ಡಿ.ಎಸ್.ಎಸ್.ಜಿ ಅಧ್ಯಕ್ಷರು ರಮೇಶ್ ಇಡಿಚೇಡ್ ಡಿ.ಎಸ್.ಎಸ್ ಗ್ರಾ ಅಧ್ಯಕ್ಷರು ಹುಲಿಗೇಶ ಮುದಗಲ್ ಡಿ.ಎಸ್.ಎಸ್.ಸಂ.ಕಾ ಅಧ್ಯಕ್ಷರು ರಾಜಾಹುಲಿ ಸಿಂಗ್ರಿ ಡಿ.ಎಸ್.ಎಸ್.ಹೋ.ಅಧ್ಯಕ್ಷರು ಇನ್ನಿತರರು ಮನವಿ ಸಲ್ಲಿಸಿ ಒತ್ತಾಯಿಸಿದರು.