ಔರಾದ್ : ಔರಾದ ಪಟ್ಟಣದಲ್ಲಿ ಶಾಂತಿಯುತ ವಾಗಿ ವಿವಿಧೆಡೆ ಹೋಳಿ ಹಬ್ಬ ಆಚರಿಸಿ ಪರಸ್ಪರ ಬಣ್ಣ ಹಚ್ಚಿ ಹೋಳಿ ಹಬ್ಬದ ಶುಭಾಶಯಗಳು ಕೋರಿ ಸಂಭ್ರಮಿಸಿದರು.
ವಿಶೇಷ ವಾಗಿ ಮಡ್ ಬಾತ್ ಸ್ನಾನ :
ಚರ್ಮ ಮತ್ತು ದೇಹ ನಿರ್ವಿಷಗೊಳಿಸುವಿಕೆ, ಕೀಲು ನೋವು ನಿವಾರಣೆ ಸೇರಿದಂತೆ ಅನೇಕ ರೋಗಗಳಿಗೆ ಮಣ್ಣಿನ ಸ್ನಾನ (ಮಡ್ ಬಾತ್) ದಿವ್ಯ ಔಷಧವಾಗಿದೆ ಎಂದು ಹಿರಿಯ ಸಾಹಿತಿ ನಾಗನಾಥ ಚಿಟಮೆ ಹೇಳಿದರು.
ತಾಲೂಕಿನ ಯನಗುಂದಾ ಗ್ರಾಮದ ನಾಟಿ ವೈದ್ಯ ಬಸವರಾಜ ಘುಳೆ ಅವರ ಜಮೀನಿನಲ್ಲಿ ಹೋಳಿ ನಿಮಿತ್ತ ಆಯೋಜಿಸಿದ ಮಡ್ ಬಾತ್ ಮಹತ್ವ ಕುರಿತು ಮಾತನಾಡಿದರು.
ನಮ್ಮ ಪೂರ್ವಜರು ಇಂತಹ ಅನೇಕ ನೈಸರ್ಗಿಕ ವಿಧಾನಗಳಿಂದಲೇ ಹಬ್ಬಗಳು ಆಚರಿಸುತ್ತಿದ್ದರು. ಇಂದು ಅನೇಕರು ಮಡ್ ಬಾತ್‌ನಂತಹ ನೈಸರ್ಗಿಕ ಚಿಕಿತ್ಸೆ ಪಡೆಯುತ್ತಿರುವುದು ಸಾಮಾನ್ಯವಾಗಿದೆ. ರಾಸಾಯನಿಕ ವಸ್ತುಗಳು ಬಳಸದೇ ಇಂತಹುದಕ್ಕೆ ನಾವು ಮೊತೆ ಹೋಗಬೇಕು ಎಂದರು.
ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಕಾಂತ ನಿರ್ಮಳೆ ಮಾತನಾಡಿ, ಪ್ರತಿ ಹಬ್ಬಗಳಿಗೂ ನಿರ್ದಿಷ್ಟ ಉದ್ದೇಶವಿದ್ದು, ಹೋಳಿಯು ಸಹ ನಮ್ಮಲ್ಲಿನ ಕೆಟ್ಟ ಗುಣಗಳಿಗೆ ಸುಡುವುದಾಗಿದೆ ಎಂದರು. ತಾಪಂ ಸಹಾಯಕ ನಿರ್ದೇಶಕ ಶಿವಕುಮಾರ್ ಘಾಟೆ ಮಡ್ ಬಾತ್ ಆಯೋಜನೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಯನಗುಂದಾ ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಮಲ್ಲಿಕಾರ್ಜುನ ಟಂಕಸಾಲೆ ಮಡ್ ಬಾತ್ ಸಂಯೋಜಿಸಿದರು. ಹಿರಿಯರಾದ ಶಿವರಾಜ ಶಟಕಾರ್, ಕಸಾಪ ಅಧ್ಯಕ್ಷ ಬಿಎಂ ಅಮರವಾಡಿ ಶರಣಪ್ಪ ನಾಗಲಗಿದ್ದಿ, ಶಾಲಿವಾನ ಉದಗಿರೆ, ಗುರುರಾಜ ಯಾದವ್, ಗಜಾನನ ಮಳ್ಳಾ, ವಿರೇಶ ಅಲಮಾಜೆ, ಬಾಲರಾಜ ಎಂಡೆ, ಅಂಬಾದಾಸ ನಳಗೆ, ಅಶೋಕ ಶೇಂಬೆಳ್ಳಿ, ಭೀಮಾಶಂಕರ ಜಿರ್ಗೆ, ರಾಜಕುಮಾರ ಬಿರಾದಾರ, ಅನೀಲ ಮೇತ್ರೆ, ಶಿವಕುಮಾರ ಮಜಗೆ,ಆನಂದ ಮಜಗೆ, ನಿಲೇಶ, ಸೇರಿದಂತೆ ಇನ್ನಿತರರಿದ್ದರು.
ವರದಿ : ರಾಚಯ್ಯ ಸ್ವಾಮಿ