ಭಾಲ್ಕಿ : ಪಟ್ಟಣದ ರೈಲ್ವೆ ನಿಲ್ದಾಣದ ಕ್ರಾಸ್ ಹತ್ತಿರ ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಸಾಗಾಟ ಮಾಡುತ್ತಿದ್ದ ಮಾಹಿತಿಯಂತೆ ಬಿ. ಅಮರೇಶ, ಪಿ.ಐ ರವರು ತಮ್ಮ ಅಧಿಕಾರಿ ಸಿಬ್ಬಂದಿ ರವರೊಂದಿಗೆ ಪತ್ರಾಂಕಿತ ಅಧಿಕಾರಿ ಮಲ್ಲಿಕಾರ್ಜುನ ವಡ್ಡನಕೇರೆ, ತಹಸೀಲ್ದಾರರ ಸಮಕ್ಷಮ ಆರೋಪಿತರ ಮೇಲೆ ದಾಳಿ ಮಾಡಿ ಅವನಿಂದ 14 ಕೆ.ಜಿ 695 ಗ್ರಾಂ ಗಾಂಜಾ ಅ:ಕಿ: 14,69,500=00 ರೂಪಾಯಿ ಮೌಲ್ಯದ ಗಾಂಜಾ ವಶ ಪಡಿಸಿಕೊಂಡು ಆರೋಪಿತರ ವಿರುದ್ದ ಪ್ರಕರಣ ದಾಖಲಿಸಿಕೊಂಡು ಕಾನೂನು ರೀತ್ಯ ಕ್ರಮ ಕೈಗೊಂಡಿದ್ದಾರೆ
ದಾಳಿಯಲ್ಲಿ ಶ್ರಮಿಸಿದ ಭಾಲ್ಕಿ ನಗರ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯಕ್ಕೆ ಬೀದರ್ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಪ್ರದೀಪ್ ಗುಂಟಿ ಶ್ಲಾಘಿಸಿದ್ದಾರೆ.
ವರದಿ : ಎಂಡಿ ಲೈಕ್ ಭಾಲ್ಕಿ