ಬೀದರ್ : ನಗರದ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಇಂದು ಬೀದರ ಜಿಲ್ಲಾ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಜಿಲ್ಲಾ ಲೀಡ್ ಬ್ಯಾಂಕ್ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಸಲಹಾ ಪರಿಶೀಲನೆ ಸಮಿತಿ ಸಭೆ ನಡೆಯಿತು, ಇದರ ಅಧ್ಯಕ್ಷತೆಯನ್ನು ವಹಿಸಿಕೊಂಡ ಸಾಗರ ಖಂಡ್ರೆ ಲೋಕ್ ಸಭ ಸದಸ್ಯ ರವರು, (DCC) ಹಾಗೂ ಜಿಲ್ಲಾ ಮಟ್ಟದ ಪರಿಶೀಲನಾ ಸಮಿತಿ (DLRC) ಸಭೆ ನಡೆಸಿದರು
ಬ್ಯಾಂಕ್ ಅಧಿಕಾರಿಗಳೊಂದಿಗೆ ನಡೆದ ಈ ಸಭೆಯಲ್ಲಿ, ಪಿಎಂ ವಿಶ್ವಕರ್ಮ, ಮುದ್ರಾ, ಪಿಎಂಇಜಿಪಿ ಮತ್ತು ಪಿಎಂ ಸೋಶಿಯಲ್ ಸೆಕ್ಯೂರಿಟಿ ಯೋಜನೆಗಳು ಸೇರಿದಂತೆ ಕೃಷಿ ಸಾಲ, ಶಿಕ್ಷಣ ಸಾಲಗಳ ಅನುಷ್ಠಾನ ಮತ್ತು ಪ್ರಗತಿಯ ಕುರಿತು ಪರಿಶೀಲನೆ ಮಾಡಿದರು,ಹಾಗೂ ಬ್ಯಾಂಕುಗಳು ರೈತರಿಗೆ ಕೃಷಿ ಸಾಲ ನಿರಾಕರಿಸದಂತೆ ಮತ್ತು ವಿದ್ಯಾರ್ಥಿಗಳಿಗೆ ಶಿಕ್ಷಣ ಸಾಲಗಳನ್ನು ಆರ್‌ಬಿಐ ನಿಯಮದಂತೆ ಯಾವುದೇ ಭದ್ರತೆ (Security) ಪಡೆಯದೇ ಸಾಲ ನೀಡಲು ಸಲಹೆ ನೀಡಿ ಅಧಿಕಾರಿಗಳಿಗೆ ಸೂಚಿಸಿದರು.
ರೈತರು ಮತ್ತು ವಿದ್ಯಾರ್ಥಿಗಳು ಸಾಲ ಪಡೆಯುವಲ್ಲಿ ಯಾವುದೇ ಅಡೆತಡೆಯಾಗಬಾರದು ಎಂದು ಅಧಿಕಾರಿಗಳಿಗೆ ತಿಳಿಸಿದರು ಇದೆ ವೇಳೆ ಜನರಿಗೆ ಸುಲಭ ಬ್ಯಾಂಕಿಂಗ್ ಸೇವೆ ಒದಗಿಸುವ ನಿಟ್ಟಿನಲ್ಲಿ ಭಾಲ್ಕಿ ತಾಲೂಕಿನ ಮೆಹಕರ್ ಮತ್ತು ಔರಾದ್ (B)ನಲ್ಲಿ ನೂತನ ಎಸ್‌ಬಿಐ ಶಾಖೆ ತೆರೆಯುವ ಸಾಧ್ಯತೆಗಳ ಬಗ್ಗೆ ಸಮೀಕ್ಷೆ ನಡೆಸಿ ವರದಿ ನೀಡುವಂತೆ ಬ್ಯಾಂಕ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು, ಸಭೆಯಲ್ಲಿ ಗಿರೀಶ್ ಭದೊಲೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬೀದರ್, ಹಾಗೂ ವಿವಿಧ ಬ್ಯಾಂಕ್ ಅಧಿಕಾರಿಗಳು ಉಪಸ್ಥಿತರಿದ್ದರು.
ವರದಿ :-ಪ್ರದೀಪ್ ಕುಮಾರ್ ದಾದಾನೂರ್