ಚಿಂಚೋಳಿ ತಾಲ್ಲೂಕಿನ, ಪೋಲಕಪಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಮ್ಯಾಟ್ರಿಕ್ಸ್ ಆಗ್ರೋ ಪವರ್ ಲಿ. ಕಂಪನಿ [ವಿದ್ಯುತ್ ಘಟಕ] ಚಿಂಚೋಳಿಯು ಸ್ಥಾಪನೆಗೊಂಡು ಸುಮಾರು ವರ್ಷಗಳಾಗಿವೆ. ಕಂಪನಿಯು ಭಾರತ ಸಂವಿಧಾನದ ಕಂಪನಿ ಕಾಯ್ದೆಗಳ ಮತ್ತು ಪರಿಸರ ಮಾಲಿನ್ಯ ಕಾಯ್ದೆಗಳ ನಿಯಮಗಳ ಹಾಗೂ ಮಾರ್ಗ ಸೂಚಿಗಳನ್ನು ಪಾಲಿಸದೇ ಕಂಪನಿಯಿಂದ ಅತ್ಯಾಧಿಕ ಕಪ್ಪು ಹೊಗೆ ಸೂಸುತ್ತಿರುವುದರಿಂದ, ಕಂಪನಿಯ ಒಳಗೆ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗಳ ಮೇಲೆ ಮತ್ತು ಕಂಪನಿಯ ಸುತ್ತ-ಮುತ್ತಲಿನ ಪ್ರದೇಶಗಳಲ್ಲಿ ವಾಸಿಸುತ್ತಿರುವ ಗರ್ಬಿಣಿಯರು, ಕಿಶೋರಿಯರು ಹಾಗೂ ಕೂದಲೆಳೆಯ ಅಂತರದಲ್ಲಿರುವ ವಸತಿ ನಿಲಯಗಳ ಮತ್ತು ಶಾಲಾ-ಕಾಲೇಜು ವಿದ್ಯಾರ್ಥಿಗಳ ಆರೋಗ್ಯದ ದುಷ್ಪರಿಣಾಮ ಬೀಳುತ್ತಿವೆ.
ಕಂಪನಿಯ ಮೇಲೆ ಕಂಪನಿ ಕಾಯ್ದೆ ಮತ್ತು ಪರಿಸರ ಕಾಯ್ದೆಗಳಂತೆ ಸೂಕ್ತ ಕ್ರಮ ಕೈಗೊಂಡು, ತಾಲೂಕಿನ ವಿದ್ಯಾರ್ಥಿ ಮತ್ತು ಮಕ್ಕಳು ಗರ್ಭಿಣಿಯರು, ಕಿಶೋರಿಯರ ಆರೋಗ್ಯ ಹಾಳಾಗದಂತೆ ಜಾಗೃತಿ ವಹಿಸಬೇಕೆಂದು ರಾಜ್ಯ ಮಾಹಿತಿ ಹಕ್ಕು ಹಾಗೂ ಸಾಮಾಜಿಕ ಕಾರ್ಯಕರ್ತರ ವೇದಿಕೆ ತಾಲೂಕ ಘಟಕದ ವತಿಯಿಂದ ಮನವಿ ಪತ್ರವನ್ನು ತಾಲೂಕ ದಂಡಾಧಿಕಾರಿಗಳ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷ ಅನಿಲ್ ಕುಮಾರ್ ಬಿರಾದಾರ, ಕುರುಬ ಸಮಾಜ ಅಧ್ಯಕ್ಷ ಹನುಮಂತ್ ಪೂಜಾರಿ
ಬಾಂಸೇಫ್ ಜಿಲ್ಲಾ ನಾಯಕ ಗೋಪಾಲ್ ಗಾರಂಪಳ್ಳಿ, ದಲಿತ ಸೇನೆ ಯುವ ಘಟಕ ಅಧ್ಯಕ್ಷ ಚೇತನ್ ನಿರಾಳಕರ್, ಮಂಜೂರು ಅಹಮದ್, ಅಶ್ವತ ಕಟ್ಟಿಮನಿ, ಸಾಗರ್, ತಾಹಿರ್ ಇನ್ನೂ ಹಲವರು ಉಪಸ್ಥಿತರಿದ್ದರು.
ವರದಿ : ರಾಜೇಂದ್ರ ಪ್ರಸಾದ್