ಚಿತ್ತಾಪುರ; ಮಕ್ಕಳ ವಿದ್ಯಾಭ್ಯಾಸದ ಕಡೆ ಪಾಲಕರು ಮತ್ತು ಶಿಕ್ಷಕರು ಗಮನ ಹರಿಸಬೇಕು ಎಂದು ಮಾಜಿ ಸಂಸದ ಬಸವರಾಜ ಪಾಟೀಲ್ ಸೇಡಂ ಹೇಳಿದರು
ಪಟ್ಟಣದ ವರುಣ ನಗರದಲ್ಲಿ ಹಮ್ಮಿಕೊಂಡಿದ್ದ ದಿ. ಶ್ರೀ ಶೇಷಗಿರಿರಾವ್ ಎಸ್. ಕುಲಕರ್ಣಿ ಪ್ರಾಥಮಿಕ ಮತ್ತು ಪ್ರೌಢ ಆಂಗ್ಲ ಮಾಧ್ಯಮ ಶಾಲೆಯ ದಶಮಾನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪಾಲಕರಾದವರು ಮಕ್ಕಳಿಗೆ ಬರೀ ಶಾಲೆಗೆ ದಾಖಲಾತಿ ಮಾಡಿದರೆ ಸಾಲದು ಆಗಾಗ ಶಾಲೆಗೆ ಭೇಟಿ ನೀಡಿ ಮಕ್ಕಳ ಶಿಕ್ಷಣದ ಬಗ್ಗೆ ಶಿಕ್ಷಕರಿಂದ ಮಾಹಿತಿ ಪಡೆಯಬೇಕು ಹಾಗೂ ನಿತ್ಯ ಮಕ್ಕಳ ಕಡೆ ಗಮನ ಹರಿಸಬೇಕು ಎಂದು ಕಿವಿಮಾತು ಹೇಳಿದರು
ಹುಬ್ಬಳ್ಳಿಯ ಡಿವೈಎಸ್ಪಿ ಡಾ. ವಿನೋದ್ ಮುಕ್ತೇದಾರ ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಮಹತ್ವವಿದೆ. ಹೀಗಾಗಿ ಶಾಲೆಯಲ್ಲಿ ಶಿಕ್ಷಕರು, ಮನೆಯಲ್ಲಿ ಪಾಲಕರು ತಮ್ಮ ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಿದರೇ ಮಕ್ಕಳು ಖಂಡಿತವಾಗಿಯೂ ವಿದ್ಯಾವಂತರಾಗುತ್ತಾರೆ ಎಂದರು
ಶ್ರೀ ಗುರು ರಾಘವೇಂದ್ರ ಟ್ರಸ್ಟ್ ಅಧ್ಯಕ್ಷ ವೆಂಕಟೇಶ ಆರ್. ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು
ಇದೇ ವೆಳೆ ಶಾಲೆ ಪ್ರಾರಂಭ ವರ್ಷದಲ್ಲಿ ಸೇವೆ ಸಲ್ಲಿಸಿದ ಶಿಕ್ಷಕಿಯರಾದ ಭಾರತಿ ದಾಸ್, ಸವಿತಾ, ಸ್ನೇಹಾ ಎಮ್. ಪೋತರೆಡ್ಡಿ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು
ಎಸ್.ಎಸ್.ಕೆ ಪ್ರಾಥಮಿಕ ಮತ್ತು ಪ್ರೌಢ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಗುರು ವರುಣ ಕುಮಾರ ಕುಲಕರ್ಣಿ, ಪಿಎಸ್’ಐ ಶ್ರೀಶೈಲ್ ಅಂಬಾಟಿ, ಖ್ಯಾತ ಉದ್ದಿಮೇದಾರರಾದ ನಾಗಮ್ಮ ಗುಂಡಪ್ಪ ಸ್ವಾಟಿ ಸೇರಿದಂತೆ ಅನೇಕ ಮುಖಂಡರು, ಪಾಲಕರು, ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು
ಪ್ರತಿಭಾ ಗೌನಾಳ ಸಂಘಡಿಗರಿಂದ ಸಂಗೀತ ಗಾಯನ ನಡೆಯಿತು.
ಶ್ರೀ ಗುರು ರಾಘವೇಂದ್ರ ಟ್ತಸ್ಟ್ ಕಾರ್ಯದರ್ಶಿ ರವಿ ಎಸ್. ಕುಲಕರ್ಣಿ ನಿರೂಪಿಸಿ, ವಂದಿಸಿದರು
ವರದಿ ಮೊಹಮ್ಮದ್ ಅಲಿ ಚಿತ್ತಾಪುರ