ಶ್ರೀ ಮಹರ್ಷಿ ವಾಲ್ಮೀಕಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನೀ ನೋಂದಣಿ ಸದಸ್ಯರ ಸಭೆ

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಶ್ರೀ ಮಹರ್ಷಿ ವಾಲ್ಮೀಕಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನೀ ಸುರಪುರ ಜಿಲ್ಲಾ ಯಾದಗೀರ ಸುರಪುರ ಹಾಗೂ ಹುಣಸಗಿ ಕಾರ್ಯ ವ್ಯಾಪ್ತಿಗೊಂದು ರಾಜಾ ಮುಕುಂದ ನಾಯಕ್ ಇವರ ನೇತೃತ್ವದಲ್ಲಿ ಸ್ಥಾಪನೆ ಯಾಗುತ್ತಿರುವ ಶ್ರೀ ಮಹರ್ಷಿ ವಾಲ್ಮೀಕಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನೀ ಇದರ ನೋಂದಣಿ ಸದಸ್ಯರಾಗಿ ಹಿಂದು ದೇವರಗೋನಾಲ ಗ್ರಾಮದ ಶ್ರೀ ಹೈಯಾಳಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಸಭೆ ಸೇರಲಾಯಿತು ಈಶ್ವರ್ ಶಿಕ್ಷಕರು ಸ್ವಾಗತಿಸಿದರು,

ನಂತರ ಮಾತನಾಡಿದ ಮುಖಂಡರಾದ ದೊಡ್ಡ ದೇಸಾಯಿ ಅವರು ಎಲ್ಲಾ ಸಮಾಜದ ಬ್ಯಾಂಕುಗಳು ಸುಮಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ,

ನಮ್ಮ ಸಮುದಾಯದ ಈ ಬ್ಯಾಂಕು ಇಂದು ಕಾರ್ಯರೂಪಕ್ಕೆ ಬಂದದ್ದು ಬಹಳ ಸಂತೋಷವಾಗಿದೆ ಎಂದರು ನಂತರ ಬ್ಯಾಂಕಿನ ಉಸ್ತುವಾರಿಗಳಾದ ರಾಜ ಮುಕುಂದ ನಾಯಕ್ ಅವರು ಮಾತನಾಡಿ ಸುರಪುರದಲ್ಲಿ ನಮ್ಮ ಸಮಾಜದ ಬ್ಯಾಂಕ್ ಆಗಬೇಕೆಂದು ಬಹುದಿನಗಳ ಬೇಡಿಕೆ ಇತ್ತು ಹಾಗಾಗಿ ನಮ್ಮ ಸಮಾಜದ ಉದ್ಯಮಿದಾರರಿಗೆ ಬಡವರಿಗೆ ಅನುಕೂಲವಾಗಲೆಂದೆ ಈ ಬ್ಯಾಂಕ್ ಅನ್ನು ಸ್ಥಾಪಿಸಲು ಬಹಳ ಮುತುವರ್ಜಿ ವಹಿಸಿದ್ದೇನೆ ಅದಕ್ಕೆಲ್ಲ ತಮ್ಮೆಲ್ಲ ಸಹಕಾರ ಇರಲಿ ಎಂದು ಮಾತನಾಡಿದರು,

ಈ ಸಂದರ್ಭದಲ್ಲಿ ಮುಖಂಡರಾದ ರಮೇಶ್ ದೊರೆ ಆಲ್ದಾಳ್ ರಾಜ ಅಪ್ಪರಾವ್ ನಾಯಕ್ ವೆಂಕಟೇಶ ಬೇಟೆಗಾರ ಸಣ್ಣ ದೇಸಾಯಿ. ದೇವರಗೋನಾಲ. ವಿಜಯಕುಮಾರ್ ಚಿಟ್ಟಿ ದೇವೇಂದ್ರಪ್ಪ ಚಿಕ್ಕನಹಳ್ಳಿ ಪರಮಣ್ಣ ಹುಜರತ್ತಿ ದೇವಣ್ಣ ಕಟ್ಟಿಮನಿ ಮಲ್ಲಯ್ಯ ದಿವಳಗುಡ್ಡ. ನಾಗಪ್ಪ ಚಿಕ್ಕನಹಳ್ಳಿ. ತಿಮ್ಮಯ್ಯ ಗುತ್ತೇದಾರ್ .ಬಲ ಭೀಮ ದಳವಾಯಿ .ಬಸವರಾಜ್ ಕೋತಿ ಗುಡ್ .ಬಸವರಾಜ ಹುಜರತ್ತಿ ಹನುಮಂತರಾಯ ಅಡ್ವಕೇಟ್ ಮಾನಪ್ಪ ಕೆರೆ ಕೋಡಿ ದೇವೇಂದ್ರಪ್ಪ ನಾಯ್ಕೋಡಿ ತೋಟಪ್ಪ ತೋಟಪ್ಪನವರು ಮುಂತಾದವರು ಇದ್ದರು.

ವರದಿ : ವಿಶ್ವನಾಥ ಡಾವಳಗಿ

error: Content is protected !!