ಔರಾದ್ : ತಾಲೂಕಿನ ಅಲ್ಲಾಪೂರ ಗ್ರಾಮದ ಸ್ವಾಮಿ ಜನಾಂಗದ ಬಡ ರೈತ ವ್ಯಕ್ತಿಯ ಅಂತ್ಯ ಸಂಸ್ಕಾರಕ್ಕೆ ಹಣ ಇಲ್ಲದಿರುವದನ್ನು ತಿಳಿದಿರುವ ಗ್ರಾಮಸ್ಥರು ಹಣ ಸಂಗ್ರಹಿಸಿ ಅಂತ್ಯಸಂಸ್ಕಾರಕ್ಕೆ ವ್ಯವಸ್ಥೆ ಮಾಡಿದ್ದರು. ಇದಕ್ಕೆ ಔರಾದ್ ಪಿಎಸ್‌ಐ ವಾಸೀಮ್ ಪಟೇಲ್ ಸೇರಿದಂತೆ ಪೊಲೀಸರು ಕೂಡಾ ಹಣ ನೀಡುವ ಮೂಲಕ ಮಾನವೀಯತೆ ಮೆರೆದರು. ರಮೇಶ ಮನ್ಮಥಯ್ಯ ಸ್ವಾಮಿ (೫೦) ಎಂಬುವರು ಮಾರ್ಚ್ ೯ರಂದು ಭಾನುವಾರ ಮೃತಪಟ್ಟವರು. ಇವರು ತಮಗಿರುವ ಅರ್ಧ ಎಕರೆ ಜಮೀನಿನಲ್ಲಿ ಜೋಳ ಬೆಳೆ ಬೆಳದಿದ್ದು, ಕಾಡು ಹಂದಿಗಳ ಕಾಟದಿಂದ ಬೆಳೆ ನಾಶ ತಪ್ಪಿಸಲು ರಾತ್ರಿ ವೇಳೆ ಕಾವಲು ಮಾಡಲು ಹೋಗಿರುವಾಗ ಮೃತಪಟ್ಟಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಮೃತ ರಮೇಶ ತೀರಾ ಬಡವರಾಗಿದ್ದರು. ಅವರಿಗೆ ಪುತ್ರಿ ಸೇರಿದಂತೆ ಇಬ್ಬರು ಪುತ್ರರಿದ್ದಾರೆ. ಮೃತ ರಮೇಶ ಸ್ವಾಮಿ ಅವರ ಪತ್ನಿ ಕುಡಾ ೮ ವರ್ಷದ ಹಿಂದೆಯೇ ಮೃತಪಟ್ಟಿದ್ದಾರೆ. ಆದ್ದರಿಂದ ೮೫ ವರ್ಷದ ವೃದ್ಧೆ ತಾಯಿಯಾದ ಲಕ್ಷಿö್ಮÃಬಾಯಿ ಅವರೊಂದಿಗೆ ಗುಡಿಸಲು ಮನೆಯಲ್ಲಿ ಮಕ್ಕಳೊಂದಿಗೆ ವಾಸವಾಗಿದ್ದರು.
ಆದರೆ ಜಮೀನಿನಲ್ಲಿ ಬೆಳೆದಿರುವ ಜೋಳದ ಬೆಳೆ ಕಾವಲು ಮಾಡಲು ಹೋಗಿರುವಾಗ ರಮೇಶ ಸಾವನ್ನಪಿದ್ದಾರೆ. ಆದ್ದರಿಂದ ಮಕ್ಕಳು ಅನಾಥವಾಗಿದ್ದಾರೆ. ಸ್ಥಳಕ್ಕೆ ಪಿಎಸ್‌ಐ ವಾಸೀಮ್ ಪಟೇಲ್ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಮೃತನ ತಾಯಿಯೊಂದಿಗೆ ಮಾತನಾಡುವ ಮೂಲಕ ನಿಮ್ಮೊಂದಿಗೆ ನಾವಿದ್ದೇವೆ ಎಂದು ಧೈರ್ಯ ತುಂಬಿದರು. ಸ್ಥಳದಲ್ಲಿಯೇ ತಮ್ಮ ಜೇನಿನಲ್ಲಿರುವ ಹಣವನ್ನು ತೆಗೆದು ಮೃತನ ತಾಯಿಗೆ ನೀಡುವ ಮೂಲಕ ಗಮನ ಸೆಳೆದರು. ನಂತರ ಗ್ರಾಮಸ್ಥರು ಕುಡಾ ಹಣ ಸಂಗ್ರಹಿಸಿ ಅಂತ್ಯಸAಸ್ಕಾರ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಈ ಕುರಿತು ಔರಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಂದೆ-ತಾಯಿಯನ್ನು ಕಳೆದುಕೊಂಡಿರುವ ಮಕ್ಕಳು ಅನಾಥವಾಗಿದ್ದು, ಕುಟುಂಬ ತೀವ್ರ ಸಂಕಷ್ಟದಲ್ಲಿ ಸಿಲುಕಿದೆ ಕುಡಲೇ ಸರಕಾರ ಮೃತ ರೈತ ರಮೇಶ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಘಾಳರಡ್ಡಿ ಈರಡ್ಡಿ, ಭರತ ಪಾಟೀಲ್, ಸಂಜು ಪಾಟೀಲ್, ನಾರಾಯಣ ಪಾಟೀಲ್, ಸಿದ್ದಯ್ಯ ಸ್ವಾಮಿ, ಚಂದ್ರಕಾAತ ಎರನಾಳೆ, ಶಾಮರಾವ ಎರನಾಳೆ, ಸುಭಾಷ ಸಕ್ಕರೆ, ತುಕಾರಾಮ ಗೋಕಲೆ, ನಾರಾಯಣ ಪಾಟೀಲ್, ಪೀರಾರಡ್ಡಿ, ಝರೇಪ್ಪ ಎರನಾಳೆ ಸೇರಿದಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ವರದಿ:: ರಾಚಯ್ಯ ಸ್ವಾಮಿ ಔರಾದ್ (ಬಾ)