ದೇವದುರ್ಗ : ತಾಲೂಕಿನ ಹೇಮನಾಳ ಗ್ರಾಮ ಪಂಚಾಯಿತಿಯ ವ್ಯಾಪ್ತಿಗೆ ಬರುವ ಖಾನಾಪೂರ ಗ್ರಾಮಕ್ಕೆ ಕುಡಿಯುವ ನೀರಿನ ಸಮಸ್ಯೆ ಇದ್ದು ಕರ್ನಾಟಕ ಜಾತ್ಯಾತೀತ ಯುವಶಕ್ತಿ ವೇದಿಕೆ ಯ ಅಲ್ಪಸಂಖ್ಯಾತರ ಘಟಕ ರಾಜ್ಯಾಧ್ಯಕ್ಷರಾದ ಗೋಕುಲ್ ಸಾಬ್ ರವರ ನೇತೃತ್ವದಲ್ಲಿ ಮತ್ತು ಸಂಸ್ಥಾಪಕ ರಾಜ್ಯ ಕಾರ್ಯಧ್ಯಕ್ಷರಾದ ಶಿವಕುಮಾರ್ ರವರ ಅನುಮತಿ ಮೇರೆಗೆ ಹೇಮನಾಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಖಾನಾಪುರ ಗ್ರಾಮದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮತ್ತು ಹೆಣ್ಣು ಮಕ್ಕಳ ಮತ್ತು ಹಿರಿಯ ನಾಗರೀಕರಿಗೆ ಹೈಟೆಕ್ ಶೌಚಾಲಯ ನಿರ್ಮಾಣ ಮಾಡಿಸಿಕೊಡಬೇಕೆಂದು ಗ್ರಾಮಸ್ಥರ ಕುಂದು ಕೊರತೆಬಗ್ಗೆ ಅಹಾವಲು ಹೇಳಿಕೊಂಡ ಸಲುವಾಗಿ ತಾಲ್ಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಭಿಯಂತರರಿಗೆ ಸೌಲಭ್ಯ ಕಲ್ಪಿಸಿಕೊಡಬೇಕೆಂದು ಪತ್ರದ ಮೂಲಕ ಮನವಿ ಸಲ್ಲಿಸಿದರು,
ಈ ಸಂದರ್ಭದಲ್ಲಿ ಸಂಘಟನೆಯ ಮಹಿಳಾ ಘಟಕದ ರಾಜ್ಯ ಉಪಾಧ್ಯಕ್ಷರಾದ ಅನಿತಾ, ಅಲ್ಪಸಂಖ್ಯಾತರ ಘಟಕದ ಮಹಿಳಾ ಜಿಲ್ಲಾ ಅಧ್ಯಕ್ಷರಾದ ಕೌಸರ್, ಮಹಿಳಾ ತಾಲ್ಲೂಕು ಅಧ್ಯಕ್ಷರಾದ ಬಿ.ಬಿ ಫಾತಿಮಾ, ಕಾರ್ಮಿಕ ಘಟಕದ ತಾಲ್ಲೂಕು ಅಧ್ಯಕ್ಷರಾದ ಪ್ಯಾಟಿಪ್ಪ ಮೇತ್ರಿ ತಾಲ್ಲೂಕು ಗೌರವ ಅಧ್ಯಕ್ಷರಾದ ಭೀಮಯ್ಯ ಕೊತ್ತದೊಡ್ಡಿ, ಹಾಗೂ ಖಾಜಾಸಾಬ್ ಮಸರಕಲ್, ಅಲ್ಪಸಂಖ್ಯಾತರ ಘಟಕದ ತಾಲ್ಲೂಕು ಕಾರ್ಯದರ್ಶಿಯಾದ ವಲಿ ಸಾಬ್ ಹಾಗೂ ಇತರೆ ತಾಲ್ಲೂಕು ಸದಸ್ಯರುಗಳು ಮತ್ತು ಮಹಿಳಾ ಸದಸ್ಯರುಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.