ಬ್ಯಾಡ್ಮಿಂಟನ್ ಸಿಂಗಲ್ ಮತ್ತು ಡಬಲ್ಸ್ ನಲ್ಲಿ ಸರ್ಕಾರಿ ಮಾದರಿ ಹೆಣ್ಣು ಮಕ್ಕಳ ಶಾಲೆ ಚಾಂದಕವಟೆ ದೈಹಿಕ ಶಿಕ್ಷಕ ಪ್ರವೀಣ್ ಕುಮಾರ್ ಭರ್ಜರಿ ಗೆಲುವು

ಕರ್ನಾಟಕ ಸರ್ಕಾರ ಜಿಲ್ಲಾ ಪಂಚಾಯತ್ ಬಿಜಾಪುರ್ ವತಿಯಿಂದ ರಾಜ್ಯ ಸರ್ಕಾರಿ ದೈಹಿಕ ಶಿಕ್ಷಕರ ಕ್ರೀಡಾಕೂಟವನ್ನು ಬಿಜಾಪುರದ ಡಾ. ಬಿಆರ್ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿತ್ತು.

ಈ ಕ್ರೀಡಾಕೂಟದಲ್ಲಿ ಭಾಗವಹಿಸಿ ಬ್ಯಾಡ್ಮಿಂಟನ್ ಸಿಂಗಲ್ ಮತ್ತು ಡಬಲ್ಸ್ ನಲ್ಲಿ ಪ್ರವೀಣ್ ಕುಮಾರ್ ಸಾ ಬಿರಾದಾರ್ ಸರ್ಕಾರಿ ಮಾದರಿ ಹೆಣ್ಣು ಮಕ್ಕಳ ಶಾಲೆ ಚಾಂದಕವಟೆ ಇವರು ಪ್ರಥಮ ಸ್ಥಾನವನ್ನ ಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಆದ ಪ್ರಯುಕ್ತ ಸಿಂದಗಿ ತಾಲೂಕಿನ ದೈಹಿಕ ಪರಿವೀಕ್ಷಕರು, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿಗಳು ಹಾಗೂ ಸಿಂದಗಿ ತಾಲೂಕಿನ ಎಲ್ಲಾ ದೈಹಿಕ ಶಿಕ್ಷಕರು ಅಭಿನಂದನೆ ಸಲ್ಲಿಸಿದರು.

ವರದಿ : ವಿರೇಶ್ ಮಠ

error: Content is protected !!