ಕಲ್ಯಾಣ ಕರ್ನಾಟಕ ಜನತೆಯ ಅಭಿವೃದ್ಧಿಯ ಹೆಬ್ಬಾಗಿಲು ತೆರೆಯುವಂತೆ ಪ್ರಿಯಾಂಕ ಖರ್ಗೆ ರವರಿಗೆ ಮುಖ್ಯಮಂತ್ರಿ ಮಾಡಿ ಮಸೂದ ಸೌದಾಗರ ಆಗ್ರಹ

ಚಿಂಚೋಳಿ ಚಂದಾಪುರ ಪಟ್ಟಣದ ಕಾಂಗ್ರೆಸ್ ಹಿರಿಯ ಮುಖಂಡರಾದ ಮಸೂದ ಸೌದಾಗರ ಹಾಗೂ ಆರ್ ಗಣಪತ ರಾವ ಅವರು ಜಂಟಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ ಸದ್ಯದ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿ ಮುಖ್ಯಮಂತ್ರಿ ಬದಲಾವಣೆ ಮಾತು ಕೇಳುತ್ತಿದ್ದು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕುಟುಂಬಗಳಲ್ಲಿ ಒಂದಾದಂತಹ
ಡಾ. ಮಲ್ಲಿಕಾರ್ಜುನ ಖರ್ಗೆ ಅವರ ಕುಟುಂಬದ ನಿಷ್ಠಾವಂತ ಕಾಂಗ್ರೆಸ್ ನ್ ಈಗಿನ ಸಚಿವರು ಆದಂತಹ ಪ್ರಿಯಾಂಕ ಖರ್ಗೆ ಸದ್ಯದ ರಾಜಕೀಯ ಸನ್ನಿವೇಶದಲ್ಲಿ ಆಡಳಿತ ಚತುರ,ಅಭಿವೃದ್ಧಿಯ ಹರಿಕಾರ, ಹಾಗೂ ಎಲ್ಲರನ್ನು ಸಮಾನತೆಯಲ್ಲಿ ನೋಡಿಕೊಳ್ಳುವ, ವಾಕ್ಚಾತುರ್ಯವನ್ನು ಮೈಗೂಡಿಸಿಕೊಂಡಿರುವ ನಾಯಕರಾಗಿದ್ದು, ಸದ್ಯದ ರಾಜಕೀಯ ಸನ್ನಿವೇಶದಲ್ಲಿ ಮುಖ್ಯಮಂತ್ರಿ ಬದಲಾವಣೆ ಆದರೆ ನಮ್ಮ ಕಲ್ಯಾಣ ಕರ್ನಾಟಕದ ಅತ್ಯಂತ ಕ್ರಿಯಾಶೀಲ ಸಚಿವ, ತಮಗೆ ಕೊಟ್ಟಂತ ಖಾತೆಗಳನ್ನು ಅಚ್ಚುಕಟ್ಟಾಗಿ ಹಾಗೂ ಅಭಿವೃದ್ಧಿ ಯ ಉತ್ತಂಗ ಶಿಖರಕ್ಕೆ ಕೊಂಡೊಯ್ದ ಗರಿಮೆ ಇವರದ್ದಾಗಿದ್ದು ಪ್ರಿಯಾಂಕ ಖರ್ಗೆ ಅವರಿಗೆ ಮುಖ್ಯಮಂತ್ರಿ ಸ್ಥಾನ ಕೊಟ್ಟು ನಮ್ಮ ಕಲ್ಯಾಣ ಕರ್ನಾಟಕದ ಭಾಗದ ಜನರಿಗೆ ಅಭಿವೃದ್ಧಿಯ ಹೆಬ್ಬಾಗಿಲು ತೆರೆದಂತೆ ಆಗುತ್ತದೆ. ಸದಾ ಬಿಜೆಪಿ ಪಕ್ಷದ ನಾಯಕರುಗಳ ವೈಫಲ್ಯದ ಬಗ್ಗೆ ದಾಖಲೆ ಸಮೇತ ತೋರಿಸಿ, ಜನರ ಮುಂದೆ ಸತ್ಯವನ್ನು ಬಿಚ್ಚಿಟ್ಟಿದಂತಹ ಹಾಗೂ ಬಿಸಿ ಮುಟ್ಟಿಸುವಂತಹ ಕೆಲಸ ನಿರಂತರ ಮಾಡುತ್ತಿದ್ದು, ಇಂತಹ ಒಳ್ಳೆಯ ನಾಯಕರಿಗೆ ಕಾಂಗ್ರೆಸ್ ಹೈಕಮಾಂಡ್ ರು ಗಳಾದ ಡಾ. ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ ಗಾಂಧಿ, ಸುರಜೆವಾಲಾ, ಮೇನಕಾ ಗಾಂಧಿ, ನಮ್ಮ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಜನತೆಯ ಆಶೋತ್ತರಗಳಿಗೆ ವಂದನೆ ನೀಡುತ್ತಾರೆ ಎಂಬ ಆಶಯ ನಮಗೆ ಇದೆ ಎಂದು ಹೇಳಿದರು.

ವರದಿ : ರಾಜೇಂದ್ರ ಪ್ರಸಾದ್

error: Content is protected !!