ಕುಡಳ್ಳಿ ಗ್ರಾಮದಲ್ಲಿ ಭರದಿಂದ ಸಾಗಿದ ಉದ್ಯೋಗ ಖಾತ್ರಿ ಯೋಜನೆ ಕೂಲಿ ಕಾರ್ಮಿಕರ ಬೆಂಬಲಕ್ಕೆ ನಿಂತ ದಲಿತ ಸೇನೆ

ಕಾಳಗಿ ತಾಲೂಕಿನ ಹೊಡೆಬೀರನಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ಕುಡ್ದಳಿ ಗ್ರಾಮದಲ್ಲಿ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೂಲಿ ಕಾರ್ಮಿಕರು, ಕೇಂದ್ರ ಸರಕಾರದ ಮಹತ್ತರ ಯೋಜನೆಯದ ಉದ್ಯೋಗ ಖಾತ್ರಿಯು ದೇಶದ ಜನತೆಯು ಸ್ವಾವಲಂಬಿ ಜೀವನ ನಡೆಸಲು ಸಹಕರಿಯಾಗಿದೆ, ಅನೇಕ ಕೂಲಿಕಾರ್ಮಿಕರು ಗ್ರಾಮಗಳಿಂದ ಪಟ್ಟಣಕ್ಕೆ ಕೆಲಸ ಅರಸಿ ಹೋಗುವ ಬಡ ಕುಟುಂಬಗಳಿಗೆ ದಲಿತ ಸೇನೆ ತಾಲೂಕು ಘಟಕ ಕಾಳಗಿಕಾರ್ಯಕರ್ತರ ನೇತೃತ್ವದಲ್ಲಿ ದುಡಿಯುವ ಕೈಗಳಿಗೆ ಕೆಲಸ ಕೊಡಿಸಲಾಯಿತು ಹಾಗೂ ಉದ್ಯೋಗ ಖಾತ್ರಿ ಯೋಜನೆಯಲ್ಲಿ ತಮ್ಮ ಗ್ರಾಮದಲ್ಲಿಯೇ ಉದ್ಯೋಗ ಮಾಡಲು ಅನುಕೂಲ ಮಾಡಿಲಾಯಿತು , ಕೆಲಸ ಮಾಡುತ್ತಿದ ಕೂಲಿ ಕಾರ್ಮಿಕರನ್ನು ದಲಿತ ಸೇನೆ ತಾಲೂಕು ಸಮೀತಿ ಕಾಳಗಿ ಪದಾಧಿಕರು ಭೇಟಿಯಾಗಿ ಕೂಲಿ ಕಾರ್ಮಿಕರ ಕುಂದುಕೊರತೆ ವಿಚಾರಿಸಲಾಯಿತು, ಈ ಸಂಧರ್ಭದಲ್ಲಿ ಕಾಳಗಿ ತಾಲೂಕು ದಲಿತ ಸೇನೆ ಅಧ್ಯಕ್ಷ ನಾಗರಾಜ್ ಬೇವಿನಕರ್, ಕಾರ್ಯಧ್ಯಕ್ಷ ರಮೇಶ ಕುಡಳ್ಳಿ, ಖತಲಪ್ಪ ವಜಿರಗಾವ್, ಹಾಗೂ ಅನೇಕ ಕೂಲಿ ಕಾರ್ಮಿಕರು ಹಾಜರಿದ್ದರು.

ವರದಿ : ರಮೇಶ್ ಕುಡಳ್ಳಿ

error: Content is protected !!