ಅಥಣಿ : ಜಾಧವಜಿ ಶಿಕ್ಷಣ ಸಂಸ್ಥೆಯ ಜೆ.ಎ.ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಮಾರ್ಚ 8 ನೇ ತಾರೀಖಿನಂದು ” ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ” ಕಾರ್ಯಕ್ರಮ ಮಾಡಲಾಯಿತು. ಕಾರ್ಯಕ್ರಮದಲ್ಲಿ ಕಾಲೇಜು ಪ್ರಾಚಾರ್ಯರ ಶ್ರೀ ಎಮ್.ಪಿ.ಮೇತ್ರಿ ಮಾತನಾಡಿ ಮಹಿಳೆಯರು ಇಂದು ಎಲ್ಲ ಕ್ಷೇತ್ರದಲ್ಲಿ ಮಂಚೂಣಿ ಸ್ಥಾನದಲ್ಲಿದ್ದು ದೇಶದ ಅಭಿವೃದ್ಧಿಯಲ್ಲಿ ಅವರ ಕೊಡುಗೆ ಗಣನೀಯವಾಗಿದೆ ಎಂದರು.ಭಾರತ ಮಹಿಳೆಯರನ್ನು ಪೂಜ್ಯನೀಯ ಭಾವದಿಂದ ನೋಡಲಾಗುತ್ತದೆ.ಕುಟುಂಬದಲ್ಲಿ ಅವರ ಪಾತ್ರ ಬಹಳಷ್ಟು ಪ್ರಮುಖವಾಗಿರುತ್ತದೆ.ಅದಕ್ಕೆ ನಮ್ಮ ಹಿರಿಯರು ಮನೆಯೇ ಮೊದಲ ಪಾಠ ಶಾಲೆ,ಜನನಿ ತಾನೇ ಮೊದಲು ಗುರು,ಜನನಿಯಿಂದ ಕಲಿತ ಜನರು ಪುಣ್ಯವಂತರು ಎಂದು ಹೇಳಿದರು.ನಂತರ ಶ್ರೀ ಎನ್ ಚಂದ್ರಶೇಖರ ಮಾತನಾಡಿದರು ಕಾಲೇಜಿನ ಎಲ್ಲ ಸಿಬ್ಬಂದಿ ವರ್ಗದವರು ಮಹಿಳಾ ಸಿಬ್ಬಂದಿ ವರ್ಗದವರಿಗೆ ಸಿಹಿ ಹಂಚಿ ಸಂಭ್ರಮಿಸಿದರು.
ವರದಿ : ಭರತೇಶ್ ನಿಡೋಣಿ